2024 ನೇ ಸಾಲಿನ ಎಚ್. ಎಲ್.ಕೇಶವಮೂರ್ತಿ ವೈಚಾರಿಕ ಪ್ರಶಸ್ತಿಗೆ ಲೇಖಕ, ಪ್ರಗತಿಪರ ಚಿಂತಕ ಸಿದ್ದನಗೌಡ ಪಾಟೀಲರನ್ನು ಆಯ್ಕೆ ಮಾಡಲಾಗಿದೆ.
ಸಾಮಾಜಿಕ ಹೋರಾಟಗಾರ,ಲೇಖಕರೂ ಆದ ಸಿದ್ದನಗೌಡ ಪಾಟೀಲರ ಸಾಮಾಜಿಕ ಕಳಕಳಿ,ಹೋರಾಟ ಗುರುತಿಸಿ ಅವರನ್ನು ಹಿರಿಯ ಸಾಹಿತಿ ಎಚ್.ಎಲ್.ಕೇಶವಮೂರ್ತಿ ಪ್ರತಿಷ್ಠಾನ ಪ್ರಶಸ್ತಿ ನೀಡುತ್ತಿದೆ.
ಪ್ರಶಸ್ತಿ ಪ್ರದಾನ ಸಮಾರಂಭವು 4ನೇ ಜನವರಿ, 2025ರ ಶನಿವಾರ ಬೆಳಿಗ್ಗೆ 10.30 ಕ್ಕೆ ಮಂಡ್ಯದ ಕರ್ನಾಟಕ ಸಂಘದ ಆವರಣದಲ್ಲಿರುವ ಕೆ.ವಿ. ಶಂಕರಗೌಡ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನ ತಿಳಿಸಿದೆ.




