Thursday, November 19, 2026

ಪ್ರಾಯೋಗಿಕ ಆವೃತ್ತಿ

ನುಡಿ ಹಬ್ಬ | ಕ್ರಮಬದ್ಧವಾಗಿ 3 ಧ್ವಜ ಸ್ತಂಭಗಳ ನಿರ್ಮಾಣ ; ಶಿವಮೂರ್ತಿ

87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ 3 ದಿನ ನಡೆಯುವ ಧ್ವಜಾರೋಹಣ ಕಾರ್ಯಕ್ರಮ ಆಕರ್ಷಣೀಯವಾಗಿರಬೇಕು. ಇದಕ್ಕೆ ಸಂಬಂಧಿಸಿದ ಕಾರ್ಯವೈಖರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಜವಾಬ್ದಾರಿ ಧ್ವಜ ಸಮಿತಿ ಮೇಲಿದೆ ಎಂದು ಉಪ ವಿಭಾಗಧಿಕಾರಿ ಶಿವಮೂರ್ತಿ ಹೇಳಿದರು.

ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಧ್ವಜ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಸಮ್ಮೇಳದ ಉದ್ಘಾಟನೆ ಧ್ವಜರೋಹಣದಿಂದಲೇ ನಡೆಯುವುದರಿಂದ ಸಮಿತಿಯ ಕಾರ್ಯ ಕ್ರಿಯಾಶೀಲತೆ ಯಿಂದ ಕೂಡಿರಬೇಕು ಎಂದರು.

ಧ್ವಜ ಸ್ತಂಭಗಳನ್ನು ಸಮ್ಮೇಳನ‌ ನಡೆಯುವ ಮುಖ್ಯದ್ವಾರದ ಬಾಗಿಲಿನ ಮುಂಭಾಗದಲ್ಲಿ ಸ್ಥಾಪಿಸಲಾಗುವುದು, ಒಟ್ಟು ಮೂರು ಧ್ವಜ ಸ್ತಂಭಗಳಿದ್ದು, ಮೊದಲ ಸ್ತಂಭ ರಾಷ್ಟ್ರಧ್ವಜದಾಗಿರುತ್ತದೆ. ಇದು ಎತ್ತರವಗಿರುತ್ತದೆ, ನಂತರ ಎರಡನೇ ಧ್ವಜ ಸ್ತಂಭ ನಾಡ ಧ್ವಜ ಹಾಗೂ ಮೂರನೇ ಧ್ವಜ ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜವಾಗಿದ್ದು ಮೂರು ಧ್ವಜ ಸ್ತಂಭಗಳು ಕ್ರಮಬದ್ಧವಾಗಿ ನಿರ್ಮಾಣವಾಗಬೇಕು ಎಂದರು.

ಧ್ವಜಾರೋಹಣದ ಮೊದಲ ದಿನ ರಾಷ್ಟ್ರ ಧ್ವಜವನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮರುದಿನ ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜವನ್ನು ಪರಿಷತ್ತಿನ ಅಧ್ಯಕ್ಷರು ಧ್ವಜಾರೋಹಣವನ್ನು ನೆರವೇರಿಸಲಿದ್ದಾರೆ. ನಾಡ ಧ್ವಜವನ್ನು ಜಿಲ್ಲೆಯ ಸಾಹಿತಿ ಹಾಗೂ ಪ್ರಗತಿ ಪರ ರೈತರು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಮಾಜಿ ಸೈನಿಕರಿಂದ ನೆರವೇರಿಸುವ ಕುರಿತು ಸಮಾಲೋಚಿಸುವುದಾಗಿ ತಿಳಿಸಿದರು.

ಧ್ವಜ ಸಮಿತಿಯವರಿಗೆ ಪ್ರತ್ಯೇಕ ಐಡಿ ಕಾರ್ಡ್ ನೀಡುವುದರ ಜೊತೆಗೆ ಸಾಹಿತ್ಯ ಸಮ್ಮೇಳದ ಲೋಗೋ ಇರುವ ಕ್ಯಾಪ್ ನೀಡಲಾಗುವುದು. ಸಮಿತಿ ಸದಸ್ಯರಿಗೆ ಸ್ಮರಣಿಕೆ ಹಾಗೂ ಪ್ರಮಾಣ ಪತ್ರ ನೀಡುವುದನ್ನು ಮುಂದಿನ ದಿನಗಳಲ್ಲಿ ತೀರ್ಮಾನಿಸಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎನ್.ಲಿಂಗರಾಜು, ನಿವೃತ್ತ ದೈಹಿಕ ಶಿಕ್ಷಕಿ ಜ್ಞಾನಪೂರ್ಣ, ಶ್ರೀರಂಗಪಟ್ಟಣ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎ. ಸೋಮಶೇಖರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ