ಕನ್ನಡ ಭಾಷೆ -ಸಾಹಿತ್ಯ -ಸಮ್ಮೇಳನ ಹಾಗೂ ಸಾಮಾನ್ಯ ಜ್ಞಾನದ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿರುವುದು ಮಾಹಿತಿ ಪೂರಕ ಕಾರ್ಯಕ್ರಮವಾಗಿದೆ, ಇಂತಹ ಕಾರ್ಯಕ್ರಮವು ಅವಶ್ಯಕವಾಗಿದೆ ಎಂದು ಕ್ಷೇತ್ರದ ಶಿಕ್ಷಣಾಧಿಕಾರಿ ಮಹದೇವು ಹೇಳಿದರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಸಮ್ಮೇಳನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಮಂಡ್ಯದ ರೋಟರಿ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ರಸಪ್ರಶ್ನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡು, ಸಾಮಾನ್ಯ ಜ್ಞಾನದ ಜೊತೆಗೆ ಸಾಹಿತ್ಯದ ಜ್ಞಾನವನ್ನು ತಿಳಿದುಕೊಂಡು, ಸಾಹಿತ್ಯ ಸಮ್ಮೇಳಗಳಲ್ಲಿ ಭಾಗವಹಿಸಿ ಮತ್ತಷ್ಟು ಜ್ಞಾನವನ್ನು ವೃದ್ಧಿಸಿಕೊಂಡು, ತಮ್ಮ ತಮ್ಮ ಕುಟುಂಬದವರು ಮನೆಮಂದಿಯನ್ನೆಲ್ಲ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವಂತೆ ಮಾಡುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಹಾಗಾಗಿ ವಿದ್ಯಾರ್ಥಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮಂಡ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಲಿಂಗು ಪ್ರಾಸ್ತಾವಿಕವಾಗಿ ಮಾತನಾಡಿ, 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮೂರನೇ ಭಾರಿಗೆ ನಡೆಯುತ್ತಿದೆ. ಹಾಗಾಗಿ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳು ತಮ್ಮ ತಂದೆ -ತಾಯಿ -ಸಹೋದರ -ಸಹೋದರಿ -ನೆರೆ ಹೊರೆ ಹಾಗೂ ಸಂಬಂಧಿಕರೊಂದಿಗೆ ಮೂರು ದಿನವೂ ಭಾಗವಹಿಸಿ ಸಮ್ಮೇಳನ ಗೋಷ್ಠಿಗಳು ಹಾಗೂ ಊಟದ ಸವಿಯನ್ನು ಅಹ್ವಾದಿಸಬೇಕೆಂದು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.
ಇವೆಂಟ್ಸ್ ಸಮಿತಿಯ ಅಧ್ಯಕ್ಷ ಸಬ್ಬನಹಳ್ಳಿ ಶಶಿಧರ್ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹ ಕಾರ್ಯದರ್ಶಿ ಜಿ. ಧನಂಜಯ ದರಸಗುಪ್ಪೆ, ಇವೆಂಟ್ಸ್ ಸಮಿತಿ ಸಂಚಾಲಕ ಕೆ. ಶಂಭು ಸಬ್ಬನಹಳ್ಳಿ, ಎಂ.ಮಂಚಶೆಟ್ಟಿ ಕಡಿವಾಗಿಲು, ಶಿಕ್ಷಣ ಇಲಾಖೆ ಅಧಿಕಾರಿ ಉಮೇಶ್, ದೈ.ಶಿ.ಪ ಹೂವಯ್ಯ, ಇ. ಸಿ. ಓ ಗಳಾದ ಸ್ವಾಮಿ, ಮಧುಸೂದನ್,ಹಾಗೂ ರೋಟರಿ ಶಾಲೆಯ ಮುಖ್ಯಸ್ಥರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




