Wednesday, October 23, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿ-ಜೆಡಿಎಸ್ ಮೈತ್ರಿಗೆ ಬಿಗ್ ಶಾಕ್ | ಅಧಿಕೃತವಾಗಿ ಕಾಂಗ್ರೆಸ್ ಸೇರಿದ ಯೋಗೇಶ್ವರ್

ಬಿಜೆಪಿ ನಾಯಕ ಸಿಪಿ ಯೋಗೇಶ್ವರ್​​ ಅವರು ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತೇನೆಂದು ಘೋಷಿಸಿದ್ದರು. ಆದರೂ ಸಹ ಬಿಜೆಪಿ ನಾಯಕರ ಸಲಹೆ ಮೇರೆಗೆ ಎನ್​ಡಿಎ ಟಿಕೆಟ್​ ಸಿಗಬಹುದು ಎಂದು ಕಾದು ನೋಡುವ ತಂತ್ರವನ್ನು ಅನುಸರಿಸಿದರು. ಆದರೆ, ಟಿಕೆಟ್ ಸಿಗೋದು ಡೌಟ್ ಆದ ಕಾರಣ ಸಿಪಿವೈ ಡಿಕೆ ಶಿವಕುಮಾರ್​ ಭೇಟಿ ಮಾಡಿ ಕಾಂಗ್ರೆಸ್ ಸೇರ್ಪಡೆಯಾಗಿದ್ಧಾರೆ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸತತ ಸೋಲನ್ನು ಕಂಡಿರುವ ಸಿಪಿ ಯೋಗೇಶ್ವರ್ ಈ ಬಾರಿ ಸುಲಭವಾಗಿ ಗೆಲ್ಲಬಹುದು ಟಿಕೆಟ್ ಬಿಜೆಪಿಯಿಂದಾನೆ ಸಿಗುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಈ ಕ್ಷೇತ್ರ ಕುಮಾರಸ್ವಾಮಿ ಅವರದ್ದು ಅವರೇ ಡಿಸೈಡ್ ಮಾಡ್ತಾರೆ ಎಂಬ ಮಾತುಗಳು ಬಿಜೆಪಿ ಹಿರಿಯ ನಾಯಕರ ಬಾಯಲ್ಲೇ ಬಂತು. ಜೊತೆಗೆ ಜೆಡಿಎಸ್ ಚಿನ್ನೆಯಿಂದ ನಿಲ್ಲಬೇಕು ಎಂಬ HDK ಷರತ್ತು ಹಾಕಿದ್ದರು. ಆದರೆ ಇದಕ್ಕೆಲ್ಲ ಒಪ್ಪದ ಯೋಗೇಶ್ವರ್ ಪರಿಷತ್ ಸದಸ್ಯಕ್ಕೆ ರಾಜಿನಾಮೆ ಕೊಟ್ಟು ಸ್ವತಂತ್ರವಾಗಿ ಸ್ಪರ್ಧಿಸಲು ಮುಂದಾಗಿದ್ದರು.

ಆದರೆ ಕೆಲವು ಹಿರಿಯ ಬಿಜೆಪಿ ನಾಯಕರ ಮಾತಿಗೆ ಮಣಿದು ಕಾದು ನೋಡು ತಂತ್ರ ಕೂಡ ಮಾಡಿದ್ದರು. ಕಡೆ ಸಮಯದಲ್ಲಿ ಕುಮಾರಸ್ವಾಮಿ ಕ್ಷೇತ್ರವನ್ನು ಬಿಟ್ಟುಕೊಡಲು ಒಪ್ಪಿಲ್ಲ. ಕಾರಣ ರಾಮನಗರ ಜಿಲ್ಲೆ ಎಂದರೆ ಜೆಡಿಎಸ್ ಎಂಬ ಅರ್ಥ ಇತ್ತು ಒಂದು ಕಾಲದಲ್ಲಿ, ಆದರೆ ಈಗ ಇಡೀ ಜಿಲ್ಲೆಯಲ್ಲಿ ಎಲ್ಲಿಯೂ ಜೆಡಿಎಸ್ ಶಾಸಕರೇ ಇಲ್ಲದಂತಾಗಿದೆ. ಈ ಕ್ಷೇತ್ರವನ್ನು ಜೆಡಿಎಸ್ ಬಿಟ್ಟರೆ ಜಿಲ್ಲೆಯ ಹಿಡಿತ ತಪ್ಪಬಹುದು ಎಂದು ತಮ್ಮಲ್ಲೇ ಈ ಕ್ಷೇತ್ರವನ್ನು ಉಳಿಸಿಕೊಂಡಿದ್ದು ಸಿಪಿವೈ ಆಕ್ರೋಶಕ್ಕೆ ಕಾರಣವಾಗಿದೆ.

NDA ಮೈತ್ರಿ ಧರ್ಮವನ್ನು ಉಳಿಸಿಕೊಳ್ಳದ ಕುಮಾರಸ್ವಾಮಿ ನಡೆಯನ್ನು ತೀವ್ರವಾಗಿ ವಿರೋಧಿಸಿದ ಸಿಪಿ ಯೋಗೇಶ್ವರ್ ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಇಂದು ಸಂಜೆ ಅಥವಾ ನಾಳೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸಿಪಿವೈ ಅವರನ್ನೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಣೆ ಮಾಡಲಿದ್ದಾರೆ.

ಈ ಮೂಲಕ ಕಳೆದ ಬಾರಿ ಸರ್ಕಾರ ಉರುಳಿಸಿ ಬಿಜೆಪಿ ಅಧಿಕಾರಕ್ಕೆ ಬರಲು ಪ್ರಮುಖ ಕಾರಣಕರ್ತರಲ್ಲಿ ಒಬ್ಬರಾದ ಸಿಪಿ ಯೋಗೇಶ್ವರ್ ಅವರು ಅಧಿಕೃತವಾಗಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗುತ್ತಿದ್ದಾರೆ. ಪಕ್ಷಕ್ಕಾಗಿ ಶ್ರಮಿಸಿದ ಸಿಪಿವೈಯನ್ನು ಬಿಜೆಪಿ ಕೈಬಿಟ್ಟಿದೆ. ಈಗ NDA ಮೈತ್ರಿಕೂಟದ ವಿರುದ್ಧ ಚುನಾವಣೆ ಎದುರಿಸಲು ಭರ್ಜರಿ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಇದರ ಜೊತೆ ಈಗ ಡಿಕೆ ಬ್ರದರ್ಸ್ ಅವರ ಸಂಪೂರ್ಣ ಸಪೋರ್ಟ್ ಇದ್ದು ಮತ್ತೆ ಚನ್ನಪಟ್ಟಣದಲ್ಲಿ ಕೈ ಮೇಲಾಗುವ ಸಾಧ್ಯತೆ ದಟ್ಟವಾಗಿದೆ.

ಸಿ.ಪಿ ಯೋಗೇಶ್ವರ್ ಅವರು ಇಂದು ಬೆಳಗ್ಗೆ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!