ಮದ್ದೂರು ಪಟ್ಟಣದಲ್ಲಿ ರಾಷ್ಟ್ರೀಯ ಹದ್ದಾರಿ-275 ಹಾದು ಹೋಗಿದ್ದು, ಕೊಲ್ಲಿ ಸರ್ಕಲ್ ನಲ್ಲಿ 6 ರಸ್ತೆಗಳು ಮತ್ತು ಐ.ಬಿ ಸರ್ಕಲ್ ನಲ್ಲಿ 8 ರಸ್ತೆಗಳನ್ನು ಹೊಂದಿದ್ದು, ಈ ಸ್ಥಳಗಳಲ್ಲಿ ವಾಹನ ದಟ್ಟಣೆ ಜಾಸ್ತಿಯಾಗಿದ್ದು ಟ್ರಾಫಿಕ್ ಲೈಟ್ ಹಾಗೂ ಸೂಚನ ಫಲಕಗಳನ್ನು ಅಳವಡಿಸುವಂತೆ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಸ್ಥಳದಲ್ಲಿ ಶಾಲಾ ಮಕ್ಕಳು, ಸಾರ್ವಜನಿಕರು ರಸ್ತೆ ದಾಟಲು ತುಂಬ ತೊಂದರೆಯಾಗುತ್ತಿದ್ದು, ವಾಹನ ಸವಾರರಿಗೆ ರಸ್ತೆಗಳ ಮಾರ್ಗವು ಕೂಡ ಗೊಂದಲವಾಗುತ್ತಿದೆ. ಅಲ್ಲದೇ ಹಲವು ಅಪಘಾತಗಳು ಸಂಭವಿಸಿ, ಸಾರ್ವಜನಿಕರ ಸಾವು-ನೋವುಗಳು ಸಂಭವಿವೆ, ಅದ್ದರಿಂದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಮನವಿ ಮಾಡಿದ ಹಿನ್ನೆಲೆಯಲ್ಲಿ ಸಚಿವರು ಸೂಚನೆ ನೀಡಿದ್ದಾರೆ.
ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಕೊಲ್ಲಿ ಸರ್ಕಲ್ ಹಾಗೂ ಐ.ಬಿ ಸರ್ಕಲ್ ಎರಡು ಕಡೆಗಳಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್‌ಗಳನ್ನು ಹಾಗೂ ಸೂಚನ ಫಲಕಗಳನ್ನು ಅಳವಡಿಸುವಂತೆ ತಿಳಿಸಲಾಗಿದೆ.




