Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ನಾಲೆಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವ ಪತ್ತೆ

ಮಂಡ್ಯ ತಾಲೂಕು ಸಿದ್ದಯ್ಯನ ಕೊಪ್ಪಲು ಬಳಿ ನಾಲೆಯಲ್ಲಿ ಕೊಚ್ಚಿ ಹೋಗಿದ್ದ ಕಾವೇರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಯಶ್ವಂತ್ ಎಂಬ ವಿದ್ಯಾರ್ಥಿಯ ಶವ ಮಂಡ್ಯ ತಾಲ್ಲೂಕಿನ ಲಾಳನಕೆರೆ ಬಳಿ ಭಾನುವಾರ ಪತ್ತೆಯಾಗಿದೆ.

ನಿನ್ನೆ ಸಂಜೆ ಯುವಕ ಕೊಚ್ಚಿಕೊಂಡು ಹೋದ ನಂತರ ಅಗ್ನಿಶಾಮಕ ದಳದವರು ಸಾರ್ವಜನಿಕರ ಜೊತೆಗೂಡಿ ಶೋಧ ಕೈಗೊಂಡಿದ್ದರು. ನಿನ್ನೆ ಸೂರ್ಯಾಸ್ತವಾಗುವವರೆಗೂ ಶವ ಸಿಕ್ಕಿರಲಿಲ್ಲ, ಇಂದು ಭಾನುವಾರ ಬೆಳಿಗ್ಗೆ ಸುಮಾರು ಏಳು ಗಂಟೆಗೆ ಕಾಳೇನಹಳ್ಳಿ ಬಳಿಯ ನಾಲೆ ಹಾಗೂ ಪಿ ಹಳ್ಳಿಯ ನಾಲೆಯ ಬಳಿ ಶವವನ್ನು ಹುಡುಕಲು ಪ್ರಾರಂಭ ಮಾಡಿದಾಗ, ಸ್ಥಳೀಯ ರೈತರು ಬಟ್ಟೆ ಇಲ್ಲದೆ ಒಂದು ಯುವಕನ ದೇಹ ತೇಲಿ ಹೋಗುತ್ತಿದೆ ಎಂದು ಮಾಹಿತಿ ನೀಡಿದರು.

ಪಿ ಹಳ್ಳಿ ಬಳಿ ದೇಹವು ತೇಲುತ್ತಾ ಸಾಗಿದಾಗ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿಗಳು ಹಾಗೂ ಕಾಳೇನ ನಳ್ಳಿ ವಿಶ್ವನಾಥ್ ಎಂಬ ಈಜು ಪರಿಣಿತರೊಬ್ಬರ ಸಹಾಯದಿಂದ ಶವವನ್ನು ಹೊರ ತೆಗೆದರು. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತು. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ