ಮಳವಳ್ಳಿ ಪಟ್ಟಣದ ಅನಂತರಾಮ್ ಸರ್ಕಲ್ ನಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ ವಿರುದ್ಧ ಸಚಿವ ಜಮೀರ್ ಅಹಮದ್ ನೀಡಿರುವ ಅವಹೇಳನಕಾರಿ ಹೇಳಿಕೆ ಖಂಡಿಸಿ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಜಮೀರ್ ಅಹಮದ್ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆಯಲ್ಲಿ ಪುರಸಭೆ ಸದಸ್ಯ ಟಿ.ನಂದಕುಮಾರ್ ಮಾತನಾಡಿ, ಜೆಡಿಎಸ್ ಪಕ್ಷ ದಿಂದ ಅದರಲ್ಲೂ ದೇವೇ ಗೌಡರ ಕುಟುಂಬದ ನೆರವಿ ನಿಂದಲೇ ರಾಜಕೀಯವಾಗಿ ಬೆಳೆದ ಜಮೀರ್ ಅಹಮದ್ ಖಾನ್ ತನ್ನನ್ನು ಬೆಳೆಸಿದ ಕುಮಾರ ಸ್ವಾಮಿ ವಿರುದ್ಧ ಅವಹೇಳನ ಕಾರಿ ಪದಬಳಕೆ ಮಾಡಿರು ವುದು ಅವರ ದುರಹಂಕಾರದ ಪರಮಾವಧಿ ಎಂದು ಖಂಡಿಸಿ ದರು.
ನಂತರ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣ ಅವರು ಚುನಾವಣೆ ಇನ್ನಿತರ ಸಂದರ್ಭದಲ್ಲಿ ಜೆಡಿಎಸ್ ಬಿಜೆಪಿ ನಾಯ ಕರ ವಿರುದ್ಧ ಉದ್ಘಟತನದ ಹೇಳಿಕೆ ನೀಡುತ್ತ ಧರ್ಮ ಕೋಮುವಾದದ ಹೆಸರಿನಲ್ಲಿ ಜನರನ್ನು ಪ್ರಚೋದಿಸುವ ಹೇಳಿಕೆ ನೀಡುತ್ತ ಸಮಾಜದ ಶಾಂತಿಗೆ ಭಂಗ ಉಂಟು ಮಾಡುತ್ತಿರುವ ಬೇಜವಾಬ್ದಾರಿ ಜಮೀರ್ ಅಹಮದ್ ಖಾನ್ ಅವರನ್ನು ಕೂಡಲೇ ಸಚಿವ ಸಂಪುಟದಿಂದ ವಜಾಗೊಳಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ನಂತರ ತಾಲ್ಲೂಕು ಕಚೇರಿಗೆ ತೆರಳಿ ಪ್ರಭಾರ ತಹಶೀಲ್ದಾರ್ ಕುಮಾರ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ, ಉಪಾಧ್ಯಕ್ಷ ಬಸವರಾಜು, ಸದಸ್ಯರಾದ ಎಂ ಟಿ ಪ್ರಶಾಂತ್, ನಾಗೇಶ್, ಮಾಜಿ ಜಿ ಪಂ ಸದಸ್ಯ ಹನುಮಂತು, ಮುಖಂಡರಾದ ಪ್ರಭು, ಕಾಂತರಾಜು, ಸಿದ್ದಾಚಾರಿ, ವಿಷಕಂಠ, ಕೃಷ್ಣ, ಅಂಕನಾಥ್, ದುಗ್ಗನಹಳ್ಳಿ ನಾಗರಾಜು ಮತ್ತಿತರರು ಪಾಲ್ಗೊಂಡಿದ್ದರು.




