Monday, November 23, 2026

ಪ್ರಾಯೋಗಿಕ ಆವೃತ್ತಿ

ಸಚಿವ ಸ್ಥಾನಕ್ಕಾಗಿ ನ್ಯಾಯಾಧೀಶರ ಹರಕೆ | ರಾಷ್ಟ್ರಪತಿಗೆ ದೂರು ; ಅನ್ನದಾನಿ

ಮಳವಳ್ಳಿ ತಾಲೂಕಿನ ನ್ಯಾಯಾಲಯದ ಆವರಣದಲ್ಲಿ ದಿನಚರಿ ಹಾಗೂ ಡೈರಿ ಬಿಡುಗಡೆ ಮಾಡುವ ವೇಳೆ ಹೈಕೋರ್ಟ್ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಅವರು ನರೇಂದ್ರಸ್ವಾಮಿ ಅವರಿಗೆ ಸಚಿವ ಸ್ಥಾನ ಸಿಗಲು ಹರಕೆ ಹೊತ್ತಿಕೊಂಡಿರುವುದಾಗಿ ಹೇಳಿದ್ದು, ಭಾಷಣ ಮಾಡಿರುವ ವಿಡಿಯೋ ಸಮೇತ ರಾಷ್ಟ್ರಪತಿಗಳು, ರಾಜ್ಯಪಾಲರು ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ದೂರು ನೀಡಲಾಗುವುದು ಎಂದು ಮಾಜಿ ಶಾಸಕ ಕೆ.ಅನ್ನದಾನಿ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಸಾಮಾನ್ಯರಿಗೆ ನ್ಯಾಯ ಒದಗಿಸುವ ನ್ಯಾಯಾಧೀಶರು ಗೌಪ್ಯತೆ ಕಾಪಾಡುವ ಬದಲಿಗೆ ರಾಜಕಾರಣಿಯೋ, ರಾಜಕಾರಣಿಗಳ ಬೆಂಬಲಿಗರೇ ಎಂಬ ಅನುಮಾನ ಮೂಡುವಂತೆ ವರ್ತಿಸಿದ್ದಾರೆ ಎಂದು ಖಂಡಿಸಿದರು.

ವೇದಿಕೆಯೊಂದರಲ್ಲಿ ಓರ್ವ ರಾಜಕಾರಣಿಗೆ ಸಚಿವ ಸ್ಥಾನ ಲಭಿಸಲಿ ಎಂದು ದೇವರಲ್ಲಿ ಹರಕೆ ಹೊತ್ತಿರುವುದಾಗಿ ಹೇಳಿರುವ ಅವರು, ಸಚಿವ ಚಲುವರಾಯಸ್ವಾಮಿ ಅವರಲ್ಲಿಯೂ ಮನವಿ ಮಾಡುವುದಾಗಿ ತಿಳಿಸಿದ್ದಾರೆ. ರಾಜಕಾರಣಿಗಳಿಗಿಂತ ಒಂದು ಕೈ ಹೆಚ್ಚಾಗಿ ಭಾಷಣ ಮಾಡಿರುವ ವಿಡಿಯೋ ಸಮೇತ ರಾಷ್ಟ್ರಪತಿಗಳು, ರಾಜ್ಯಪಾಲರು ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ದೂರು ನೀಡಲಾಗುವುದು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಈ ಸಂಬಂಧ ಗಮನ ಹರಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು.ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಈಗಾಗಲೇ ಬೆಲೆ ಏರಿಕೆಗಳು ರಾಜ್ಯದ ಜನತೆಯನ್ನು ಕಷ್ಟಕ್ಕೆ ದೂಡಿದ್ದು, ರಾಜ್ಯ ಸರ್ಕಾರ ಗ್ಯಾರೆಂಟಿಗೆ ಹಣ ತುಂಬುವ ಭರದಲ್ಲಿ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ. ಈ ಸಂಬಂಧ ಕಾಂಗ್ರೆಸ್ ಶಾಸಕರೇ ಆರೋಪಿಸಿದ್ದಾರೆ. ಈ ಬೆನ್ನಲೇ ಬಸ್ ದರವನ್ನು ಶೇ.೧೫ರಷ್ಟು ಹೆಚ್ಚಳ ಮಾಡಿದ್ದು, ಇದನ್ನು ಜೆಡಿಎಸ್ ಪಕ್ಷ ಖಂಡಿಸುತ್ತದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಜಿ.ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹನುಮಂತು, ಕಾಂತರಾಜು, ಜಯರಾಮ್, ಶ್ರೀಧರ್, ಸಿದ್ದಾಚಾರಿ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ