ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ನಟ ಅಭಿಷೇಕ್ ಅಂಬರೀಷ್- ಅವಿವಾ ದಂಪತಿಗೆ ಗಂಡು ಮಗು ಜನನವಾಗಿದ್ದು, ಅಂಬರೀಷ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಅವಿವಾ ಅವರು ಇಂದು ಬೆಳಗ್ಗೆ 8.30 ರ ಸುಮಾರಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

2023 ರಲ್ಲಿ ಅಭಿಷೇಕ್ ಅಂಬರೀಷ್ ಮತ್ತು ಅವಿವಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮಗು ಮುದ್ದಾಡಿದ ಸುಮಲತಾ ಅಭಿಷೇಕ್ ಅವರ ತಾಯಿ ಮಾಜಿ ಸಂಸದೆ ಸುಮಲತಾ ಅಂಬರೀಶ್ ಆಸ್ಪತ್ರೆಯಲ್ಲಿ ಮೊಮ್ಮಗನನ್ನು ಅಪ್ಪಿ ಮುದ್ದಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಮಗುವಿನ ಜೊತೆ ಸುಮಲತಾ ಫೋಟೋಗೆ ಫೋಸ್ ನೀಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಗುವಿನ ಆಗಮನಕ್ಕಾಗಿ ಕಾಯುತ್ತಿದ್ದ ಸುಮಲತಾ ಅಂಬರೀಶ್ಗೆ ಇಂದು ಸಿಕ್ಕಾಪಟ್ಟೆ ಖುಷಿಯಾಗಿದೆ.ಈ ಸುದ್ದಿ ತಿಳಿದ ಅಂಬರೀಶ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿ,ಪೋಸ್ಟ್ ಹಾಕಿದ್ದಾರೆ.
ಮಗುವಿನ ರೂಪದಲ್ಲಿ ಮತ್ತೆ ಅಂಬರೀಶ್ ಅವರೇ ಹುಟ್ಟಿಬಂದಿದ್ದಾರೆ,ಮರಿ ಅಂಬರೀಶ್ ಜನನವಾಗಿದೆ, ‘ಜ್ಯೂನಿಯರ್ ರೆಬೆಲ್ ಸ್ಟಾರ್ ಆಗಮನವಾಗಿದೆ’ ಅಂತೆಲ್ಲಾ ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ.




