ಮಂಡ್ಯದ ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕರರಾಗಿ ನಾಲ್ವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹಾಗೂ ಜೆಡಿಎಸ್ ಬೆಂಬಲಿತ ಓರ್ವ ಮಹಿಳೆ ಸೇರಿ ಐವರು ಅವಿರೋಧ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಬಿಳಿದೇಗಲು ಬೋರೇಗೌಡ, ಬಸರಾಳು ಯೋಗೇಶ್, ಹೊಸಹಳ್ಳಿ ಶಿವಲಿಂಗೇಗೌಡ ಹಾಗೂ ಚಂದಗಾಲು ನಿಂಗಮ್ಮ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಎಲ್ಲ ನಿರ್ದೇಶಕರನ್ನು ಮಂಡ್ಯ ಶಾಸಕ ರವಿಕುಮಾರ್ ಅವರು ಅಭಿನಂದಿಸಿದ್ದಾರೆ. ಪ್ರತಿಯಾಗಿ ಶಾಸಕರನ್ನು ನಿರ್ದೇಶಕರು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಬೇಲೂರು ಸೋಮಶೇಖರ್, ಚಿಕ್ಕಬಳ್ಳಿ ಕೃಷ್ಣ, ಬಿಳಿದೇಗಲು ಚಂದ್ರು ಉಪಸ್ಥಿತರಿದ್ದರು.
ಜೆಡಿಎಸ್ ಬೆಂಬಲಿತ ಮಹಿಳೆ ಆಯ್ಕೆ
ಜೆಡಿಎಸ್ ಪಕ್ಷದಿಂದ ಮಮತಾ ಬೊಮ್ಮನಹಳ್ಳಿ ಅವರು ಅವಿರೋಧ ಆಯ್ಕೆಯಾಗಿದ್ದಾರೆಂದು ತಿಳಿದು ಬಂದಿದೆ.




