ಮಂಡ್ಯ ನಗರದ ಕಲ್ಲಹಳ್ಳಿ ಹಾಗೂ ವಿ.ವಿ.ನಗರ ನಿವಾಸಿಗಳ ಆರಾಧ್ಯದೇವತೆ ಶ್ರೀ ಮಂಚಮ್ಮ ದೇವಿಯ ನೂತನ ದೇವಾಲಯದ ಲೋಕಾರ್ಪಣೆ ಸಮಾರಂಭ ನ.೭ ಮತ್ತು ೮ರಂದು ನಡೆಯಲಿದೆ ಎಂದು ದೇವಸ್ಥಾನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಆನಂದ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ೮೦ ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ದೇವಾಲಯಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಡೆ ಅವರು ಎರಡೂವರೆ ಲಕ್ಷ ರೂ.ಗಳ ಅನುದಾನ ನೀಡಿದ್ದು, ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ನೂತನ ದೇವಾಲಯ ನಿರ್ಮಾಣವಾಗಿದೆ ಎಂದು ಹೇಳಿದರು.
ನ.೭ರಂದು ಬೆಳಿಗ್ಗೆ ೭.೩೦ಕ್ಕೆ ಗ್ರಾಮದ ಕೊಡಮಕ್ಕಳು ಹಾಗೂ ಮುತ್ತೈದೆಯರು ಗಂಗಾ ಪೂಜೆ ನೆರವೇರಿಸಿ, ಮೀಸಲು ನೀರು ತಂದು ಗೋಪೂಜೆ ಹಾಗೂ ವೀರಭದ್ರ ಕುಣಿತ ಸಮೇತ ಮಂಗಳವಾದ್ಯದೊಂದಿಗೆ ಧಾರ್ಮಿಕ ವಿಧಿ-ವಿಧಾನಗಳು ಮತ್ತು ಪೂಜಾ ಕೈಂಕರ್ಯಗಳು ಆರಂಭವಾಗಲಿದ್ದು, ಸಂಜೆ ೬.೩೦ಕ್ಕೆ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸುತ್ತೂರು ಸಮೀಪದ ತುಮ್ಮನೇರಳೆ ಗ್ರಾಮದ ಶ್ರೀ ನಾಗಲಿಂಗೇಶ್ವರಸ್ವಾಮಿ, ಕಲ್ಲಹಳ್ಳಿ ಗ್ರಾಮದ ಶ್ರೀ ಮಾರಮ್ಮದೇವಿ ಹಾಗೂ ವಿ.ವಿ.ನಗರದ ಶ್ರೀ ಆದಿಶಕ್ತಿ ಮಾರಮ್ಮ ದೇವರುಗಳ ಹೂ-ಹೊಂಬಾಳೆ ನೆರವೇರಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಲಿದ್ದು, ರಾತ್ರಿ ೯ ಗಂಟೆ ನಂತರ ದೇವಸ್ಥಾನದಲ್ಲಿ ಮಂಡಲ ದರ್ಶನ, ಅಷ್ಟಾವಧಾನ, ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗವಾಗಲಿದೆ ಎಂದು ವಿವರಿಸಿದರು.
ನ.೮ರಂದು ಪ್ರಾತಃಕಾಲದ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಮಂಚಮ್ಮ ದೇವರ ಗದ್ದುಗೆಗೆ ಪ್ರಾಣ ಪತ್ರಿಷ್ಠೆ ಮತ್ತು ನ್ಯಾಸಗಳು, ಕಲಾಹೋಮ ನೆರವೇರಲಿದ್ದು, ಬೆಳಿಗ್ಗೆ ೯.೩೦ ರಿಂದ ಮಠಾಧೀಶರಿಂದ ವಿವಿಧ ಧಾರ್ಮಿಕ ಕಾರ್ಯಗಳು ಹಾಗೂ ಮಹಾಮಂಗಳಾರತಿ ನೆರವೇರಲಿದ್ದು, ಆಚಾರ್ಯ ಎನ್.ಎಸ್. ನವೀನ್ ಅವರು ಧಾರ್ಮಿಕ ಕಾರ್ಯದ ಉಸ್ತುವಾರಿ ವಹಿಸಲಿದ್ದಾರೆ ಎಂದರು.
ಪಾಂಡವಪುರದ ನಾಗಲಿಂಗೇಗೌಡ ಮತ್ತು ತಂಡದಿಂದ ಭಕ್ತ ನಮನ ಕಾರ್ಯಕ್ರಮ ಹಾಗೂ ಮಧ್ಯಾಹ್ನ ೧೨.೩೦ರಿಂದ ಅನ್ನಸಂತರ್ಪಣೆ ನೆರವೇರಲಿದೆ ಎಂದು ತಿಳಿಸಿದರು.
ನ.೮ರಂದು ನಡೆಯಲಿರುವ ಧಾರ್ಮಿಕ ಕಾರ್ಯದ ಸಾನ್ನಿಧ್ಯವನ್ನು ಆದಿಚುಂಚನಗಿರಿ ಕ್ಷೇತ್ರದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ವಹಿಸಲಿದ್ದು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಧಾರ್ಮಿಕ ಸಭೆಯನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಶಾಸಕರಾದ ಪಿ.ರವಿಕುಮಾರ್ ಗಣಿಗ, ಮಧು ಜಿ.ಮಾದೇಗೌಡ, ದಿನೇಶ್ ಗೂಳಿಗೌಡ, ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಸ್ಟಾರ್ ಚಂದ್ರು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಮ್, ಪಿಇಟಿ ಅಧ್ಯಕ್ಷ ಕೆ.ಎಸ್. ವಿಜಯ್ ಆನಂದ್, ಜಿಲ್ಲಾ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಬಿ.ಆರ್. ರಾಮಚಂದ್ರ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸಿ.ಅಶ್ವತ್ಥ, ಬಿಜೆಪಿ ಮುಖಂಡ ಎಸ್.ಸಚ್ಚಿದಾನಂದ ಭಾಗವಹಿಸಲಿದ್ದಾರೆ ಎಂದರು.
ವಿಶೇಷ ಆಹ್ವಾನಿತರಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಎಂ.ಚೇತನ, ತುಮ್ಮನೇರಳೆ ಗ್ರಾಮದ ಮುಖಂಡ ಟಿ.ಎನ್.ಶರತ್, ಚಲನಚಿತ್ರ ನಟ ಪಾಲಹಳ್ಳಿ ಅರವಿಂದ್, ಮುಡಾ ನಿರ್ದೇಶಕ ಎಂ.ಕೃಷ್ಣ, ಉದ್ಯಮಿಗಳಾದ ರವಿ ಬೋಜೇಗೌಡ, ಕಾಳೇನಹಳ್ಳಿ ತಿಮ್ಮೇಗೌಡ, ಎಂ.ಎನ್. ಮಹದೇವು, ನಗರಸಭಾ ಸದಸ್ಯರಾದ ಟಿ.ರವಿ, ಎಂ.ಎಸ್.ಶಿವಲಿAಗು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಟ್ರಸ್ಟ್ ಅಧ್ಯಕ್ಷ ಕೆ.ರಾಮಲಿಂಗಯ್ಯ, ಖಜಾಂಚಿ ಕೆ.ಜಿ. ಮೋಹನ್ ಕುಮಾರ್, ಕಾರ್ಯದರ್ಶಿ ಕೆ.ಸಿ. ರವೀಂದ್ರ, ಟ್ರಸ್ಟಿಗಳಾದ ಕೆ.ರಾಜು, ಕೆ.ಸಿ. ಧರ್ಮೇಂದ್ರ, ಕೆ.ನಾಗಲಿಂಗೇಗೌಡ, ಕಿರಣ್ ಹಾಜರಿದ್ದರು.




