ಅಂಬೇಡ್ಕರ್ ಪರಿನಿಬ್ಬಾಣ ದಿನದ ಅಂಗವಾಗಿ ಕರ್ನಾಟಕ ಜನಶಕ್ತಿ ಸಂಘಟನೆ ವತಿಯಿಂದ ಡಿ.16ರಂದು ಶೋಷಿತ ಸಮುದಾಯಗಳ ಮಂಥನ ಸಮಾವೇಶವು ಡಿ.16 ಬೆಳಿಗ್ಗೆ 10.30 ಗಂಟೆಯಿಂದ ಬೆಂಗಳೂರು ಶಿವಾನಂದ ಸರ್ಕಲ್ ಸಮೀಪದ ಗಾಂಧಿ ಭವನದಲ್ಲಿ ನಡೆಯಲಿದೆ.
ಸಮಾವೇಶದ ಉದ್ಘಾಟನೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಆಗಮಿಸಲಿದ್ದಾರೆ. ಕರ್ನಾಟಕದ ದಲಿತ ಚಳುವಳಿಯ ಹಿರಿಯ ನಾಯಕ ಎನ್.ವೆಂಕಟೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ದಲಿತ- ಆದಿವಾಸಿ ಸಮುದಾಯ, ಅಲ್ಪಸಂಖ್ಯಾತ ಸಮುದಾಯ, ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯ ಹಾಗೂ ಅತಿಹಿಂದುಳಿದ ಸಮುದಾಯಗಳ ಕುರಿತ ಪ್ರತ್ಯೇಕ ಗೋಷ್ಟಿಗಳಿರಲಿವೆ.
ಸಮಾರೋಪದಲ್ಲಿ ಕರ್ನಾಟಕ ಜನಶಕ್ತಿಯ ರಾಜ್ಯಾಧ್ಯಕ್ಷರೂ, ಹಿರಿಯ ಹೋರಾಟಗಾರರೂ ಆದ ನೂರ್ ಶ್ರೀಧರ್ ಮಾತಾಡಲಿದ್ದಾರೆಂದು ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಪೂರ್ಣಿಮಾ, ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು, ಜಗದೀಶ್ ನಗರಕೆರೆ ಹಾಗೂ ಮಹಿಳಾ ಮುನ್ನಡೆಯ ಶಿಲ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




