Friday, October 18, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕೇರಳದ ಲಾಟರಿ ಖರೀದಿಸಿ ₹25 ಕೋಟಿ ಬಹುಮಾನ ಗೆದ್ದ ಪಾಂಡವಪುರದ ಅಲ್ತಾಫ್

ಮಂಡ್ಯ ಜಿಲ್ಲೆಯ ಪಾಂಡವಪುರದ ಬೈಕ್ ಮೆಕ್ಯಾನಿಕ್ ಅಲ್ತಾಫ್‌ಗೆ ಕೇರಳದ ಓಣಂ ಹಬ್ಬದ 25 ಕೋಟಿ ರೂ. ಮೌಲ್ಯದ ಲಾಟರಿ ಹೊಡೆದಿದೆ. ಪರಿಚಯಸ್ತರ ಮೂಲಕ ಖರೀದಿಸಿದ್ದ ಟಿಕೆಟ್ ಇವರ ಬದುಕನ್ನೇ ಬದಲಿಸಿದೆ.

ಅಲ್ತಾಫ್ ಪಾಷಾ ಅವರು ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣ ನಿವಾಸಿ ಆಗಿದ್ದು, ವೃತ್ತಿಯಲ್ಲಿ ಬೈಕ್ ಮೆಕಾನಿಕ್ ಆಗಿದ್ದಾರೆ. ಮೊನ್ನೆ ‌ಪರಿಚಯಸ್ತರ ಮೂಲಕ ಕೇರಳ ರಾಜ್ಯದ ಲಾಟರಿ ಟಿಕೆಟ್ ಖರೀದಿ ಮಾಡಿದ್ದರು. ಇದೀಗ ಅಲ್ತಾಫ್ ಪಾಷಾ ಅವರು 25 ಕೋಟಿ ರೂ. ಬಹುಮಾನ ‌ಗೆದ್ದಿದ್ದಾರೆ.

ಇನ್ನು ತಾನು ಖರೀದಿ ಮಾಡಿದ ಲಾಟರಿ ಟಿಕೆಟ್‌ಗೆ ಬಹುಮಾನ ಬಂದಿರೊ‌ ವಿಚಾರ ತಿಳಿಯುತ್ತಿದ್ದಂತೆ ಅಲ್ತಾಫ್ ಕೇರಳಕ್ಕೆ ಹೊರಟಿದ್ದಾರೆ. ಇದೀಗ ಕೇರಳಕ್ಕೆ ‌ಪ್ರಯಾಣ ಮಾಡಿದ್ದು, ಲಾಟರಿ ಹಣ ಪಡೆಯುವ ಪ್ರಕ್ರಿಯೆಯನ್ನು ಪೂರೈಸಿ ಹಣವನ್ನು ಪಡೆದುಕೊಳ್ಳಲಿದ್ದಾರೆ. ಇದೀಗ ರಾಜ್ಯದಲ್ಲಿ ದಸರಾ ಹಬ್ಬದ ಆಚರಣೆಯಲ್ಲಿದ್ದ ಅಲ್ತಾಫ್‌ಗೆ ದೊಡ್ಡ ಉಡುಗೊರೆಯೇ ಸಿಕ್ಕಂತಾಗಿದೆ.

ಈ ವರ್ಷದ ತಿರುವೋಣಂ ಬಂಪರ್ ಡ್ರಾ ನಡೆಯಿತು. 71 ಲಕ್ಷ ಟಿಕೆಟ್‌ಗಳು ಮಾರಾಟವಾದ ಓಣಂ ಬಂಪರ್‌ನಲ್ಲಿ 25 ಕೋಟಿ ಮೊದಲ ಬಹುಮಾನ ಗೆದ್ದ ಅದೃಷ್ಟವಂತರು ಯಾರೆಂಬ ಪ್ರಶ್ನೆಗೆ ಮನೆ ಮಾಡಿತ್ತು. ಅದು ಕರ್ನಾಟಕದ ಪಾಂಡವಪುರದ ಮೂಲದ ಅಲ್ತಾಫ್ ಎಂಬುವವರ ಪಾಲಾಗಿದೆ.

25 ಕೋಟಿ ಲಾಟರಿ ಹೊಡೆದವರಿಗೆ ಆ ಮೊತ್ತ ಪೂರ್ತಿ ಕೈಗೆ ಸಿಗುವುದಿಲ್ಲ. ತೆರಿಗೆ ಕಡಿತಗೊಳಿಸಿದ ಮೊತ್ತವನ್ನು ವಿಜೇತರಿಗೆ ನೀಡಲಾಗುತ್ತದೆ. ಓಣಂ ಬಂಪರ್ ವಿಷಯದಲ್ಲಿ, 25 ಕೋಟಿಯಲ್ಲಿ 12 ಕೋಟಿ ರೂ.ಗಳು ಮಾತ್ರ ಲಾಟರಿ ಟಿಕೆಟ್ ಹಾರಿದ ಅದೃಷ್ಟವಂತರಿಗೆ ಸಿಗುತ್ತದೆ.

25 ಕೋಟಿಯಲ್ಲಿ ಸಿಗುವುದೆಷ್ಟು 

ತಿರುವೋಣಂ ಬಂಪರ್ ಬಹುಮಾನ ಮೊತ್ತ: 25 ಕೋಟಿ ರೂ.
ಏಜೆನ್ಸಿ ಕಮಿಷನ್ 10 ಶೇಕಡಾ: 2.5 ಕೋಟಿ ರೂ.
ಬಹುಮಾನ ತೆರಿಗೆ 30 ಶೇಕಡಾ: 6.75 ಕೋಟಿ ರೂ.
ಮೊದಲ ಬಹುಮಾನ ಗೆದ್ದ ವ್ಯಕ್ತಿಯ ಖಾತೆಗೆ: 15.75 ಕೋಟಿ ರೂ.
ತೆರಿಗೆ ಮೊತ್ತದ ಮೇಲಿನ ಸರ್ಚಾರ್ಜ್ 37 ಶೇಕಡಾ: 2.49 ಕೋಟಿ ರೂ.
ಆರೋಗ್ಯ, ಶಿಕ್ಷಣ ಸೆಸ್ 4 ಶೇಕಡಾ: 36.9 ಲಕ್ಷ ರೂ.
ಖಾತೆಗೆ ಬಂದ ಮೊತ್ತದ ಮೇಲಿನ ಒಟ್ಟು ತೆರಿಗೆ: 2.85 ಕೋಟಿ ರೂ.

ಎಲ್ಲಾ ತೆರಿಗೆಗಳನ್ನು ಕಡಿತಗೊಳಿಸಿದ ನಂತರ ಅದೃಷ್ಟವಂತರಿಗೆ ಸಿಗುವ ಮೊತ್ತ: 12,88,26,000 (12.8 ಕೋಟಿ)ಗಳಾಗಿವೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!