Friday, November 20, 2026

ಪ್ರಾಯೋಗಿಕ ಆವೃತ್ತಿ

ಪ್ರಿಯಾಂಕ್ ಖರ್ಗೆ ವಿರುದ್ದ ಅಪಪ್ರಚಾರ| ಬಿಜೆಪಿ ವಿರುದ್ದ ‘ಕಾಂಗ್ರೆಸ್ ತಮಟೆ ಚಳವಳಿ’

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಬಿಜೆಪಿ ಹಾಗೂ ಸಂಘ ಪರಿವಾರವು ಗುರಿಯಾಗಿಟ್ಟುಕೊಂಡು ರಾಜೀನಾಮೆ ಕೇಳುವ ನಾಟಕವಾಗುತ್ತಿದೆ ಎಂದು ಆರೋಪಿಸಿ ಮಂಡ್ಯನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪ್ರಗತಿಪರ ಮುಖಂಡರು ಶನಿವಾರ ತಮಟೆ ಚಳವಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯನಗರದ ಸಂಜಯ ವೃತ್ತದಲ್ಲಿ ಛಲವಾದಿ ನಾರಾಯಣ ಸ್ವಾಮಿ, ವಿಜಯೇಂದ್ರ, ಸಿ.ಟಿ.ರವಿ ಅವರ ಭಾವಚಿತ್ರಗಳಿಗೆ ಕಪ್ಪು ಮಸಿ ಬಳಿದು ಆಕ್ರೋಶ ವ್ಯಕ್ತಡಪಿಸಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಹಲವಾರು ಹಗರಣಗಳನ್ನು ಪ್ರಿಯಾಂಗ್ ಖರ್ಗೆ ಅವರು ಹೊರ ತಂದಿದ್ದಾರೆ. ಅಂದಿನ ಬಿ.ಜೆ.ಪಿ. ಸರ್ಕಾರದ ಬಿಟ್ ಕಾಯಿನ್ ಮತ್ತು ಕ್ರಿಷ್ಟೊ ಕರೆನ್ಸಿ ಹಗರಣ, ಪಿ.ಎಸ್.ಐ ಪರೀಕ್ಷ ಹಗರಣಗಳಂತಹ ಮತ್ತು ಹಲವಾರು ಬಿ.ಜಿ.ಪಿ ರವರ ಭ್ರಷ್ಟಚಾರಗಳನ್ನು ಬಯಲಿಗೆಳೆದು ಸಾರ್ವಜನಿಕರ ಮುಂದಿಟ್ಟ ಕಾರಣದಿಂದ ಇಂದು ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ದೂರಿದರು.

ಇತ್ತಿಚೀನ ದಿನಗಳಲ್ಲಿ ಬಿ.ಜೆ.ಪಿ ಯ ಕೆಲವು ನಾಯಕರು ಅದರಲ್ಲಿಯೂ ಛಲವಾದಿ ನಾರಾಯಣ್ ಸ್ವಾಮಿ, ಇಬ್ಬರು ರವಿಗಳು ಮತ್ತು ಆರ್. ಅಶೋಕ್ ಅವರು ದಿನ ಬೆಳಗ್ಗೆ ಎದ್ದರೆ ಪ್ರಿಯಾಂಕ್ ಖರ್ಗೆ ಹೆಸರನ್ನ ಹೇಳಿ ರಾಜಿನಾಮೆ ಕೊಡಿ, ರಾಜಿನಾಮೆ ಕೊಡಿ, ಎನ್ನುವುದಕಿಂತ ಬದಲು ನಿಮ್ಮ ರಾಷ್ಟ್ರೀಯ ನಾಯಕರ ಹೆಸರುಗಳನ್ನು ಒಂದುನೂರು ಸಲ ಜಪ ಮಾಡಿ ನೀವೆಲ್ಲರೂ ಬಹುತೇಕ ನಿಮ್ಮ ನಾಯಕರು ಹೇಳಿದ ಹಾಗೆ ಸ್ವರ್ಗಕ್ಕೆ ಹೋಗಬಹುದು ಎಂದು ಲೇವಡಿ ಮಾಡಿದರು.

ಸಚಿನ್ ಪಾಂಚಾಳ್ ಬರೆದಿರುವ ಡೆತ್ ನೋಟ್‌ನಲ್ಲಿ ರಾಜು ಕಪ್ಪನೂರ ಹಾಗೂ ಅವರ ಸೋದರ ಸಂಬಂಧಿಗಳ ಹೆಸರು ಮಾತ್ರ ಉಲ್ಲೇಖವಿದೆ. ಈ ಕುರಿತು ತನಿಖೆ ನಡೆಯುತ್ತಿದೆ. ಆದರೆ, ಬಿಜೆಪಿ ಮುಖಂಡರು ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಕಾಣಿಸಿಕೊಂಡಿರುವ ರಾಜು ಕಪ್ಪನೂರ ಫೋಟೋಗಳನ್ನು ಉದ್ದೇಶಪೂರ್ವಕವಾಗಿ ಪ್ರದರ್ಶಿಸಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ಪ್ರಿಯಾಂಕ್ ಖರ್ಗೆ ಏಳಿಗೆ ಸಹಿಸುತ್ತಿಲ್ಲ. ಹೀಗಾಗಿ, ಬಿಜೆಪಿ ದಲಿತ ವಿರೋಧಿ ನಾಯಕರು ಅನಗತ್ಯವಾಗಿ ಅವರ ಹೆಸರನ್ನು ಎಳೆದು ತಂದಿದ್ದು, ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಬಿಜೆಪಿ ನಾಯಕರಿಗೆ ರಾಜೀನಾಮೆ ಕೇಳುವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಕುರುಬರ ಸಂಘದ ಜಿಲ್ಲಾಧ್ಯಕ್ಷ ಸುರೇಶ್, ಅರಸು ವೇದಿಕೆಯ ಎಲ್.ಸಂದೇಶ್, ಕಾಂಗ್ರೆಸ್ ಮುಖಂಡರಾದ ಶ್ರೀಧರ್, ಚಿನಕುರುಳಿ ರಮೇಶ್, ವಕೀಲ ಜೆ.ರಾಮಯ್ಯ, ಸುಂಡಹಳ್ಳಿ ಮಂಜುನಾಥ್, ದಸಂಸ ಎಂ.ವಿ.ಕೃ‍ಷ್ಣ, ದಲಿತ ಮುಖಂಡ ಎನ್.ಆರ್.ಚಂದ್ರಶೇಖರ್, ಕರವೇ ಮುಖಂಡ ಹೆಚ್.ಡಿ.ಜಯರಾಂ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ