Friday, October 18, 2024

ಪ್ರಾಯೋಗಿಕ ಆವೃತ್ತಿ

ಬಾಪೂಜಿ ಎಂದೂ ಅಂಗರಕ್ಷಕರನ್ನು ಪಡೆಯಲಿಲ್ಲ…

ಗಾಂಧೀಜಿಗೆ ಗೊತ್ತಿತ್ತು. ಆತ್ಮವನ್ನು ಕಳೆದುಕೊಂಡ ರಾಜಕಾರಣಿ ತನ್ನನ್ನು ರಕ್ಷಿಸಲು ಪೊಲೀಸು ಪಡೆಯನ್ನು ಹೊಂದಿರಬೇಕಾಗುತ್ತದೆ. ಬಾಪೂಜಿ ಎಂದೂ ಅಂಗರಕ್ಷಕರನ್ನು ಪಡೆಯಲಿಲ್ಲ. ಅಂಗರಕ್ಷಕರು ಕೇವಲ ದೇಹವನ್ನು ಮಾತ್ರ ರಕ್ಷಿಸುವುದಿಲ್ಲ. ನಿಮ್ಮ ಆತ್ಮವನ್ನು ಸೆರೆಮನೆಯಲ್ಲಿಟ್ಟು ನಾಶಗೊಳಿಸುತ್ತಾರೆ ಎಂಬುದು ಬಾಪೂಜಿಗೆ ಗೊತ್ತಿತ್ತು.

ಗಾಂಧೀಜಿಯ ಇಡೀ ಬದುಕು ಮನುಷ್ಯರನ್ನು ಬೆಸೆಯಲು, ಅವರನ್ನು ತಿಳಿಯಲು ಮೀಸಲಾಗಿತ್ತು.
ಇದು ಕೇವಲ ಪ್ರಶಂಸೆಯಲ್ಲ.

ಈ ಬಾಪೂವನ್ನು ಒಮ್ಮೆ ನೋಡಿದ, ಮಾತಾಡಿಸಿದ, ಅವರೊಂದಿಗೆ ವ್ಯವಹರಿಸಿದ ವ್ಯಕ್ತಿ ಮಾನವೀಯ, ಪ್ರೀತಿಪಾತ್ರ, ಪ್ರಾಮಾಣಿಕ ಮನುಷ್ಯನಾಗುತ್ತಿದ್ದ.

ಈ ನಾಡಿನ ಉದ್ದಗಲಕ್ಕೂ ಬಾಪೂಜಿಯ ಅಂಶಗಳು ಹರಡಿದ್ದನ್ನು ನೀವು ಗಮನಿಸಿರಬಹುದು. ಈತನ ಶಿಷ್ಯರು, ಈತನ ಬಗ್ಗೆ ಅರಿತವರು ಎಂದೂ ದ್ವೀಪಗಳಾಗುತ್ತಿರಲಿಲ್ಲ, ಭ್ರಷ್ಟರಾಗುತ್ತಿರಲಿಲ್ಲ, ಸ್ವಾರ್ಥಿಗಳಾಗುತ್ತಿರಲಿಲ್ಲ.

-ಪಿ. ಲಂಕೇಶ್, 24 ಮಾರ್ಚ್ 1985

(ಸೌಜನ್ಯ: ಟೀಕೆ ಟಿಪ್ಪಣಿಗಳು ಸಂಪುಟ 1 ಪುಸ್ತಕದಲ್ಲಿನ
ಇಲ್ಲಿ ಯಾವನೂ ದ್ವೀಪವಲ್ಲ ಲೇಖನ)

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!