Wednesday, November 18, 2026

ಪ್ರಾಯೋಗಿಕ ಆವೃತ್ತಿ

ಕಲಿತ ಶಾಲೆಗಳ ಅಭಿವೃದ್ಧಿಗೆ ಹಳೇ ವಿದ್ಯಾರ್ಥಿಗಳು ಕೈಜೋಡಿಸಬೇಕು: ಮಂಜುನಾಥ್

ವಿದ್ಯಾರ್ಥಿಗಳು ತಾವು ಓದಿದ ಶಾಲೆಗೆ  ತಮ್ಮ ಕೈಲಾದ ಸಹಾಯಗಳ ಮಾಡುವುದರ ಮೂಲಕ ಋಣವನ್ನ ಕಮ್ಮಿ ಮಾಡಿಕೊಳ್ಳಬಹುದು, ತಾವು ಕಲಿತ ಶಾಲೆಗಳ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳು ಕೈಜೋಡಿಸಬೇಕೆಂದು ಕನ್ನಡ ಸೇನೆ ಮಂಡ್ಯ ಜಿಲ್ಲಾಧ್ಯಕ್ಷ ಮಂಜುನಾಥ್ ಹೇಳಿದರು.

ಮಳವಳ್ಳಿ ತಾಲೂಕು ಹಿಟ್ಟಿನಳ್ಳಿ ಕೊಪ್ಪಲು ಗ್ರಾಮದ ವಿವೇಕಾನಂದ ಪ್ರೌಢಶಾಲೆಗೆ ಕಂಪ್ಯೂಟರ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಸಾಧನೆ ಮಾಡಬೇಕು, ಸಾಧನೆ ಯಾರ ಸ್ವತ್ತಲ್ಲ, ಸಾಧನೆ ಮಾಡಿದರೆ ಜೀವನಪೂರ್ತಿ ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗಿ ಗೌರವದಿಂದ ಬದುಕಬಹುದು ಎಂದರು.

ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ, ಇಂತಹ ಕೆಲಸಗಳಿಗೆ ಪೋಷಕರು ಅವಕಾಶ ನೀಡಬಾರದು, ವಿವೇಕಾನಂದ ಪ್ರೌಢಶಾಲೆಗೆ ತನ್ನದೇ ಆದಂತಹ ಇತಿಹಾಸವಿದೆ. ಇಂತಹ ಶಾಲೆಯನ್ನ ಅಭಿವೃದ್ಧಿಯತ್ತ ಕೊಂಡೊಯ್ಯಬೇಕೆಂದರು.

ಸಮಾರಂಭದಲ್ಲಿ ಪ್ರದೀಪ್ ಆಚಾರ್, ರೇವತಿ ಪ್ರದೀಪ ಆಚಾರ್, ಮುಖ್ಯ ಶಿಕ್ಷಕ ಬೋರಯ್ಯ, ದೈಹಿಕ ಶಿಕ್ಷಣ ಶಿಕ್ಷಕರಾದ ಮಂಜುನಾಥ್, ಪ್ರಕಾಶ್, ನಂಜುಂಡಸ್ವಾಮಿ, ಮಂಜುಳಾ ಮತ್ತಿತರರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ