Thursday, November 19, 2026

ಪ್ರಾಯೋಗಿಕ ಆವೃತ್ತಿ

ಪಾಂಡವಪುರ | ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಕೆಂಪೇಗೌಡ ಆಯ್ಕೆ

ಪಾಂಡವಪುರ ತಾಲೂಕು ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಶಿಕ್ಷಣ ಇಲಾಖೆಯ ಎಸ್.ಎನ್.ಕೆಂಪೇಗೌಡ, ರಾಜ್ಯ ಪರಿಷತ್ ಸದಸ್ಯರಾಗಿ ಆರೋಗ್ಯ ಇಲಾಖೆಯ ಡಾ.ಸಿ.ಎ.ಅರವಿಂದ ಹಾಗೂ ಖಜಾಂಚಿಯಾಗಿ ಸಮಾಜ ಕಲ್ಯಾಣ ಇಲಾಖೆಯ ನೀಲನಹಳ್ಳಿ ಜಯರಾಂ ಆಯ್ಕೆಯಾದರು.

ಪಾಂಡವಪುರ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ನಿಗದಿಯಾಗಿದ್ದ ಚುನಾವಣೆಯಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಸ್.ಪರಮೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಮಂಜುನಾಥ್ ಬಣಕ್ಕೆ ಗೆಲುವು ದೊರಕಿದ್ದು, ಕೆ.ಎಂ.ಪುಟ್ಟರಾಜೇಗೌಡ, ಕೆ.ಚಂದ್ರಶೇಖರ್ (ಗಡ್ಡ ಚಂದ್ರು) ಅವರ ಬಣಕ್ಕೆ ಸೋಲುಂಟಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಸ್.ಎನ್.ಕೆಂಪೇಗೌಡ ಅವರು ತಮ್ಮ ಪ್ರತಿಸ್ಪರ್ಧಿ ಮಾಣಿಕ್ಯನಹಳ್ಳಿ ಜಯರಾಂ ವಿರುದ್ದ 20-11 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಗೆಲುವಿನ ನಗೆ ಬೀರಿದರು. ಹಾಗೆಯೇ ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ ಡಾ.ಸಿ.ಎ.ಅರವಿಂದ ಅವರು ತಮ್ಮ ಪ್ರತಿಸ್ಪರ್ಧಿ ಎಚ್.ಎನ್.ನಾರಾಯಣಗೌಡ ವಿರುದ್ದ 21-10 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಅಂತೆಯೇ ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ನೀಲನಹಳ್ಳಿ ಜಯರಾಂ ಅವರು ತಮ್ಮ ಪ್ರತಿಸ್ಪರ್ಧಿಯ ವೇಣುಗೋಪಾಲ್ ವಿರುದ್ಧ 22-9 ಮತಗಳ ಅಂತರದಿಂದ ಜಯಶೀಲರಾದರು.

ರೈತರ ಪರಿವಾರ ನನ್ನ ಗೆಲುವಿನಲ್ಲಿ ಕೈಜೋಡಿಸಿದೆ

ಇಂದಿನ ಈ ಗೆಲುವು ನನ್ನದಲ್ಲ, ಇಡೀ ಸರ್ಕಾರಿ ನೌಕರರ ಗೆಲುವು. ಅಧ್ಯಕ್ಷ ಸ್ಥಾನವು ದೊಡ್ಡ ಹುದ್ದೆ ಅಲ್ಲ. ಯಾವುದೇ ಲೋಪವಿಲ್ಲದಂತೆ ಕೆಲಸ ಮಾಡುತ್ತೇನೆ ಎಂದು ಕೆಂಪೇಗೌಡ ತಿಳಿಸಿದರು.

ರೈತರ ಪರಿವಾರ ನನ್ನ ಗೆಲುವಿನಲ್ಲಿ ಕೈಜೋಡಿಸಿದೆ. ಈ ಚುನಾವಣೆಯಲ್ಲಿ ಕೆಲವು ಬದಲಾವಣೆಯಾಗುವ ಸನ್ನಿವೇಶ ಸೃಷ್ಟಿಯಾಗಿದ್ದರೂ ಅಂತಹ ಬದಲಾವಣೆ ಅವಕಾಶವಾಗದ ರೀತಿ ಎಲ್ಲರೂ ಕೆಲಸ ಮಾಡಿದ್ದರ ಪ್ರತಿಫಲವೇ ಗೆಲುವಿಗೆ ಸಹಕಾರಿಯಾಗಿದೆ.

ಜತೆಗೆ ಕ್ಷೇತ್ರದ ಶಾಸಕರು ಎಲ್ಲ ನಿರ್ದೇಶಕರ ವಿಶ್ವಾಸ ಪಡೆದು ಕೆಲಸ ಮಾಡುವಂತೆ ನಿರ್ದೇಶನ ಮಾಡಿದ್ದಾರೆ.‌ ಹೀಗಾಗಿ ಅವರಿಗೂ ಧನ್ಯವಾದ ಅರ್ಪಿಸುವೆ ಎಂದರು.

ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಎಚ್. ಸಿ.ಶಿವಪ್ಪ ಮೂವರು ಚುನಾಯಿತರ
ಆಯ್ಕೆಯನ್ನು ಪ್ರಕಟಿಸಿದ ಬಳಿಕ ಬೆಂಬಲಿಗರು‌ ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಿಸಿದರು.ಈ ವೇಳೆ ಚುನಾಯಿತರಾದ ಮೂವರು ಪದಾಧಿಕಾರಿಗಳನ್ನು ಶಾಸಕರ ಕಚೇರಿಯಲ್ಲಿ ಅಭಿನಂದಿಸಲಾಯಿತು.

ಅಭಿನಂದನೆ ಸ್ವೀಕರಿಸಿದ ಸರ್ಕಾರಿ ನೌಕರರ ಸಂಘದ ನೂತ‌ನ ಅಧ್ಯಕ್ಷ ಎಸ್.ಎನ್.ಕೆಂಪೇಗೌಡ ಮಾತನಾಡಿ, ನಮ್ಮದೇ ಗುರಿ ಹಾಗೂ ಆಲೋಚನೆಯೊಂದಿಗೆ ಸಂಘವನ್ನು ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಜತೆಗೆ ಸರ್ಕಾರಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅವರ ಹಿತ ಕಾಯುವ ಕಾರ್ಯವನ್ನು ಮಾಡಲಾಗುವುದು ಎಂದರು.

ಈ ವೇಳೆ ತಾಲೂಕು ರೈತಸಂಘದ ಅಧ್ಯಕ್ಷ ಪಿ.ನಾಗರಾಜು, ಸರ್ವೋದಯ ಕರ್ನಾಟಕ ಪಕ್ಷದ ಅಧ್ಯಕ್ಷ ಎಸ್.ದಯಾನಂದ್, ಮುಖಂಡರಾದ ಚಿಕ್ಕಾಡೆ ವಿಜೇಂದ್ರ, ಕ್ಯಾತನಹಳ್ಳಿ ರಾಘವೇಂದ್ರ, ಚಂದ್ರೆ ಜಯರಾಂ, ಯುವರಾಜು, ತಾಲೂಕು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಸ್.ಪರಮೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಮಂಜುನಾಥ್, ಕಾರ್ಯದರ್ಶಿ ಎಂ.ಡಿ.ಕುಮಾರ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ‌ಮಾಜಿ ಅಧ್ಯಕ್ಷ ಆರ್.ಸಿ.ನಾಗೇಗೌಡ, ಶಿಕ್ಷಕರಾದ ಎಂ.ಎಚ್.ನಂದೀಶ್, ಡಿ.ಶಿವಣ್ಣ, ಅನಂತಮೂರ್ತಿ,ಮಾಣಿಕ್ಯನಹಳ್ಳಿ ‌ಕೆ.ಕೆಂಪೇಗೌಡ, ಕೆಂಚೇಗೌಡ, ಸರ್ವೆ ಲೋಕೇಶ್ ಇತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ