Thursday, May 16, 2024

ಪ್ರಾಯೋಗಿಕ ಆವೃತ್ತಿ

ಸದಾ ಒಳ್ಳೆಯ ಚಿಂತನೆಗಳಿರಲಿ : ಡಾ.ಎಂ.ಜಿ.ಶಿವರಾಮು


    • ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ

    • ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ

ಜೀವ  ಮತ್ತು ಜೀವನ  ಎರಡೂ ಅತ್ಯಮೂಲ್ಯ, ಜೀವನದಲ್ಲಿ ಸದಾ ಒಳ್ಳೆಯ ಚಿಂತನೆಗಳನ್ನು ನಡೆಸಬೇಕು ಎಂದು ಆದಿಚುಂಚನಗಿರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಮು ತಿಳಿಸಿದರು.

ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಅಂಗವಾಗಿ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಡೆದ ರಕ್ಷಕರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ನಡುವೆ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರವೃತ್ತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಜೀವನದಲ್ಲಿ ಯಾವುದೇ ಸವಾಲುಗಳು ಎದುರಾದರೂ, ಮಾನಸಿಕ ಸ್ಥಿಮಿತತೆ ಕಳೆದುಕೊಳ್ಳಬಾರದೆಂದು ಹೇಳಿದರು.

ಕಾರ್ಯಕ್ರಮದ ಮೂಲ ಉದ್ದೇಶ  ಸಮುದಾಯದ ಆಯಾಯ ಗುಂಪಿನ ಜನರಲ್ಲೇ ಆತ್ಮಹತ್ಯೆ ಲಕ್ಷಣಗಳನ್ನು ಗುರುತಿಸುವುದು, ಅಂತಹವರೊಂದಿಗೆ ಸಮಾಲೋಚನೆ ನಡೆಸುವ ಮತ್ತು ಮಾನಸಿಕ ಆರೋಗ್ಯ ತಜ್ಞರಿಗೆ ಶಿಫಾರಸ್ಸು ಮಾಡುವ ಕೌಶಲ್ಯ ಮೂಡಿಸುವುದಾಗಿತ್ತು.

ಕಾರ್ಯಕ್ರಮದಲ್ಲಿ ಮಾನಸಿಕ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ.ಶಿವಕುಮಾರ್.ಬಿ.ಕೆ, ವಿದ್ಯಾರ್ಥಿ ಪೋಷಕ ಸಮಿತಿಯ ಡಾ.ವಿಜಯ್ ಕುಮಾರ್, ರಾಷ್ಟ್ರೀಯ ಸೇವಾ ಯೋಜನೆ ಘಟಕದ ಡಾ.ಶೀತಲ್.ಎಂ.ಪಿ ಮತ್ತು ಡಾ. ರಾಘವೇಂದ್ರ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!