Monday, November 23, 2026

ಪ್ರಾಯೋಗಿಕ ಆವೃತ್ತಿ

ಗೋವಾದಲ್ಲಿ ಕುಳಿತು ಮಂಡ್ಯದಲ್ಲಿ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದಾರೆ ; ಸಿ.ಕುಮಾರಿ

ಮಂಡ್ಯದಲ್ಲಿ ಬೆಟ್ಟಿಂಗ್ ದಂಧೆ ಮಿತಿ ಮೀರಿದೆ, ದಂಧೆ ನಡೆಸುವವರು ಗೋವಾದಲ್ಲಿ ಅಥವಾಗ ದೇಶದ ಯಾವುದೋ ಮೂಲೆಯಲ್ಲಿ ಕುಳಿತು, ಆಪ್ ಗಳ ಮೂಲಕ ದಂಧೆ ನಡೆಸುತ್ತಿದ್ಧಾರೆ. ಮಂಡ್ಯದ ಗದ್ದೆ ಬಯಲುಗಳಲ್ಲಿ ಯುವಕರನ್ನು ಕರೆದು ಕೊಂಡು ಹೋಗಿ ದಂಧೆ ನಡೆಸುತ್ತಿದ್ಧಾರೆ, ಆದರೆ ಇದನ್ನು ಕಂಡರೂ ಕಾಣದಂತೆ ಮಂಡ್ಯ ಪೊಲೀಸ್ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಸಿಐಟಿಯು ಮುಖಂಡರಾದ ಸಿ.ಕುಮಾರಿ ಗಂಭೀರ ಆರೋಪ ಮಾಡಿದರು.

ಬೆಟ್ಟಿಂಗ್ ದಂಧೆ ವಿರುದ್ದ ಮಂಡ್ಯದಲ್ಲಿ ಪ್ರತಿಭಟನೆ ನಡೆದ ಸಂದರ್ಭದಲ್ಲಿ ಮಾತನಾಡಿದ ಅವರು, ಕೆಲವರ ಅನುಕೂಲಕ್ಕಾಗಿ ಹಲವರನ್ನು ಜೀವಂತ ಸಮಾಧಿ ಮಾಡುವ ಕೆಲಸವು ಬೆಟ್ಟಿಂಗ್ ನಲ್ಲಿ ನಡೆಯುತ್ತಿದೆ ಇತ್ತೀಚೇಗೆ  ಬೆಟ್ಟಿಂಗ್ ದಂಧೆಯಿಂದ 2 ಕೋಟಿ ರೂಪಾಯಿ ಕಳೆದುಕೊಂಡ ಸುನೀಲ್ ಕುಮಾರ್ ಎಂಬ ಯುವಕ ಬೆಟ್ಟಿಂಗ್ ದಂಧೆಕೋರರ ವಿರುದ್ದ ದೂರು ನೀಡಿ, 2 ವರ್ಷಗಳಾಗಿವೆ, ಆದರೆ ದಂಧೆ ನಡೆಸುವವರ ವಿರುದ್ದ ಯಾವುದೇ ಕ್ರಮವಾಗಿಲ್ಲ, ಆತ ಹಣವುಳ್ಳವನಾಗಿದ್ದು, ಆತನ ವಿರುದ್ದ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದರು.

ಇನ್ನೂ 15 ದಿನಗಳ ಒಳಗಾಗಿ ಬೆಟ್ಟಿಂಗ್ ದಂಧೆಯನ್ನು ನಿಯಂತ್ರಿಸುವುದಾಗಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭರವಸೆ ನೀಡಿದ್ದಾರೆ, ಅವರು ಹೇಳಿದಂತೆ ನಡೆದುಕೊಂಡು ತಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು, ಇಲ್ಲವಾದರೇ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ