Friday, November 20, 2026

ಪ್ರಾಯೋಗಿಕ ಆವೃತ್ತಿ

ಸಿಪಿಐ(ಎಂ) ಆಡಳಿತದಲ್ಲಿ ಜನರ ಆರ್ಥಿಕಾಭಿವೃದ್ದಿ ಸಾಧ್ಯ : ಕಾಮ್ರೇಡ್ ಶೈಲಜಾ ಟೀಚರ್

ಕೇರಳ ರಾಜ್ಯದಲ್ಲಿ ಸಿಪಿಐ(ಎಂ) ನೇತೃತ್ವದ ಎಡಪಕ್ಷಗಳು ಅಧಿಕಾರ ನಡೆಸುತ್ತಿರುವುದರಿಂದ ರೈತರು, ಕಾರ್ಮಿಕರು, ಬಡವರು ಎಲ್ಲಾ ವಿಭಾಗ ಜನರಿಗೆ ಆರ್ಥಿಕ ಅಭಿವೃದ್ದಿ ಸಾಧ್ಯವಾಗಿದೆ ಎಂದು ಕೇರಳ ರಾಜ್ಯದ ಮಾಜಿ ಆರೋಗ್ಯ ಸಚಿವೆ ಹಾಗೂ ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯೆ ಕೆ.ಕೆ.ಶೈಲಜಾ ಟೀಚರ್ ತಿಳಿಸಿದರು.

ಮದ್ದೂರು ತಾಲ್ಲೂಕು ಭಾರತೀನಗರದಲ್ಲಿ ಸಿಪಿಐ(ಎಂ) ವತಿಯಿಂದ ನಡೆದ ಮಂಡ್ಯ ಜಿಲ್ಲೆಯ 10 ನೇ ಸಮ್ಮೇನಳನದ ಅಂಗವಾಗಿ ನಡೆದ ಬಹಿರಂಗ ಸಭೆಯನ್ನುದ್ದೇಶಿಸಿ  ಅವರು ಪ್ರಧಾನ ಭಾಷಣ ಮಾಡಿದರು.

ಆರೋಗ್ಯ, ಶಿಕ್ಷಣ, ಎಲ್ಲರಿಗೂ ತಲುಪಿಸಲು ಸಾಧ್ಯವಾಗಿದೆ. ಕುಟುಂಬ ಸ್ತ್ರೀ ಯೋಜನೆಯನ್ನು ಜಾರಿಗೆ ತಂದಿದ್ದು ಸರ್ಕಾರದ ಯೋಜನೆಗಳೆಲ್ಲವನ್ನು ಸ್ತ್ರೀಯರೇ ನಡೆಸುತ್ತಿದ್ದಾರೆ. ದೇಶದಲ್ಲೇ ಅಭಿವೃದ್ದಿ ವಿಚಾರದಲ್ಲಿ ಕೇರಳ ನಂಬರ್.1 ರಾಜ್ಯವಾಗಿದೆ ಎಂದು ಬಣ್ಣಿಸಿದರು.

nudikarnataka.com

ಸ್ವಾತಂತ್ರ್ಯದ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಬಂಡವಾಳಶಾಹಿ ಪರ ಆರ್ಥಿಕ ನೀತಿಯನ್ನು ಜಾರಿ ಮಾಡಿದ್ದರಿಂದ ಇಂದು ಬಡ ಭಾರತವೇ ಕಣ್ಣಿಗೆ ರಾಚುತ್ತಿದೆ. ಬಡತನ, ನಿರುದ್ಯೋಗ, ಅನಕ್ಷರತೆ, ಅನಾರೋಗ್ಯ, ರೈತರಿಗೆ ಅವೈಜ್ಞಾನಿಕ ಬೆಲೆ, ಜಾತಿ ವ್ಯವಸ್ಥೆ, ಕಂದಾಚಾರ, ಮೌಢ್ಯ ಇಂದಿಗೂ ಮುಂದುವರೆಯುತ್ತಿದೆ. ಇದನ್ನೇ ಬಿಜೆಪಿ ಸರ್ಕಾರ ತೀವ್ರವಾಗಿ ಮುಂದುವರೆಸುತ್ತಿದೆ ಎಂದು ವಿಷಾದಿಸಿದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಸಿಪಿಐ(ಎಂ) ಸಾವಿರಾರು ಕಾರ್ಯಕರ್ತರು, ಮುಖಂಡರು ಮಂಡ್ಯ ರಸ್ತೆ, ಮದ್ದೂರು-ಮಳವಳ್ಳಿ ಹೆದ್ದಾರಿಯಲ್ಲಿ ಜಾಥಾ ನಡೆಸಿದರು. ತುಂತುರು ಮಳೆಯಲ್ಲೂ 2 ಸಾವಿರಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಸಮಾವೇಶದಲ್ಲಿ ಪಾಲ್ಗೊಂಡು ಸಮಾವೇಶವನ್ನು ಯಶಸ್ವಿಗೊಳಿಸಿದರು.

ವೇದಿಕೆಯಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಸೈಯದ್ ಮುಜೀದ್, ಮೀನಾಕ್ಷಿ ಸುಂದರಂ, ರಾಜ್ಯಸಮಿತಿ ಸದಸ್ಯರಾದ ಕೆ.ಪುಟ್ಟಮಾದು, ದೇವಿ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸಿ.ಕುಮಾರಿ, ಟಿ.ಎಲ್.ಕೃಷ್ಣೇಗೌಡ, ಎನ್.ಎಲ್.ಭರತ್ ರಾಜು, ಸಿದ್ದತಾ ಸಮಿತಿ ಅಧ್ಯಕ್ಷ ಟಿ.ಯಶವಂತ್, ಪ್ರಧಾನ ಕಾರ್ಯದರ್ಶಿ ಟಿ.ಬಿ.ಶೋಭಾ, ಕಾರ್ಯಾಧ್ಯಕ್ಷ ಹನುಮೇಶ್, ಅನಿತಾ, ಬಿ.ಎಂ.ಇವಮಲವಯ್ಯ, ಜಿ.ರಾಮಲಿಂಗಯ್ಯ, ಕೆ.ಬಸವರಾಜು, ಸುಶೀಲ ಸೇರಿದಂತೆ ಹಲವರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ