ಮಂಡ್ಯ ನಗರದ ಜಿಲ್ಲಾಧಿಕಾರಿ ಕಛೇರಿ ಮುಂಭಾಗದ ಕಾವೇರಿ ಉದ್ಯಾನವನದಲ್ಲಿ ಅನಿಕೇತನ ಸ್ಕೂಲ್ ಆಫ್ ಎಜುಕೇಷನ್ ವಿದ್ಯಾಸಂಸ್ಥೆ ವತಿಯಿಂದ ವಂದೇಮಾತರಂ 150ವರ್ಷ ತುಂಬಿದ ಹಿನ್ನೆಲೆಯಲ್ಲಿ ಜಾಗೃತಿ ಜಾಥಾ ನಡೆಸಿತು.
ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿಯ ಸಂಕೇತವಾದ ಬಂಕಿಮ ಚಂದ್ರಚಟರ್ಜಿ ರವರಿಂದ ರಚಿತವಾದ ವಂದೇಮಾತರಂ ಗೀತೆ ರಚನೆಯಾಗಿ 150ವರ್ಷ ಸಂದಿರುವ ಸಂದರ್ಭದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಮಂಡ್ಯದ ಕಾವೇರಿ ಉದ್ಯಾನವನದಿಂದ ಮೈಸೂರು ಬೆಂಗಳೂರು ಹೆದ್ದಾರಿ, ಜೆ.ಸಿ ವೃತ್ತ, ಮಹಾವೀರ ವೃತ್ತದ ಮೂಲಕ ಸರ್.ಎಂ.ವಿಶ್ವೇಶ್ವರಯ್ಯ ರಸ್ತೆ ಮಾರ್ಗವಾಗಿ ಜಿಲ್ಲಾ ಕ್ರೀಡಾಂಗಣದವರೆಗೂ ಜಾಗೃತಿ ಜಾಥಾ ನಡೆಸಲಾಯಿತು.
ಪೊಲೀಸ್ ವೃತ್ತ ನಿರೀಕ್ಷಕರಾದ ಸಿದ್ದರಾಜು ರವರು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಅನಿಕೇತನ ಸ್ಕೂಲ್ ಆಫ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಟಿ.ಎಂ.ಜಗದೀಶ್, ರಾಷ್ಟ್ರಗೀತೆ ಜನಗಣಮನ ಹಾಡಿನಂತೆಯೇ ವಂದೇ ಮಾತರಂ ಗೀತೆಯನ್ನು ಪ್ರತಿದಿನ ಶಾಲಾ- ಕಾಲೇಜು ಗಳಲ್ಲಿ ವಿದ್ಯಾರ್ಥಿಗಳು ಹಾಡಲಿ ಎಂದು ಸರ್ಕಾರಗಳಿಗೆ ಆಗ್ರಹಿಸಿದರು.
ದೇಶದಲ್ಲಿರುವ ಭಾರತೀಯರೆಲ್ಲಾ ಒಂದೇ ತಾಯಿ ಭಾರತಮಾತೆಯ ಮಕ್ಕಳಾಗಿದ್ದಾರೆ ಈ ಹಾಡಿನ ಮೂಲಕ ದೇಶಪ್ರೇಮ ರಾಷ್ಟ್ರಭಕ್ತಿ, ರಾಷ್ಟ್ರೀಯ ಏಕತೆ ಮತ್ತು ಶೌರ್ಯ ಮೂಡಿಸುವ ಚೈತನ್ಯದಾಯಕ ಸಾಲುಗಳಿವೆ ಎಂದು ತಿಳಿಸಿದರು.
ವಿದ್ಯಾರ್ಥಿಗಳೇ ನಿಮ್ಮನ್ನು ಯಾರಾದರೂ ಕೇಳಿದರೆ ಹಿಂದೂ ಧರ್ಮ ಮೊದಲ ಭಾರತ ದೇಶ ಮೊದಲ ದೇವರು ಮೊದಲ ಎಂದು ಕೇಳಿದರೆ ನೀವು ದೇಶ ಮೊದಲು ಎಂದು ಹೆಮ್ಮೆಯಿಂದ ಹೇಳಿ ಎಂದು ಮನವಿ ಮಾಡಿದರು.
ಬಳಿಕ ಮಾತನಾಡಿದ ಎನ್‌ಸಿಸಿ ಗೈಡ್ ಮಾಸ್ಟರ್ ರಾಜು, ಸಾಹಿತಿ ಬಂಕಿಮ ಚಂದ್ರ ಚಟರ್ಜಿ ಅವರು 1875ರಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಏಕತೆ ಮತ್ತು ಶೌರ್ಯ ಪ್ರತಿಬಿಂಬಿಸುವ ಹೋರಾಟದ ಗೀತೆಯಾಗಿ ಒಂದೇ ಮಾತರಂ ರಚನೆಗೊಳ್ಳುತ್ತದೆ ಆಗ ಬ್ರಿಟಿಷರ ಸಂಕೋಲೆಯಲ್ಲಿ ದೇಶವಿತ್ತು ಎಂದು ನುಡಿದರು.
ಸ್ವಾತಂತ್ರ್ಯ ಸಂಗ್ರಾಮದ ಪೂರ್ತಿದಾಯಕ ಗೀತೆ ವಂದೇ ಮಾತರಂ ಗೀತೆಯು ಭಾರತ ದೇಶದಲ್ಲಿ ಸ್ವಾತಂತ್ರ್ಯ ಚಳುವಳಿಗೆ ಪೂರ್ತಿದಾಯಕವಾಗಿ ಹೋರಾಟ ಗೀತೆ ಯಾಗಿ ಮೈ ರೋಮಾಂಚನಗೊಳಿಸುವಂತೆ ಸದ್ದು ಮಾಡಿತು ಎಂದು ಹೇಳಿದರು.
ಈ ಹಾಡು ರಚನೆಯಾಗಿ 59 ವರ್ಷ ತುಂಬಿದಾಗ 1925 ರಲ್ಲಿ ಬ್ರಿಟಿಷರ ಆಡಳಿತವಿತ್ತು, ನೂರು ವರ್ಷ ತುಂಬಿದಾಗ 1975ರಲ್ಲಿ ತುರ್ತು ಪರಿಸ್ಥಿತಿಯ ದಿನಗಳು ಎದುರಿಸಬೇಕಿತ್ತು 150 ವರ್ಷ ತುಂಬಿದ ಈ ಸಂದರ್ಭದ 2025 ರಲ್ಲಿ ನಮ್ಮ ಭಾರತ ದೇಶವು ಸ್ಮರಿಸುತ್ತಿದೆ ಅದೇ ರೀತಿ ಶಾಲೆಯ ವಿದ್ಯಾರ್ಥಿಗಳು ಜಾಗೃತಿ ಜಾತ ಮಾಡಿ ಹೆಮ್ಮೆ ಪಡುತ್ತಿರುವುದು ಸ್ಥಾಪನೆಯ ಎಂದು ನುಡಿದರು.
ಜಾಥಾದಲ್ಲಿ ಅನಿಕೇತನ ಸ್ಕೂಲ್ ಆಫ್ ಎಜುಕೇಷನ್ ಟ್ರಸ್ಟ್ ಉಪಾಧ್ಯಕ್ಷರಾದ ಡಾ.ಟಿ.ಎಂ.ಪ್ರಕಾಶ್, ಪ್ರಾಂಶುಪಾಲರಾದ ಡಾ.ರಾಮಲಿಂಗಯ್ಯ, ಟ್ರಸ್ಟಿಗಳಾದ ಕೆ.ಎಸ್.ಬಸವರಾಜು, ಡಿ.ಎಸ್.ದೇವರಾಜು, ಉಪ ಪ್ರಾಂಶುಪಾಲರಾದ ಮಂಗಳಮ್ಮ, ಮುಖ್ಯೋಪಾಧ್ಯಾಯನಿ ತೇಜೇಶ್ವರಿ, ಕಾರ್ಯದರ್ಶಿಗಳಾದ ಹೆಚ್.ಎಸ್. ಚುಂಚೆಗೌಡ, ಎನ್‌ಸಿಸಿ ಗೈಡ್ ಮಾಸ್ಟರ್ ರಾಜು, ಅಧ್ಯಾಪಕ ವರ್ಗದವರು ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.




