ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಜಾಗೃತದಳದಿಂದ ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿ ವಿದ್ಯುತ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 14 ಪ್ರಕರಣಗಳನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮೈಸೂರು ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರಾದ ಶೀಲಾ.ಜಿ, ಪೊಲೀಸ್ ಅಧೀಕ್ಷಕರಾದ ಸವಿತಾ ಹೂಗಾರ್, ಮಾರ್ಗದರ್ಶನದಲ್ಲಿ ಹಾಗೂ ಪ್ರಭಾರ ಪೊಲೀಸ್ ಉಪಾಧೀಕ್ಷಕ ಎನ್. ಜಯಕುಮಾರ್,ಇಇ ಉಮೇಶ್ ನೇತೃತ್ವದಲ್ಲಿ ಜ.8ರಂದು ಮಂಡ್ಯ ಜಿಲ್ಲೆಯ ಮದ್ದೂರು ವಿಭಾಗ ಹಾಗೂ ನಾಗಮಂಗಲ ವಿಭಾಗದ ವ್ಯಾಪ್ತಿಗಳಲ್ಲಿ ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಸೆಸ್ಕ್ ಜಾಗೃತದಳ ಪೊಲೀಸ್ ಠಾಣೆಗಳ ಅಧಿಕಾರಿಗಳಾದ ಅರುಣಕುಮಾರಿ, ಶಶಿಕಲಾ, ಅರ್ಚನಾ, ಪಿಎಸ್ಐ., ರಾಮಚಂದ್ರ, ಎಸ್.ಲತಾ, ಎಇಇ(ವಿ) ದೀಪಕ್, ಎಇಇ(ವಿ), ಲಲಿತಾ, ಎಇ(ವಿ), ಶ್ರೀ ವಿಶ್ವನಾಥ್, ಎಇ(ವಿ) ಮತ್ತು ಮಣಿಗಂಡಸ್ವಾಮಿ, ಜೆಇ(ವಿ) ಅವರು ಮತ್ತು ಸಿಬ್ಬಂಧಿಗಳನ್ನೊಳಗೊಂಡ ತಂಡವು ಏಕ ಕಾಲದಲ್ಲಿ ಸಾಮೂಹಿಕ ದಾಳಿ ನಡೆಸಿ ವಿದ್ಯುತ್ ಕಳ್ಳತನವನ್ನು ಪತ್ತೆ ಹಚ್ಚಿದ್ದಾರೆ.




