Friday, November 20, 2026

ಪ್ರಾಯೋಗಿಕ ಆವೃತ್ತಿ

ನುಡಿಜಾತ್ರೆ | ಹೆಣ್ಣುಭ್ರೂಣ ಹತ್ಯೆ ವಿರುದ್ದ ಹೋರಾಟ ; ವಿಮೋಚನ ಜರ್ನಾಧನ್ ಗೆ ಸನ್ಮಾನ

ಮಂಡ್ಯದಲ್ಲಿ ನಡೆದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೆಣ್ಣುಭ್ರೂಣ ಹತ್ಯೆ ವಿರುದ್ದ ಅವಿರತ ಹೋರಾಟ ಮಾಡಿದ ಸಮಾಜ ಸೇವೆಯನ್ನು ಗುರುತಿಸಿ ವಿಮೋಚನಾ ಸಂಘಟನೆಯ ಜನಾರ್ಧನ್ ಅವರನ್ನು ಸನ್ಮಾನಿಸಿರುವುದನ್ನು ಮಹಿಳೆ ಮುನ್ನಡೆಯ ಸಂಘಟನೆ ಸ್ವಾಗತಿಸಿದೆ.

ಹೆಣ್ಣು ಭ್ರೂಣ ಹತ್ಯೆ ತಡೆಯುವಲ್ಲಿ ಶ್ರಮಿಸುತ್ತಿರುವ, ಹಲವು ಹೋರಾಟ, ಜಾಗೃತಿ ಶಿಕ್ಷಣ, ತರಬೇತಿ ಸಂವಹನ, ಕಾನೂನಾತ್ಮಕ ಪ್ರಕ್ರಿಯೆಗಳಲ್ಲಿ ಮಾಡಿದ ಸೇವೆ ಸಲ್ಲಿಸಿ, ಸಮ್ಮೇಳನದ ಸರ್ವಾಧ್ಯಕ್ಷರಾದ ಸಾಹಿತಿ ಗೊ.ರು. ಚನ್ನಬಸಪ್ಪ ಅಧ್ಯಕ್ಷತೆಯಲ್ಲಿ ಸನ್ಮಾನಿಸಿರುವುದು ಅಭಿನಂದನೀಯ ಎಂದು ಮಹಿಳಾ ಮುನ್ನಡೆಯ ಪೂರ್ಣಿಮ ತಿಳಿಸಿದ್ದಾರೆ.

ಇಂತಹ ಹೋರಾಟ ಮಾಡುವ ಮನಸ್ಸಿನ ವ್ಯಕ್ತಿಗಳು ಸಮಾಜದಲ್ಲಿ ಹೆಚ್ಚಾಗಬೇಕು, ಆ ಮೂಲಕ ಮಂಡ್ಯಕ್ಕೆ ಅಂಟಿರುವ ಹೆಣ್ಣು ಭ್ರೂಣ ಹತ್ಯೆಯ ಭೂತವನ್ನು ತೊಲಗಿಸಲು ಹೆಚ್ಚು ಅರಿವಿನ ಅಭಿಯಾನಗಳು ನಡೆಯಬೇಕು. ಈ ನಿಟ್ಟಿನಲ್ಲಿ ಮಹಿಳಾ ಮುನ್ನಡೆ ಮತ್ತು ಅತ್ಯಾಚಾರ ವಿರೋಧಿ ಆಂದೋಲನವು ಜನಾರ್ಧನ್ ಅವರ ಜೊತೆಗೆ ಯಾವಾಗಲೂ ಬೆಂಬಲವಾಗಿ ನಿಲ್ಲುತ್ತದೆ. ಹೆಣ್ಣು ಮಕ್ಕಳ ಉಳಿವಿಗಾಗಿ ಅವರ ಹೋರಾಟ ಧೀರ್ಘವಾಗಲಿ ಮತ್ತು ಉಳಿದವರಿಗೂ ಮಾದರಿಯಾಲಿ ಎಂದು ಪೂರ್ಣಿಮ ಆಶಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ