Saturday, October 26, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ | ಲಕ್ಷ ಕಲ್ಪವೃಕ್ಷ ಮಹಾಮೇಳ; ಅ.28ರಂದು ಶಾಲಾ ಮಕ್ಕಳಿಗೆ ತೆಂಗಿನ ಸಸಿ ವಿತರಣೆ

ಲಕ್ಷ ಕಲ್ಪವೃಕ್ಷ ಮಹಾಮೇಳ ಯೋಜನೆಯಡಿ ಸಾವಯವ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ  ಬೆಂಗಳೂರಿನ ರೋಟರಿ ಸಂಸ್ಥೆ ಹಾಗೂ ಸಂಪೂರ್ಣ ಸಾವಯವ ಕೃಷಿಕರ ಸಂಘದ ಇವರ ಸಹಯೋಗದೊಂದಿಗೆ ಅ.28ರಂದು ಸರ್ಕಾರಿ ಶಾಲಾ ಮಕ್ಕಳಿಗೆ ತೆಂಗಿನ ಸಸಿ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಪೂರ್ಣ ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಎಂ.ಎನ್.ಮಹೇಶ್ ಕುಮಾರ್ ತಿಳಿಸಿದರು.

ಮಳವಳ್ಳಿ ಪಟ್ಟಣದ ಸಾವಯವ ಅಂಗಡಿ ಮಳಿಗೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಹಂತದಲ್ಲಿಯೇ ಸಾವಯವ ಕೃಷಿಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮಳವಳ್ಳಿ ತಾಲ್ಲೂಕಿನ ರಾವಣಿ, ಆಲದಹಳ್ಳಿ, ಮಾರಗೌಡನಹಳ್ಳಿ ಮತ್ತು ಬ್ಯಾಡರಹಳ್ಳಿ ಸರ್ಕಾರಿ ಪ್ರೌಢಶಾಲೆಯ ಸುಮಾರು 1000 ಮಕ್ಕಳಿಗೆ ಉಚಿತವಾಗಿ 2000 ತೆಂಗಿನ ಸಸಿಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು.

ಸೋಮವಾರ ಬೆಳಿಗ್ಗೆ 10ಗಂಟೆಗೆ ದೊಡ್ಡಬೂವಳ್ಳಿ ಶಾಲೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರೋಟರಿಯ ಬೆಂಗಳೂರು ಬ್ರಿಗೇಡ್, ರೋಟರಿ ಇಂದಿರಾನಗರ, ರೋಟರಿ ಪ್ಲಾಟಿನಂ ಸಿಟಿ, ರೋಟರಿ ಸ್ಕೈವೇ, ರೋಟರಿ ಯಲಹಂಕ ಸಂಸ್ಥೆಗಳು ಸಹಕಾರ ನೀಡಲಿವೆ, ರೋಟರಿಯ ಗೌವರ್ನರ್‌ಗಳಾದ ಎನ್.ಎಸ್.ಮಹದೇವಪ್ರಸಾದ್, ಬಿ.ಕೆ.ಕೃಷ್ಣಮೂರ್ತಿ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9448273445 ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಚಿಕ್ಕಣ್ಣ, ನಿರ್ದೇಶಕರಾದ ಡಾ.ಕಪನಿಗೌಡ, ಶಿವಕುಮಾರ್, ಕೇಶವಮೂರ್ತಿ ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!