Tuesday, November 24, 2026

ಪ್ರಾಯೋಗಿಕ ಆವೃತ್ತಿ

ಹೊಸ ವರ್ಷದ ಕೊಡುಗೆ | ವಾಣಿಜ್ಯ LPG ಸಿಲಿಂಡರ್ ಬೆಲೆ ಇಳಿಕೆ

ಇಂಡಿಯನ್ ಆಯಿಲ್ ಸೇರಿದಂತೆ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು ಎಲ್​ಪಿಜಿ ದರಗಳನ್ನು ಇಳಿಸುವ ಮೂಲಕ ಹೊಸ ವರ್ಷದ ಕೊಡುಗೆ ನೀಡಿವೆ.

ವಾಣಿಜ್ಯ ಎಲ್​ಪಿಜಿ ಸಿಲಿಂಡರ್​ಬೆಲೆ ಕಡಿಮೆಯಾಗಿದೆ.  19 ಕೆಜಿ ವಾಣಿಜ್ಯ ಎಲ್​ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 14.5೦ ರೂನಿಂದ 16 ರೂವರೆಗೆ ಇಳಿಕೆ ಆಗಿದೆ. ಬೆಂಗಳೂರಿನಲ್ಲಿ 14.5೦ ರೂನಷ್ಟು ಇಳಿಕೆ ಆಗಿದೆ. ಇನ್ನು, 47 ಕಿಲೋ ವಾಣಿಜ್ಯ ಸಿಲಿಂಡರ್ ಬೆಲೆ 36.50 ರೂ.ಗಳಷ್ಟು ಕಡಿಮೆಯಾಗಿದೆ. ಆದರೆ, ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್​ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ವಾಣಿಜ್ಯ ಸಿಲಿಂಡರ್​ಗಳ ಬೆಲೆ ಆರು ತಿಂಗಳ ನಂತರ ಮೊದಲ ಬಾರಿಗೆ ಇಳಿಕೆ ಮಾಡಲಾಗಿದೆ. 14.2 ಕಿಲೋ ಮತ್ತು 5 ಕಿಲೋ ಎಲ್​ಪಿಜಿ ಸಿಲಿಂಡರ್​ಗಳು ಗೃಹಬಳಕೆಗೆ ಸೀಮಿತವಾಗಿವೆ. 19 ಕಿಲೋ ಮತ್ತು 47 ಕಿಲೋ ಸಿಲಿಂಡರ್​ಗಳು ವಾಣಿಜ್ಯ ಬಳಕೆಗೆ ನಿಗದಿಯಾಗಿವೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ