ಹಲವು ವರ್ಷಗಳಿಂದ ಮಳವಳ್ಳಿಯ ದೊಡ್ಡಕೆರೆಯ ಬಳಿ ಇರುವ ಉದ್ಯಾನವನದ ವಾಕಿಂಗ್ ರಸ್ತೆಯೂ ಗಿಡದ ರಾಶಿ ಬೆಳೆದು ನಿಂತಿದ್ದನ್ನು ಸ್ಪಚ್ಚಗೊಳಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಶಾಸಕ ನರೇಂದ್ರಸ್ವಾಮಿ ಹಾಗೂ ಸಾರ್ವಜನಿಕರು ಶ್ಲಾಘಿಸಿದ್ದಾರೆ.
ಮಳವಳ್ಳಿ ಪಟ್ಟಣದ ದೊಡ್ಡಕೆರೆಗೆ ಹೊಂದಿಕೊಂಡಂತೆ ಇರುವ ಉದ್ಯಾನವನದ ಸಾರ್ವಜನಿಕರ ವಾಕಿಂಗ್ ರಸ್ತೆಯನ್ನು ಬೆಳಗ್ಗೆಯಿಂದ ಸಂಜೆಯವರೆಗೂ ಕಾಂಗ್ರೆಸ್ ಮುಖಂಡರು , ಕಾರ್ಯಕರ್ತರು ಸ್ಪಚ್ಚತೆ ಮಾಡುತ್ತಿರುವುದನ್ನು ಶಾಸಕ ನರೇಂದ್ರಸ್ವಾಮಿ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ಶಾಸಕನಾಗಿದ್ದಾಗ ಸಾರ್ವಜನಿಕರಿಗೆ ವಾಯುವಿಹಾರ ಮಾಡಲು ಅನುಕೂಲವಾಗಲೆಂದು ಉದ್ಯಾನವನದ ಜೊತೆಗೆ ಸಾರ್ವಜನಿಕರು ವಾಕಿಂಗ್ ರಸ್ತೆ ಮಾಡಿದ್ದೆ ಕಳೆದ ಬಾರಿ ನಾನು ಸೋತ ಬಳಿಕ ಈ ಸ್ಥಳವನ್ನು ತಾತ್ಸಾರ ಮಾಡಿದ ಪರಿಣಾಮ ಗಿಡದರಾಶಿ ಬೆಳೆದು ನಿಂತು ಸಾರ್ವಜನಿಕರು ವಾಕಿಂಗ್ ಮಾಡಲು ಯೋಗ್ಯವಲ್ಲದ ಜಾಗ ಮಾಡಿದ್ದರು.
ಈಗ ಮತ್ತೆ ಶಾಸಕನಾಗಿದ್ದೇನೆ ಅದಕ್ಕೆ ಸಾರ್ವಜನಿಕರೂ ಸಹ ದೂರ ನೀಡಿದ್ದರು. ನಮ್ಮ ಪಕ್ಷದ ಮುಖಂಡರು ,ಕಾರ್ಯಕರ್ತರು ಸ್ಪಚ್ಚತಾ ಕಾರ್ಯ ಮಾಡಲು ಮುಂದಾದರು. ಇಂದು ಬೆಳಿಗ್ಗೆ ಯಿಂದ ಶ್ರಮದಾನ ಮಾಡಿದ್ದಾರೆ ಅವರಿಗೆ ಕ್ಷೇತ್ರದ ಶಾಸಕನಾಗಿ ಅವರನ್ನು ಅಭಿನಂದಿಸುತ್ತೇನೆ ಎಂದರು.
ಸಾರ್ವಜನಿಕರಿಂದ ಅಭಿನಂದನೆ
ಸ್ಪಚ್ಚತೆ ಇಲ್ಲದ ಕಾರಣ. ವಾಕಿಂಗ್ ಸ್ಥಗಿತಗೊಳಿಸಿದ ಸಾರ್ವಜನಿಕರು ಸ್ಪಚ್ಚತೆ ಮಾಡಿರುವ ಬಗ್ಗೆ ಮಾಹಿತಿ ತಿಳಿದು ಇಂದು ಸಂಜೆ ವಾಕಿಂಗ್ ಮಾಡಲು ಮುಂದಾಗಿದ್ದು, ಸ್ಪಚ್ಚತೆ ಮಾಡಿದ ಕಾಂಗ್ರೆಸ್ ಕಾರ್ಯಕರ್ತರನ್ನು ಅಭಿನಂದಿಸಿದರು.
ಈ ವೇಳೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಮಾದೇಶ, ಮನ್ ಮುಲ್ ನಿರ್ದೇಶಕ ವಿಶ್ವಾಸ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ, ಸಿ.ಪಿ ರಾಜು, ಯುವಕಾಂಗ್ರೆಸ್ ಅಧ್ಯಕ್ಷ ಕೃಷ್ಣಮೂರ್ತಿ, ವೇದಮೂರ್ತಿ, ತಾ.ಪಂ ಮಾಜಿ ಉಪಾಧ್ಯಕ್ಷ ಮಾರ್ಕಾಲು ಮಾಧು,ಗ್ಯಾರಂಟಿ ಯೋಜನೆ ಸದಸ್ಯರು,ಪುರಸಭೆ ಸದಸ್ಯರು, ಮಾಜಿ ಸದಸ್ಯರು, ಕಾಂಗ್ರೆಸ್ ಮುಖಂಡರು ಸೇರಿದಂತೆ ಹಲವರು ಕಾರ್ಯಕರ್ತರು ಹಾಜರಿದ್ದರು.




