Thursday, November 19, 2026

ಪ್ರಾಯೋಗಿಕ ಆವೃತ್ತಿ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ; 201 ಕಲಾ ತಂಡಗಳಿಂದ ಕಾರ್ಯಕ್ರಮ

ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸುವುದರ‌ ಜೊತೆಜೊತೆಗೆ ಸಮ್ಮೇಳನದ‌ ಮಹತ್ವವನ್ನು ಜನಸಾಮಾನ್ಯರು ಅನ್ಯಭಾಷಿಕರಿಗೆ ತಿಳಿಸುವ ಕೆಲಸಕ್ಕೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ‌ ಸಾಕ್ಷಿಯಾಗಲಿದೆ.

ಡಿ.20, 21, 22ರಂದು ಮಂಡ್ಯದಲ್ಲಿ ಮೂರು ದಿನಗಳ ಕಾಲ ಜರುಗಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಲವು ವಿಶೇಷತೆ, ವಿಭಿನ್ನತೆ, ಹೊಸತನಗಳಿಗೆ ವೇದಿಕೆಯಾಗಲಿದೆ. ಸಾಹಿತ್ಯ ಸಮ್ಮೇಳನದ ಪ್ರಮುಖ ಆಕರ್ಷಣೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಒಂದು.

ಕನ್ನಡ ಪ್ರೇಮಿಗಳಿಗೆ ಹಾಗೂ ಸಾಹಿತ್ಯಾಸಕ್ತರಿಗೆ ನುಡಿಹಬ್ಬದ ಸವಿಯ ಜೊತೆಗೆ ಕರುನಾಡು ಮತ್ತು ಹೊರನಾಡಿನ ಕಲೆ, ಕಲಾಪ್ರಕಾರಗಳನ್ನು ಪ್ರದರ್ಶಿಸಲು ಸಾಂಸ್ಕೃತಿಕ ಸಮಿತಿ ವೇದಿಕೆ ಸಿದ್ಧಪಡಿಸಿದೆ. ನಾನಾ ಬಗೆಯ ಕಲೆ, ಕಲಾಪ್ರಕಾರಗಳನ್ನು ನಾಡಿನ ಜನತೆಗೆ ಪ್ರದರ್ಶಿಸಲು ರಾಜ್ಯ ಹೊರರಾಜ್ಯಗಳಿಂದ ಕೂಡ ಕಲಾವಿದರು, ಕಲಾ ತಂಡಗಳು ಮಂಡ್ಯಕ್ಕೆ ಆಗಮಿಸಲಿವೆ.

ಮೇಳೈಸಲಿದೆ ಮಂಡ್ಯ ಜಿಲ್ಲೆಯಲ್ಲಿ ಪೊಲೀಸ್ ಬ್ಯಾಂಡ್

ಮಂಡ್ಯ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ   ಡಿಸೆಂಬರ್ 22 ರಂದು ಸಂಜೆ 6 ಗಂಟೆಗೆ ಪೊಲೀಸ್ ಬ್ಯಾಂಡ್ ಮೇಳೈಸಲಿದೆ. ಮೈಸೂರು ದಸರಾದಲ್ಲಿ ಪೊಲೀಸ್ ಬ್ಯಾಂಡ್ ನೋಡಲು ಜನರು ಖಾತರದಿಂದ ಕಾಯುತ್ತಾರೆ ಈ ಅವಕಾಶವನ್ನು ಜಿಲ್ಲಾ ಉಸ್ತುವಾರಿ ಸಚಿವರ ಕೋರಿಕೆಯ ಮೇರೆಗೆ ಮಾನ್ಯ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಇಂತಹ ಸದವಕಾಶವನ್ನು ಮಂಡ್ಯ ಜಿಲ್ಲೆಯ ಜನತೆಗೆ ಜಿಲ್ಲೆಯಲ್ಲೇ ಕಲ್ಪಿಸಿಕೊಟ್ಟಿರುವುದು ಈ ಬಾರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವಿಶೇಷತೆ‌ ಎನ್ನಬಹುದು.

-ದಿನೇಶ್ ಗೂಳಿಗೌಡ
ಶಾಸಕರು ಹಾಗೂ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಸಮನ್ವಯ ಸಮಿತಿ ಅಧ್ಯಕ್ಷರು

ಸಾಹಿತ್ಯ ಸಮ್ಮೇಳನವೆಂದರೆ ಅಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿಯ ಅನಾವರಣ. ಸಾಹಿತ್ಯ ಸಮ್ಮೇಳನದಲ್ಲಿ ನಾಡಿನ ಕಲೆ ಪ್ರದರ್ಶಿಸಲು ಈಗಾಗಲೇ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಆನ್ ಲೈನ್, ಆಫ್ ಲೈನ್ ಮೂಲಕ ಸಾಕಷ್ಟು ಪ್ರಚಾರ ಮಾಡಿ ಅರ್ಜಿ ಸ್ವೀಕರಿಸಿದ್ದು ಸಾಂಸ್ಕೃತಿಕ ಸಮಿತಿಯ ಆಯ್ಕೆ ಸಮಿತಿಯಿಂದ ಕಲಾವಿದರು, ಕಲಾತಂಡಗಳನ್ನು ಆಯ್ಕೆ ಮಾಡಿ ಪಟ್ಟಿ ಪ್ರಕಟಿಸಲು ಕ್ರಮಕೈಗೊಳ್ಳಲಾಗಿದೆ.

3 ವೇದಿಕೆಗಳಲ್ಲಿ ಕಾರ್ಯಕ್ರಮ

ರಾಜ್ಯಾದ್ಯಂತ ಬಂದಂತಹ ಅರ್ಜಿಗಳು 620 ಅದರಲ್ಲಿ ಆಯ್ಕೆಯಾದ ತಂಡಗಳು 201. ಮುಖ್ಯ ವೇದಿಕೆ ಹಾಗೂ ಸಮಾನಂತರ ವೇದಿಕೆ ಸೇರಿದಂತೆ 3 ವೇದಿಕೆಗಳಲ್ಲಿ ಕಾರ್ಯಕ್ರಮಗಳು ಬೆಳಿಗ್ಗೆ ಎಂಟರಿಂದ ಹತ್ತು ಗಂಟೆವರೆಗೆ ಸಂಜೆ 7ರಿಂದ 10.30 ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ.

ಗೌರವಧನ ಪರಿಷ್ಕರಣೆ

ಗೌರವಧನದಲ್ಲಿ ತಾರತಮ್ಯ ಆಗುವುದಕ್ಕೆ ಆಸ್ಪದ ನೀಡದೇ ಎಲ್ಲಾ ಕಲಾವಿದರನ್ನು ಸಮಾನ ರೀತಿಯಲ್ಲಿ ಗೌರವಿಸಲಾಗುತ್ತಿದೆ. ಸ್ಥಳೀಯ ಕಲಾ ತಂಡಗಳ ಗೌರವಧನವನ್ನು ಪರಿಷ್ಕರಣೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚುವರಿ ಗೌರವಧನವನ್ನು ಕಲಾವಿದರಿಗೆ ನೀಡಲಾಗುತ್ತಿದೆ. ಕನಿಷ್ಠ 20,000 ಗರಿಷ್ಠ 40000 ರೂ. ಗೌರವಧನವನ್ನು ನೀಡಲಾಗುವುದು. ಕಲಾಪ್ರಕಾರಗಳು ನೀಡುವ ಕಲಾ ಪ್ರದರ್ಶನದ ಮತ್ತು ಅವರು ಬರುವ ಸ್ಥಳದ ದೂರದ ಮೇಲೆ ಗೌರವಧನ ನೀಡಲಾಗುವುದು.

ಕಲಾಪ್ರಕಾರದಲ್ಲಿ ಜಿಲ್ಲೆಯ ಮಹಿಳೆಯರು, ವಿಕಲಚೇತನರು, ಮಕ್ಕಳು, ಹಿರಿಯರು ಎಲ್ಲರನ್ನೂ ಸಹ ಗಣನೆಗೆ ತೆಗೆದುಕೊಳ್ಳಲಾಗಿದೆ. ಕಲಾವಿದರಿಗೆ ನೀಡಲಾಗುವ ಗೌರವಧನದಲ್ಲಿ ಜಿ.ಎಸ್‌ಟಿ ಹಾಗೂ ಸರ್ವಿಸ್ ಟ್ಯಾಕ್ಸ್  ಸೇರಿರುವುದಿಲ್ಲ.  ಜಿಎಸ್‌ಟಿ ಹಾಗೂ ಸರ್ವಿಸ್ ಟ್ಯಾಕ್ಸ್ ಅನ್ನು ಕನ್ನಡ ಸಂಸ್ಕೃತಿ ಇಲಾಖೆಯೇ ಬರಿಸಲಿದೆ. ಮೈಸೂರು ವಿಭಾಗಕ್ಕೆ ಶೇಕಡ 50ರಷ್ಟು ಹಾಗೂ ಇತರ ಜಿಲ್ಲೆಗೆ ಶೇಕಡ 50ರಷ್ಟು ಕಾರ್ಯಕ್ರಮ ನೀಡಲಾಗುವುದು.

ಬೇರೆ  ರಾಜ್ಯದ 5 ಕಲಾ ಪ್ರಕಾರಗಳು, ಹೊರ ಜಿಲ್ಲೆಯಿಂದ 33 ಹಾಗೂ ಮಂಡ್ಯ ಜಿಲ್ಲೆಯಿಂದ 109 ಕಲಾ ತಂಡಗಳು ಭಾಗಿಯಾಗಲಿವೆ. ಮೂಡಲಪಾಯ, ಯಕ್ಷಗಾನ, ಬುಡಕಟ್ಟು ಸಮುದಾಯದ ನೃತ್ಯಗಳು, ನಾಡಿನ ಹೆಸರಾಂತ ಜನಪದ ಕಲಾ ಪ್ರದರ್ಶನಗಳು, ಸುಗಮ ಸಂಗೀತ ಇನ್ನಿತರ ಕಲಾ ಪ್ರದರ್ಶನಗಳು ನಡೆಯಲಿದೆ.

ಮಂಡ್ಯ ಜಿಲ್ಲೆ ಹಾಗೂ ಗಡಿ ಜಿಲ್ಲೆಗಳಿಗೆ ಶೇ.50 ಇತರೆ ಜಿಲ್ಲೆಯ ಕಲಾವಿದರಿಗೆ ಶೇ. 50ರಷ್ಟು ಪ್ರಾಧಾನ್ಯತೆ ನೀಡಲಾಗಿದೆ. ಮುಖ್ಯ ವೇದಿಕೆ ಮತ್ತು ಸಮಾನಾಂತರ ವೇದಿಕೆಗಳಲ್ಲಿ ರಾಜ್ಯ ಮಟ್ಟದ ಕಲಾವಿದರು ಕಾರ್ಯಕ್ರಮ‌ ನಡೆಸಿಕೊಡಲಿದ್ದಾರೆ. ಇದರಲ್ಲಿ ಮಂಡ್ಯ ಮೂಲದವರು ಕೂಡ ಇರಬಹುದು. ಬಹುಮುಖ್ಯವಾಗಿ ಮಂಡ್ಯ ಜಿಲ್ಲೆಯ ಕಲಾವಿದರಿಗೆಂದೇ ಕಲಾಮಂದಿರ ಮತ್ತು ಅಂಬೇಡ್ಕರ್ ಭವನದಲ್ಲಿ ಮೂರು ದಿನ ನಿರಂತರವಾಗಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

ಅನುಭವ, ಜನಪ್ರಿಯತೆ, ಅರ್ಹತೆ, ವಿಶೇಷತೆ, ಶೈಕ್ಷಣಿಕ ಪದವಿಗಳು, ಪಡೆದಿರುವ ಪ್ರಶಸ್ತಿಗಳು ಇತ್ಯಾದಿಗಳನ್ನು ಪರಿಗಣಿಸಿ ಕಲಾವಿದರ ಆಯ್ಕೆಗೆ ಕ್ರಮವಹಿಸಲಾಗಿದೆ. ಅವರ ವಾಸ್ತವ್ಯಕ್ಕೆ ಮಂಡ್ಯ ವಿಶ್ವವಿದ್ಯಾಲಯ ಹಾಗೂ ಬಿಜಿಎಸ್ ಸಮುದಾಯ ಭವನ ಕಾಯ್ದಿರಿಸಲಾಗಿದೆ. ಕಲಾವಿದರು ತಂಗುವ ಸ್ಥಳದಿಂದ ಕಾರ್ಯಕ್ರಮದ ಸ್ಥಳಕ್ಕೆ ತೆರಳಲು ಸಾರಿಗೆ ವ್ಯವಸ್ಥೆ ಮಾಡಲಾಗಿದೆ.

ಸಮ್ಮೇಳನದ ವೇದಿಕೆ ನಿರ್ಮಾಣದ ಸಿದ್ಧತೆ ಪರಿಶೀಲಿಸಿ ದಿನೇಶ್ ಗೂಳಿಗೌಡ

ಡಿ. ೨೦ರಿಂದ ಮೂರು ದಿನಗಳು ನಡೆಯಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ವೇದಿಕೆಯನ್ನು ವಿಧಾನ ಪರಿಷತ್ ಶಾಸಕ ಹಾಗೂ ಮಾಧ್ಯಮ ಸಮಿತಿ ಅಧ್ಯಕ್ಷರಾದ ದಿನೇಶ್ ಗೂಳಿಗೌಡ ಅವರು ಶುಕ್ರವಾರ ಪರಿಶೀಲಿಸಿದರು.

ಮಂಡ್ಯ ನಗರದ ಹೊರವಲಯದ ಸಾಂಜೋ ಆಸ್ಪತ್ರೆ ಹಿಂಭಾಗದ ವಿಶಾಲವಾದ ೬೦ ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಸಮ್ಮೇಳನದ ಮುಖ್ಯ ವೇದಿಕೆ, ಆಹಾರ, ಪುಸ್ತಕ ಸೇರಿದಂತೆ ಇನ್ನಿತರೆ ಮಳಿಗೆಗಳ ನಿರ್ಮಾಣದ ಸ್ಥಳಕ್ಕೆ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ. ತ್ಯಾಗರಾಜು ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ೩ನೇ ಬಾರಿಗೆ ಸಕ್ಕರೆ ಜಿಲ್ಲೆ ಮಂಡ್ಯ ನಗರದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ನಮ್ಮೆಲ್ಲರ ಹೆಮ್ಮೆ. ಸಮ್ಮೇಳನ ಕನ್ನಡದ ಹಬ್ಬ, ನಮ್ಮ ಮನೆಯ ಹಬ್ಬವಾಗಿದ್ದು, ಕುಟುಂಬದವರೊಂದಿಗೆ ಜಿಲ್ಲೆಯ ಜನತೆ ಒಟ್ಟಾಗಿ ನುಡಿ ಜಾತ್ರೆಯನ್ನು ಆಚರಿಸಬೇಕಾಗಿದೆ ಎಂದರು.

ನುಡಿ ಜಾತ್ರೆಗೆ ರಾಜ್ಯ, ಹೊರ ರಾಜ್ಯ ಹಾಗೂ ದೇಶ-ವಿದೇಶಗಳಿಂದ ಕನ್ನಡಾಭಿಮಾನಿಗಳು, ಸಾಹಿತಿಗಳು ಆಗಮಿಸುತ್ತಿದ್ದು, ನೋಂದಣಿಯಾಗಿರುವವರಿಗೆ ಯಾವುದೇ ರೀತಿಯ ತೊಂದರೆಯಾಗದAತೆ ಅಗತ್ಯ ಕ್ರಮ ವಹಿಸಲಾಗಿದೆ. ಅಲ್ಲದೆ, ಸಮ್ಮೇಳನಕ್ಕೆ ಆಗಮಿಸುವ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದ್ದು, ಸಂಬAಧಿಸಿದ ಸಮಿತಿಯ ಅಧ್ಯಕ್ಷರು ಹಾಗೂ ಅಧಿಕಾರಿಗಳು ಸಕಲ ರೀತಿಯ ವ್ಯವಸ್ಥೆಯಲ್ಲಿ ತೊಡಗಿದ್ದಾರೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಭೂ ಸೇನಾ ನಿಗಮದ ಮುಖ್ಯ ಇಂಜಿನಿಯರ್ ಸೋಮಶೇಖರ್, ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಹರ್ಷ, ಎಇಇ ಸತೀಶ್, ವೇದಿಕೆ ನಿರ್ಮಾಣ ಹೊಣೆ ಹೊತ್ತಿರುವ ಷರೀಪ್, ಗೋಪಾಲಕೃಷ್ಣ ಇತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ