ದೇವಸ್ಥಾನಗಳಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಓರ್ವ ಆರೋಪಿ ಬಂಧಿಸಿ ಹಾಗೂ 5.50ಲಕ್ಷ ರೂ ಮೌಲ್ಯದ ದೇವಸ್ಥಾನಗಳ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಮಳವಳ್ಳಿ ಗ್ರಾಮಾಂತರ ಪೊಲೀಸರು ಯಶ್ವಸಿಯಾಗಿದ್ದಾರೆ.
ಮಳವಳ್ಳಿ ತಾಲ್ಲೂಕಿನ ಗೌಡಗೆರೆ ಗ್ರಾಮದ ವಾಸಿ ಪ್ರದೀಪ್ (35) ಬಂಧಿತ ಆರೋಪಿ.
ಮಳವಳ್ಳಿ ತಾಲ್ಲೂಕಿನ ಗೌಡಗೆರೆ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಮೂರು ಹಿತ್ತಾಳೆ ಮಂಟಪಗಳು,18 ಹಿತ್ತಾಳೆ ಬಿರಡೆಗಳು, 03 ಹಿತ್ತಾಳೆ ಛತ್ರಿಗಳು, 1 ಹಿತ್ತಾಳೆಯ ರಥದಕಶಸ ಹಾಗೂ ಪೇಟೆ ಬೀದಿಯ ಮಂಚನಹಳ್ಳಿ ಗ್ರಾಮದ ಶ್ರೀ ಮೂಗದೇವಮ್ಮ ದೇವರ ದೇವಸ್ಥಾನದಲ್ಲಿದ್ದ ಅರಿಶಿನ ಕುಂಕುಮದ ಬಟ್ಟಲು, 1ಜೊತೆ, 100 ಗ್ರಾಂ ಬೆಳ್ಳಿತಟ್ಟೆ ಒಂದು ಜೊತೆ, 80 ಗ್ರಾಂ ನ 1 ಬಟ್ಟಲು, 2 ಹಿತ್ತಾಳೆ ಬಿಂದಿಗೆ, 1 ಜೊತೆ ಹಿತ್ತಾಳೆ ದೀಪಾಲೆ ಕಂಬಗಳನ್ನು ಕಳ್ಳತನವಾಗಿದೆ ಎಂದು ಪ್ರತ್ಯೇಕ ದೂರು ದಾಖಲಾಗಿದ್ದವು.
ದೂರಿನ ಅನ್ವಯ ಪ್ರಕರಣ ದಾಖಲು ಮಾಡಿಕೊಂಡು ಡಿವೈ ಎಸ್ ಪಿ ಕೃಷ್ಣಪ್ಪ ಮಾರ್ಗದರ್ಶನದಲ್ಲಿ ಗ್ರಾಮಾಂತರ ಇನ್ಸ್ ಪೆಕ್ಟರ್ ಮಹೇಶ್ ಮತ್ತು ಸಬ್ ಇನ್ಸ್ ಪೆಕ್ಟರ್ ಶ್ರವಣ, ದಾಸರೆಡ್ಡಿ ನೇತೃತ್ವದಲ್ಲಿ ಸಿಬ್ಬಂದಿಗಳ ತಂಡ ಕಾರ್ಯಾಚರಣೆ ಕೈಗೊಂಡು ಆರೋಪಿ ಪ್ರದೀಪ್ ನನ್ನು ಬಂಧಿಸಿ ಆರೋಪಿಯಿಂದ 5.50 ಲಕ್ಷ ರೂ ಮೌಲ್ಯದ ಆಭರಣ ವಶಪಡಿಸಿಕೊಂಡಿದೆ.
ಆರೋಪಿಗಳನ್ನು ಪತ್ತೆ ಹಚ್ಚಿದ ಮಣಿಕಂಠಸ್ವಾಮಿ, ಶಿವಕುಮಾರ್, ನಾಗೇಂದ್ರ, ಪರಮಾನಂದ, ಕೌಶಿಕ್, ಬಾನಪ್ಪ ರಾಥೋಡ್, ರವಿಕುಮಾರ, ಲೋಕೇಶ್ ಈ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಡಿವೈಎಸ್ ಪಿ ಕೃಷ್ಣಪ್ಪ, ಟೌನ್ ಇನ್ಸ್ ಪೆಕ್ಟರ್ ರವಿಕುಮಾರ್ ಇದ್ದರು.




