ಕೆ.ಆರ್. ಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿ ಕೋಡಿ ಮಾರನಹಳ್ಳಿಯಲ್ಲಿ ಭರ್ತಿ ಕಬ್ಬಿನ ಲೋಡ್ ತುಂಬಿದ್ದ
ಟ್ರ್ಯಾಕ್ಟರ್ ಟ್ರಾಲಿ (ಟ್ರೈಲರ್) ತುಂಡಾಗಿ ಮಗುಚಿ ಬಿದ್ದ ಪರಿಣಾಮ ಸ್ಥಳದಲ್ಲಿ ಆಟವಾಡುತ್ತಿದ್ದ ಕಾರ್ಮಿಕ ದಂಪತಿಯ ರೋಷಿತ ಎಂಬ ಹೆಣ್ಣು ಮಗು ಸಾವಿಗೀಡಾಗಿದೆ.
ಟ್ರ್ಯಾಕ್ಟರ್ ನ ಟ್ರಾಲಿಗೆ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ತುಂಬಿಕೊಂಡು ತೆರಳುವಾಗ, ಟ್ರಾಲಿ ತುಂಡಾಗಿ ಮಗುಚಿ ಬಿದ್ದಿದೆ, ಪರಿಣಾಮ ರಸ್ತೆ ಬದಿಯಲ್ಲಿ ಆಟವಾಡುತ್ತಿದ್ದ ಮಗು ಸ್ಥಳದಲ್ಲಿಯೇ ಪ್ರಾಣಬಿಟ್ಟಿದೆ.
ಹೊರ ರಾಜ್ಯದಿಂದ ಕಬ್ಬು ಕಟಾವು ಕೆಲಸಕ್ಕೆ ಬಂದಿದ್ದ ಕೂಲಿ ಕಾರ್ಮಿಕರ ಮಗು ರಸ್ತೆ ಬದಿಯಲ್ಲಿ ಆಟವಾಡುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಜೆಸಿಬಿ ಯಂತ್ರ ತರಿಸಿ ಟ್ರೈಲರ್ ಮೇಲೆತ್ತಿ ಮಗುವಿನ ಶವ ಹೊರ ತೆಗೆಯಲಾಗಿದ್ದು,ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.