Friday, November 20, 2026

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ | ಜಕ್ಕನಹಳ್ಳಿ ಗ್ರಾಮದಲ್ಲಿ ತಾಯಿ-ಮಗ ಅನುಮಾನಾಸ್ಪದ ಸಾವು

ಕೆ.ಆರ್.ಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಜಕ್ಕನಹಳ್ಳಿ ಗ್ರಾಮದ ಗೃಹಿಣಿ ಮತ್ತು ಆಕೆಯ 3 ವರ್ಷದ ಗಂಡು ಮಗು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.

ಜಕ್ಕನಹಳ್ಳಿ ಗ್ರಾಮದ ಪುಟ್ಟಸ್ವಾಮಿ ಪತ್ನಿ ಶಿಲ್ಪ(26) ಮತ್ತು ಪುತ್ರ ದೀಕ್ಷಿತ್(3)ಮೃತಪಟ್ಟಿರುವರು ಎಂದು ಗುರುತಿಸಲಾಗಿದೆ.

ಜಿಕ್ಕನಹಳ್ಳಿ ಗ್ರಾಮ ಮರಿಹುಚ್ಚಯ್ಯ‌ ಮತ್ತು‌ ಕಾಳಮ್ಮ ದಂಪತಿಗಳ ಮಗ ಪುಟ್ಟಸ್ವಾಮಿ (ಮೃತಳ ಗಂಡ) ತನ್ನ ಹೆಂಡತಿ ಶಿಲ್ಪಾಳ ಶೀಲ ಶಂಕಿಸಿ ಆಕೆಯ ಮೇಲೆ ಹಲ್ಲೆ ನಡೆಸಿ, ನೇಣು ಬಿಗಿದು ಹತ್ಯೆ ಮಾಡಿದ್ಧಾನೆ ಎನ್ನಲಾಗಿದೆ, ನಂತರ ತನ್ನ ಪುತ್ರ ದೀಕ್ಷಿತ್ ನನ್ನು‌ ಕತ್ತು ಹಿಸುಕಿ ಬರ್ಬರ ಕೊಲೆ ಮಾಡಿದ್ದು, ನಂತರ ಇಬ್ಬರೂ ಶವಗಳನ್ನು‌ ಮನೆಯಿಂದ ಹೊರಗೆ ಹಾಕಿ, ಆತ್ಮಹತ್ಯೆ ‌ಮಾಡಿಕೊಂಡು ಸಾವನ್ನಪ್ಪಿದ್ದಾಳೆ ಎಂದು‌ ನಾಟಕ ವಾಡುತ್ತಾ, ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ ಎಂದು ಮೃತಳ ಸಹೋದರಿ ಆಶಾ ಗಂಭೀರ ಆರೋಪ ಮಾಡಿದ್ದಾರೆ.

ಘಟನೆ ವಿವರ

ಕಳೆದ 4 ವರ್ಷಗಳ ಹಿಂದೆ ಕೋವಿಡ್ ಸಮಯದಲ್ಲಿ ಹಲಸನಹಳ್ಳಿ ಗ್ರಾಮದ ಕಾಂತರಾಜು ಮತ್ತು ಜಯಮ್ಮ ದಂಪತಿಗಳ ಪುತ್ರಿ ಶಿಲ್ಪಳನ್ನು ಜಕ್ಕನಹಳ್ಳಿ ಗ್ರಾಮದ ಮರಿಹುಚ್ಚಯ್ಯ- ಕಾಳಮ್ಮ ದಂಪತಿಯ ಪುತ್ರ ಪುಟ್ಟಸ್ವಾಮಿಗೆ ವಿವಾಹ ಮಾಡಿಕೊಡಲಾಗಿತ್ತು. ಮದುವೆ ಆದ 3 ತಿಂಗಳಿನಿಂದಲೂ ಶಿಲ್ಪಳಿಗೆ ನಿತ್ಯ ‌ಕಿರುಕುಳ‌ ನೀಡುತ್ತಿದ್ದ ಪುಟ್ಟಸ್ವಾಮಿ ನಿರಂತರವಾಗಿ ದೈಹಿಕ, ಮಾನಸಿಕ ಹಿಂಸೆ ನೀಡುತ್ತಲೆ ಬಂದಿದ್ದನು. ಇತ್ತೀಚೆಗೆ ಆಕೆಯ ಶೀಲ ಶಂಕಿಸಿ‌ ಹಲ್ಲೆ ಮಾಡುವುದು, ಕೊಲೆ ಬೆದರಿಕೆ ಹಾಕುವುದು ಜಾಸ್ತಿಯಾಗಿತ್ತು.

ಹಾಗಾಗಿ ನನ್ನ ಸಹೋದರಿ ಶಿಲ್ಪ ಸಾವು ಆತ್ಮಹತ್ಯೆಯಲ್ಲ. ಇದೊಂದು ವ್ಯವಸ್ಥಿತ ಕೊಲೆಯಾಗಿದೆ ಇದಕ್ಕೆ ಪುಟ್ಟಸ್ವಾಮಿ ಮತ್ತು ಆತನ ತಾಯಿ, ಸಹೋದರಿಯರು ಹಾಗೂ ಇನ್ನಿತರ ಹತ್ತಿರದ ಕುಟುಂಬದವರೇ ಕಾರಣ ಎಂದು ಮೃತಳ ಸಹೋದರಿ ಆಶಾ ಗಂಭೀರವಾಗಿ ಆರೋಪಿಸಿದ್ದಾರೆ.

ಘಟನೆಯ ಸಂಬಂಧವಾಗಿ ಆರೋಪಿಗಳ ವಿರುದ್ದ ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಆರೋಪದ ಅಡಿಯಲ್ಲಿ‌ ಪ್ರಕರಣ ದಾಖಲಿಸಿ ಕಠಿಣ ಕಾನೂನು‌ ಕ್ರಮ ಜರುಗಿಸಬೇಕು ಎಂದು ಕೆ.ಆರ್.ಪೇಟೆ ಸರ್ಕಾರಿ ಆಸ್ಪತ್ರೆಯ ಶವಾಗಾರದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಮೃತಳ ಪೋಷಕರು ಪೋಲೀಸ್ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಕಿಕ್ಕೇರಿ ಪೊಲೀಸರು‌‌ ಮುಂದಿನ ತನಿಖೆ ಕೈಗೊಂಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ