ಮಂಡ್ಯ ಜಿಲ್ಲಾ ಸರ್ಕಾರಿ ನೌಕರರ ಸಂಘಕ್ಕೆ ನಡೆದ ಚುನಾವಣೆಯಲ್ಲಿ 66 ಸ್ಥಾನಗಳಲ್ಲಿ 61 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದು ಉಳಿದ 5 ನಿರ್ದೇಶಕ ಸ್ಥಾನಗಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ 4 ಇಲಾಖೆಯಿಂದ 5 ಮಂದಿ ಚುನಾಯಿತರಾದರು.
ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಮೂರನೇ ಬಾರಿಗೆ ಜಿ.ಎನ್.ನಾಗೇಶ್ ಅವರು ನಿರ್ದೇಶಕರಾಗಿ ಚುನಾಯಿತ ರಾದರು. ತೋಟಗಾರಿಕೆ ಇಲಾಖೆಯಿಂದ ಆನಂದ್, ಲೈಬ್ರರಿ ಇಲಾಖೆಯಿಂದ ಮುರಳಿ, ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಎಂ.ಎಲ್.ಕೃಷ್ಣೇಗೌಡ, ಪಶುಪಾಲನ ಇಲಾಖೆಯಿಂದ ವೇದಮೂರ್ತಿ ಚುನಾಯಿತರಾದರು.
ಮೂರನೇ ಬಾರಿಗೆ ಜಿಲ್ಲಾ ಸರ್ಕಾರಿ ನೌಕರರ ಸಂಘಕ್ಕೆ ನಿರ್ದೇಶಕರಾಗಿ ಚುನಾಯಿತರಾದ ಪದವಿಪೂರ್ವ ಶಿಕ್ಷಣ ಇಲಾಖೆಯ ಜಿ.ಎನ್. ನಾಗೇಶ್ ಅವರನ್ನು ವಿಧಾನಪರಿಷತ್ ಸದಸ್ಯ ಕೆ.ವಿವೇಕಾನಂದ ಅಭಿನಂದಿಸಿದರು




