ಜಸ್ಟ್ ಆಸ್ಕಿಂಗ
ಅಂದು….
ಬ್ರಿಟಿಷ್ ವಸಾಹಾತುಶಾಹಿ ಮತ್ತು ಊಳಿಗಾಮಾನ್ಯ ಬ್ರಾಹ್ಮಣಶಾಹಿಯ ಜಂಟಿ ಆಳ್ವಿಕೆಯಲ್ಲಿ ಮುಂದುವರೆಯುತ್ತಿದ್ದ “ಭಟ್ ಜಿ – ಶೇಟ್ ಜಿ” ಗಳ ಶೋಷಣೆಯನ್ನು ಜ್ಯೋತಿಬಾ ಫುಲೆ ಯವರು “ಗುಲಾಮಗಿರಿ” ಎಂದು ವಿಶ್ಲೇಷಿಸಿದರು… ಮತ್ತು ಅದರ ರಾಜಕೀಯ, ಆರ್ಥಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಬಿಡುಗಡೆಗೆಯ ಒಂದು ದಾರಿಯನ್ನು ಸೂಚಿಸಿದರು…
ಇಂದು…
ನವ ವಸಾಹಾತು ಶಾಹಿ,ಕಾರ್ಪೋರೆಟ್ ಬಂಡವಾಳಶಾಹಿ, ಬ್ರಾಹ್ಮಣಶಾಹಿ ಹಿಂದುತ್ವದ ಕಾಲದಲ್ಲಿಯೂ “ನವ ಗುಲಾಮಗಿರಿ” ಮುಂದುವರೆದಿದೆ…
ಈ ನವ ಗುಲಾಮಗಿರಿಯಲ್ಲಿ ಹಳೆಯ ಗುಲಾಮಗಿರಿಯ ಕೆಲವು ಮುಂದುವರೆಕೆಗಳೂ ಇವೇ.. ಕೆಲವು ಹೊಸ ಸಂಕಿರ್ಣ ಸೇರ್ಪಡೆಗಳೂ ಇವೇ..
ಈ ಕಾಲದ ವಿಮೋಚನೆಗೆ ಈ ಕಾಲದ “ಗುಲಾಮಗಿರಿಯ” ವಿಶ್ಲೇಷಣೆ ಬೇಕಲ್ಲವೇ?
ಮತ್ತು ಇಂದಿನ ವಿಮೋಚನೆಗೆ ಅಂದಿನ ಫುಲೆ ಮತ್ತು ಅಂಬೇಡ್ಕರ್ ಅವರ ಜೊತೆಜೊತೆಗೆ ಈ ಕಾಲದ ಫುಲೆ ಮತ್ತು ಅಂಬೇಡ್ಕರ್ ರು ಬೇಕಲ್ಲವೇ ?
ಜಸ್ಟ್ ಆಸ್ಕಿಂಗ್
-ಶಿವಸುಂದರ್




