Friday, November 20, 2026

ಪ್ರಾಯೋಗಿಕ ಆವೃತ್ತಿ

ಭಾರತವನ್ನು ಅರ್ಥೈಸಿಕೊಳ್ಳಲು ಗಾಂಧೀ ಅಧ್ಯಯನ ಅವಶ್ಯಕ: ವೂಡೇ ಪಿ. ಕೃಷ್ಣ

ಭಾರತದ ಆತ್ಮವನ್ನು ಅರ್ಥೈಸಿಕೊಳ್ಳಲು ಹಾಗೂ ಭಾರತವನ್ನು ಸರಿಯಾಗಿ ಅರಿಯಲು ಮಹಾತ್ಮ ಗಾಂಧೀಜಿಯವರನ್ನು ಅಧ್ಯಯನ ಮಾಡಬೇಕೆಂದು ಶಿಕ್ಷಣ ತಜ್ಞ ವೂಡೇ ಪಿ. ಕೃಷ್ಣ ಅಭಿಪ್ರಾಯಪಟ್ಟರು.

ಮಂಡ್ಯನಗರದ ಗಾಂಧಿಭವನದಲ್ಲಿ ಚಿತ್ರಕೂಟದ ವತಿಯಿಂದ ಭಾನುವಾರ ಸಂಜೆ ನಡೆದ ಹಾಡು, ಹಸೆ, ಕವಿತೆಗಳ ಜತೆ ಮಾತುಕತೆ ಎಂಬ ವಿಶಿಷ್ಟ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತವನ್ನು ಬಿಟ್ಟು ಗಾಂಧಿ ಇಲ್ಲ, ಗಾಂಧಿಯನ್ನು ಬಿಟ್ಟು ಭಾರತವಿಲ್ಲ, ಹಾಗಾಗಿ ದೇಶವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಗಾಂಧಿಯನ್ನು ಅರ್ಥ ಮಾಡಿಕೊಳ್ಳಬೇಕು, ಗಾಂಧಿಯವರು ಪ್ರಾತಃ ಸ್ಮರಣೀಯರು, ಮಹಾನ್ ಚೇತನ, ಅವರು ತಮ್ಮ ಜೀವತಾವಧಿಯಲ್ಲಿ ಯಾರನ್ನು ವೈಯಕ್ತಿಕವಾಗಿ ದ್ವೇಷ ಮಾಡಲಿಲ್ಲ, ಬ್ರಿಟಿಷರ ವಿರುದ್ದ 30 ವರ್ಷಗಳ ಕಾಲ ಹೋರಾಟ ನಡೆಸಿದರು, ಅವರನ್ನು ವೈಯಕ್ತಿಕವಾಗಿ ದ್ವೇಷಿಸಲಿಲ್ಲ, ಅದು ಅವರ ದೊಡ್ಡ ಗುಣ, ಇದಕ್ಕೆ ಕಾರಣ ಭಾರತ ಅಧ್ಯಾತ್ಮಿಕತೆ ಎಂದು ಸ್ಮರಿಸಿದರು.

ಹಿಂದೆ ಸಿದ್ದಗಂಗಾ ಸ್ವಾಮೀಜಿಯವರು ಹೇಳಿದಂತೆ ನಮಗೆ ಗಾಂಧಿಯ ಮನಸ್ಸಿರುವ ಲಕ್ಷೋಪಲಕ್ಷ  ಜನತೆ ಬೇಕಾಗಿದ್ದಾರೆ. ಹಣ ಮಾಡುವ ಬಿಲ್ ಗೇಟ್ಸ್ ಗಳಲ್ಲ, ಹಾಗಾಗಿ ಸಮಾಜದಲ್ಲಿ ಗಾಂಧಿ ಮನಸ್ಸಿನ ಯುವಕರನ್ನು ತಯಾರು ಮಾಡುವ ಕೆಲಸವಾಗಬೇಕಿದೆ ಎಂದರು.

ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಗಾಂಧಿಯವರ ಕುರಿತು ಅವಹೇಳನಕಾರಿಯಾದ ಬರಹ, ಪೋಸ್ಟ್ ಗಳನ್ನು ಕೆಲವು ಕಿಡಿಗೇಡಿಗಳು ಹರಿಯ ಬಿಡುತ್ತಿದ್ದಾರೆ, ಇದಕ್ಕೆ ನಿಯಂತ್ರಣ ಹೇರುವ ಕೆಲಸವನ್ನು ಸರ್ಕಾರಗಳು ಮಾಡಬೇಕಾಗಿದೆ ಎಂದು ಒತ್ತಾಯಿಸಿದರು.

ಮುಖ್ಯ ಅತಿಥಿಗಳಾಗಿ ರಂಗಾಯಣ ಮಾಜಿ ನಿರ್ದೇಶಕ ಸಿ. ಬಸವಲಿಂಗಯ್ಯ, ಲಂಕೇಶ್ ಪತ್ರಿಕೆ ಅಂಕಣಕಾರ ಬಿ. ಚಂದ್ರೇಗೌಡ, ನಾಟಕ ಅಕಾಡೆಮಿ ಮಾಜಿ ಸದಸ್ಯ ಮಲ್ಲಿಕಾರ್ಜುನ ಮಹಾಮನೆ ಭಾಗವಹಿದ್ದರು.

ಸಾಮಾಜಿಕ ಚಿಂತಕ ಹೆಚ್.ಕೆ. ವಿವೇಕಾನಂದ, ಈ ದಿನ.ಕಾಮ್ ವಿಭಾಗ ಮುಖ್ಯಸ್ಥ ಡಾ.ಬಿ.ಸಿ. ಬಸವರಾಜು ಹಾಗೂ ಸಹ ಪ್ರಾಧ್ಯಾಪಕರಾದ ಡಾ. ಶಿಲ್ಪಶ್ರೀ ಹರವು ವಿಶೇಷ ಉಪನ್ಯಾಸ ನೀಡಿದರು. ಸಾಮಾಜಿಕ ಚಿಂತಕ ಹರವು ದೇವೇಗೌಡ ಕಾರ್ಯಕ್ರಮದ ನಿರೂಪಣೆ ಮಾಡಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ