Saturday, October 19, 2024

ಪ್ರಾಯೋಗಿಕ ಆವೃತ್ತಿ

ಮೈಸೂರು| ಮತ್ಸ್ಯಮೇಳಕ್ಕೆ ಕೃಷಿ ಸಚಿವರಿಂದ ಚಾಲನೆ

ದಸರಾ ಮಹೋತ್ಸವದ ಅಂಗವಾಗಿ ಮೈಸೂರು ನಗರದ ಜೆ.ಕೆ.ಮೈದಾನದಲ್ಲಿ ಮೀನುಗಾರಿಕೆ ಇಲಾಖೆ ಮತ್ತು ಜಿಲ್ಲಾಡಳಿತದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮತ್ಸ್ಯಮೇಳಕ್ಕೆ ಕೃಷಿ ಸಚಿವರಾದ ಎನ್. ಚೆಲುವನಾರಾಯಣ ಸ್ವಾಮಿ ವಿದ್ಯುಕ್ತ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರಿದ ಉಪಾಧ್ಯಕ್ಷರಾದ ಡಾ. ಪುಷ್ಪ ಅಮರ್ನಾಥ್, ಚಾಮರಾಜ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ, ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರು ಸೇರಿದಂತೆ ಇನ್ನಿತರರು ಅಧಿಕಾರಿಗಳು ಮತ್ಸ್ಯ ಮೇಳದ ಮಳಿಗೆಗಳನ್ನು ವಿಕ್ಷೀಸಿದರು.

ಅಪರೂಪದ ಮೀನುಗಳ ಪ್ರದರ್ಶನ

ಮೈಸೂರು ಭಾಗದಲ್ಲಿ ಈವರೆಗೆ ನೋಡಲು ಸಾಧ್ಯವಾಗದ ಅಪರೂಪದ ಮೀನುಗಳು, ಬಣ್ಣದ ಅಲಂಕಾರಿಕ ಮೀನುಗಳ ಪ್ರದರ್ಶನ, ಟನಲ್‌ ಅಕ್ವೇರಿಯಂ ಮೇಳದ ಮುಖ್ಯ ಆಕರ್ಷಣೆಯಾಗಿದೆ. ಮೇಳದಲ್ಲಿ ಗೋಲ್ಡ್ ಫಿಶ್, ಟೈಗರ್ ಬರ್ದ್, ಫೈಟರ್, ಆರೋವನ, ಫ್ಲವರ್ಹಾರ್ನ್, ಪ್ಲಾಟಿ, ವೈಟ್ ಮೊಲಿಸ್, ಗಪ್ಪಿ ಸ್ವರ್ಡ್ ಟೈಲ್, ಏಂಜಲ್ ಫಿಶ್, ಮೊಲಿಸ್, ಬರ್ಡ್ಸ್, ಮುಂತಾದ ಅಲಂಕಾರಿಕ ಹಾಗೂ ಲಾಭದಾಯಕ ಮೀನು ಸಾಕಾಣಿಕೆ ಕುರಿತ ಮಾಹಿತಿ ಸಾರ್ವಜನಿಕರ ಕಣ್ಮನ ಸೆಳೆಯಿತು.

ಕಪ್ಪೆಚಿಪ್ಪುಗಳನ್ನು ಸಂಗ್ರಹಿಸುವ ಮೂಲಕ ಕೃತಕ ಮುತ್ತುಗಳನ್ನು ಅಭಿವೃದ್ಧಿ ಪಡಿಸುವ ಸಿಹಿನೀರು ಮುತ್ತು ಉತ್ಪಾದನೆಯ ಕೃಷಿ ಬಗ್ಗೆ ವಿವರಣೆ ನೀಡುವದರ ಜೊತೆಗೆ ಮಣ್ಣಿನ ಏಡಿ ಸಾಕಾಣಿಕೆ ಹಾಗೂ ಅವುಗಳ ಸೇವನೆಯಿಂದ ಆಗುವ ಆರೋಗ್ಯದ ಲಾಭಗಳ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸುತ್ತವೆ.

ಈ ಬಾರಿ ಮತ್ಸ್ಯ ಮೇಳದಲ್ಲಿ ಸಿಹಿ ನೀರಿನ, ಉಪ್ಪು ನೀರಿನ ಮೀನುಗಳ ಅಕ್ವೇರಿಯಂ, ಪ್ಲಾಂಟೆಡ್‌ ಅಕ್ವೇರಿಯಂ ಸೇರಿದಂತೆ 35 ಕ್ಕೂ ಹೆಚ್ಚು ಅಕ್ವೇರಿಯಂಗಳಲ್ಲಿ ಮೀನುಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು ಎಲ್ಲರ ಗಮನ ಸೆಳೆಯುತ್ತಿವೆ.

ಅಮೆಜಾನ್‌ನಿಂದ ಪ್ಯಾರೇಟ್‌ ಫಿಶ್‌, ಸೌತ್‌ ಅಮೆರಿಕದಿಂದ ಜಿಯೋ ಪ್ಯಾರಿಸ್‌, ಅರೋನಾ, ಸ್ಟಿಂಗ್ರೆ, ಸಿಹಿ ನೀರಿನ ಮೀನುಗಳು, ಉಪ್ಪು ನೀರಿನ ಮೀನುಗಳು, ಜಲಸಸ್ಯಗಳಿಂದ ಅಲಂಕೃತವಾಗಿರುವ ಮೀನುಗಳು, ಪೆನರೋಡಿಯಂ, ಗ್ರ್ಯಾವಿಟಿ ಫಿಶ್‌ ಸೇರಿದಂತೆ ನಾನಾ ತಳಿಯ ಮೀನುಗಳನ್ನು ಮತ್ಸ್ಯ ಪ್ರಿಯರು ಕಣ್ತುಂಬಿಕೊಳ್ಳಬಹುದು.

ಮೀನು ಕೃಷಿ ಮಾಹಿತಿ

ಮತ್ಸ್ಯ ಮೇಳದಲ್ಲಿ ಕೇವಲ ಮೀನುಗಳನ್ನು ಅಷ್ಟೇ ಅಲ್ಲದೆ, ಇಲಾಖೆಯ ನಾನಾ ಯೋಜನೆಗಳು ಹಾಗೂ ಮೀನುಗಾರಿಕೆ ಕುರಿತು ಮಾಹಿತಿ ನೀಡುವ ಮಳಿಗೆಗಳನ್ನು ತೆರೆಯಲಾಗಿದೆ. ಜಮೀನು ಇಲ್ಲದವರು ಜಲಾಶಯಗಳಲ್ಲಿ ಪಂಜರ ಮೀನು ಕೃಷಿ ಕೈಗೊಳ್ಳವುದರ ಪೂರ್ಣ ವಿವರಣೆ ದೊರೆಯಲಿದೆ. ಅಕ್ವಾಫೋನಿಕ್ಸ್‌ ಕೃಷಿ ಸೇರಿದಂತೆ ಮೀನುಗಾರಿಕೆ ಕ್ಷೇತ್ರದ ಇತ್ತೀಚಿನ ತಾಂತ್ರಿಕತೆಗಳ ವಿವರಣೆ ನೀಡುವ ಮಳಿಗೆಗಳನ್ನು ಕಾಣಬಹುದು. ಅಲ್ಲದೆ, ಮೀನಿನ ಆಹಾರ ಮತ್ತು ಮೀನು ಕೃಷಿಗೆ ಬೇಕಾಗುವ ಇನ್ನಿತರ ವಸ್ತುಗಳ ವಿವರಣೆ ನೀಡುವ ಮಳಿಗೆಗೆಳನ್ನು ತೆರೆಯಲಾಗಿದೆ. ಇದಲ್ಲದೆ ಮೀನುಗಾರಿಕೆಗೆ ಪೂರಕವಾಗಿ ಪಶುಪಾಲನೆ, ಭತ್ತ ಬೆಳೆಯುವುದು, ಕೋಳಿ ಸಾಕಣೆ, ಮೀನು ಕೃಷಿಯಲ್ಲಿ ಅಳವಡಿಸಿಕೊಂಡಿರುವ ವಿಜ್ಞಾನ ಮತ್ತು ತಾಂತ್ರಿಕತೆಗಳು ಸೇರಿದಂತೆ ಸಮಗ್ರ ಮೀನು ಕೃಷಿ ಬಗ್ಗೆ ವಿವರಣೆ ಸಿಗುತ್ತದೆ.

ಅಲಂಕಾರಿಕ ಹಾಗೂ ಅತ್ಯಂತ ಅಪರೂಪದ ವಿದೇಶಿ ಮೀನುಗಳನ್ನು ಮತ್ಸ್ಯ ಪ್ರಿಯರು ಕಣ್ತುಂಬಿಕೊಳ್ಳಬಹುದು. ಅಲ್ಲದೆ ಮೀನು ಕೃಷಿ ಕೈಗೊಳ್ಳುವ ರೈತರಿಗೆ ಇಲಾಖೆಯಿಂದ ಕೈಗೊಂಡಿರುವ ಯೋಜನೆಗಳು, ತಂತ್ರಜ್ಞಾನಗಳು, ಅವಕಾಶಗಳ ಬಗ್ಗೆ ವಿವರಣೆ ನೀಡಲಾಗುವುದು.

ಮತ್ಸ್ಯ ಮೇಳದಲ್ಲಿ ವಿವಿಧ ಮೀನುಗಳನ್ನು ನೋಡಲು ಪ್ರವಾಸಿರು ಮುಗಿಬಿದ್ದರು. ವಿವಿಧ ಜಾತಿಯ, ಬಣ್ಣದ ಮೀನುಗಳನ್ನು ನೋಡಿ ಸೆಲ್ಫಿ ಕ್ಲಿಕ್ಕಿಸಿಕೊಂಡು ವಿಡಿಯೋ ತೆಗೆದು ಸಂಭ್ರಮಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!