Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಜಮೀರ್ ಅಹಮದ್ ಹೇಳಿಕೆಗೆ ಸುರೇಶ್ ಗೌಡ ಖಂಡನೆ

ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಗ್ಗೆ ಅವಹೇಳನಕರವಾದ ಪದ ಬಳಕೆ ಮಾಡಿರುವ ಸಚಿವ ಜಮೀರ್ ಅಹಮದ್ ಖಾನ್ ಅವರ ಹೇಳಿಕೆ ಖಂಡನಾರ್ಹ ಎಂದು ನಾಗಮಂಗಲ ಮಾಜಿ ಶಾಸಕ ಕೆ.ಸುರೇಶ್‌ಗೌಡ ಗುಡುಗಿದರು.

ಮಂಡ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚನ್ನಪಟ್ಟಣ ಉಪ ಚುನಾವಣೆ ಪ್ರಚಾರ ಸಂದರ್ಭದಲ್ಲಿ ನಮ್ಮ ನಾಯಕರ ಬಗ್ಗೆ ಕಾಂಗ್ರೆಸ್ ಸಚಿವರು ವರ್ಣಭೇದ ನೀತಿ ತೋರುವ ರೀತಿ ಹೇಳಿಕೆ ಕೊಟ್ಟಿರುವುದು ಸರಿಯಲ್ಲ. ಅವರು ತಮ್ಮ ಮಿತಿಯನ್ನು ಅರಿತು ಮಾತನಾಡಬೇಕು ಎಂದು ತಾಕೀತು ಮಾಡಿದರು.

ಹೇಳಿಕೆಯನ್ನು ನೀಡಿ ಅದನ್ನು ಸಮರ್ಥಿಸಿಕೊಳ್ಳಲು ಜಮೀರ್ ಅವರು ಕುಮಾರಸ್ವಾಮಿ ಅವರು ನನ್ನನ್ನು ಕುಳ್ಳ ಎಂದು ಕರೆಯುತ್ತಾರೆ. ನಾನು ಅವರನ್ನು ಕರಿಯ ಎಂದು ಕರೆಯುವುದು ಸಾಮಾನ್ಯ ಮಾತುಗಳು, ಇದು ಅವರ ನನ್ನ ವೈಯಕ್ತಿಕ ಎನ್ನುತ್ತಿದ್ದು, ಸಾರ್ವಜನಿಕವಾಗಿ ಕೇಂದ್ರ ಮಂತ್ರಿಗಳ ವಿಚಾರವಾಗಿ ಹೀಗೆ ಮಾತನಾಡಿರುವುದು ತಪ್ಪು ಎಂದರು.

ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸಚಿವರನ್ನ ಹಿಡಿತದಲ್ಲಿಟ್ಟುಕೊಳ್ಳಬೇಕು. ಈ ರೀತಿಯಾಗದಂತೆ ಗಮನ ಹರಿಸಿ, ತಮ್ಮ ಸಚಿವರ ಬಾಯಿ ಹರಿಬಿಡದಂತೆ ಎಚ್ಚರ ವಹಿಸಿ, ತಕ್ಷಣವೇ ಜಮೀರ್ ಅವರ ಜಾಮೀನು ಪಡೆದು, ಅವರ ವಿರುದ್ಧ ಸುಮೋಟೊ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಮತ್ತು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಮೈಸೂರಲ್ಲಿ ಸಚಿವ ಚಲುವರಾಯಸ್ವಾಮಿ ಮೇಲೆ ಹಲ್ಲೆ ವಿಚಾರವಾಗಿ ಉತ್ತರಿಸಿದ ಸುರೇಶ್‌ಗೌಡ ಅವರು, ನಾನು ಮುತ್ತು ಕೊಟ್ಟೆ ಅವರು ನಾಲ್ಕು ಮುತ್ತು ಕೊಟ್ಟರು ಎನ್ನುವ ಮಾತುಗಳು ಕೇಳಿ ಬರುತ್ತಿದೆ ಎಂದು ವ್ಯಂಗ್ಯವಾಡಿದರು. ರಾಜ್ಯದಲ್ಲಿ ಓರ್ವ ಸಚಿವರಿಗೆ ರಕ್ಷಣೆ ಇಲ್ಲ, ಇದು ಅಸಹನೀಯ ಸರ್ಕಾರ ಈ ಸಂಬಂಧ ಯಾಕೆ ಕ್ರಮ ಕೈಗೊಳ್ಳಿಲ್ಲ ಎಂಬುದನ್ನು ಬಹಿರಂಗವಾಗಿ ತಿಳಿಸಬೇಕೆಂದು ಆಗ್ರಹಿಸಿದರು.

ಮಾಜಿ ಶಾಸಕ ಅನ್ನದಾನಿ ಮಾತನಾಡಿ, ದೇವರಲ್ಲಿ ಪ್ರಮಾಣ ಮಾಡ್ತೇನೆ ಒಂದು ದಿನ ಕೂಡ ಕುಮಾರಸ್ವಾಮಿ ಜಮೀರ್ ಅವರನ್ನ ಕುಳ್ಳ ಅಂತ ಕರೆದಿಲ್ಲ, ಅವರಿಬ್ಬರು ಆತ್ಮೀಯವಾಗಿದ್ದರು ಆದರೆ ವೈಯಕ್ತಿಕವಾಗಿ ನಿಂದಿಸುವ ಪದ ಬಳಕೆಯನ್ನು ಕುಮಾರಸ್ವಾಮಿ ಅವರು ಮಾಡಿಲ್ಲ ನಾನೇ ಸಾಕ್ಷಿ ಎಂದು ಹೇಳಿದರು.

ಸಚಿವ ಜಮೀರ್ ಕೇಂದ್ರ ಸಚಿವರನ್ನ ಅಪಮಾನ ಮಾಡಿದ್ದಾರೆ. ಇದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಜಮೀರ್‌ಗೆ ಕನಿಷ್ಠ ಮಾತನಾಡುವುದು ಸೌಜನ್ಯ ಗೊತ್ತಿಲ್ಲ. ಚಾಮರಾಜಪೇಟೆಯಲ್ಲಿ ಗೆಲ್ಲುವಂತೆ ಮಾಡಿದ ದೇವೇಗೌಡರು ಜಮೀರ್‌ಗೆ ರಾಜಕೀಯ ಬದುಕು ಕಟ್ಟಿಕೊಟ್ಟರು. ದೇವೇಗೌಡರು ಹಾಗು ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಬೇಕಾದರೆ ನಾಲಿಗೆ ಮೇಲೆ ಹಿಡಿತ ಇರಲಿ ಎಂದು ಎಚ್ಚರಿಸಿದರು.

ಚನ್ನಪಟ್ಟಣ ಬಹಿರಂಗ ಸಭೆ ಮುಕ್ತಾಯವಾಗಿದೆ. ಕಾಂಗ್ರೆಸ್ ಸಚಿವರ ಉದ್ಧಟತನಕ್ಕೆ ಚನ್ನಪಟ್ಟಣದ ಜನತೆ ತಕ್ಕ ಉತ್ತರ ಕೊಡುತ್ತಾರೆ. ನಿಖಿಲ್ ಗೆಲ್ಲಿಸಲು ಜನರ ಬೆಂಬಲ ಇದೆ. ೩೦ ಸಾವಿರ ಮತಗಳ ಅಂತರದಿಂದ ನಿಖಿಲ್ ಗೆಲ್ಲುತ್ತಾರೆ. ನಾಳೆ ನಡೆಯುವ ಮತಚಲಾವಣೆಯಲ್ಲಿ ಜಮೀರ್‌ಗೆ ಸರಿಯಾದ ಉತ್ತವನ್ನು ಮತದಾರರ ನೀಡುತ್ತಾರೆ ಎಂದು ಹೇಳಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ