ವಿದ್ಯಾರ್ಥಿಗಳು ಬದುಕಲು ಬೇಕಾದ ಕೌಶಲ್ಯವನ್ನು ಕಲಿತರೆ ಸರ್ವಾಂಗೀಣ ಅಭಿವೃದ್ದಿ ಮಾಡಲು ಸಾಧ್ಯ ಎಂದು ಸಾಹಿತಿ ಶುಭಶ್ರೀ ಪ್ರಸಾದ್ ತಿಳಿಸಿದರು.
ಮಂಡ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜು (ಮಾಜಿ ಪುರಸಭೆ) ವಿನಲ್ಲಿ ನಡೆದ 2024-25 ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಸಮಾರೋಪ ಸಮಾರಂಭದಲ್ಲಿ ಸಮರೋಪ ಭಾಷಣ ಮಾಡಿ ಅವರು ಮಾತನಾಡಿದರು.
ಮನುಷ್ಯನಿಗೆ ವಿನಯವೇ ದೊಡ್ಡ ಆಭರಣ ಆದ್ದರಿಂದ ವಿದ್ಯಾರ್ಥಿಗಳು ತಂದೆ ತಾಯಿಗಳು ಗುರು ಹಿರಿಯರನ್ನು ಗೌರವಿಸುವುದನ್ನು ಮರೆತಿರುವ ಸಂದರ್ಭದಲ್ಲಿ ಗೂಗಲ್ ನಲ್ಲಿ ಕಲಿಸುವುದನ್ನು ನಾವು ಕಲಿಯುತ್ತಿದ್ದೇವೆ, ಅದಕ್ಕೆ ಯಾವ ಭಾವ ಇದೆ. ಆದ್ದರಿಂದ ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಇಟ್ಟುಕೊಳ್ಳಿ ದಿ ಬೆಸ್ಟ್ ಆಗ್ಬೇಕು ನಾವು ಮಾಡುವ ಕೆಲಸದಲ್ಲಿ ಪ್ರಾವೀಣ್ಯತೆ ಪಡೆಯುವ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮನುಷ್ಯ ಬದುಕು ನಡೆಸಲು ಅಕ್ಷರ ಜ್ಞಾನದ ಜೊತೆ ಸಂಸ್ಕಾರ ಬೇಕು. ಮೌಲ್ಯ ಎನ್ನುವುದು ರಕ್ತಗತವಲ್ಲ ಅದು ರೂಡಿ ಕೂಡ ಆಗಬೇಕು ಕೇಳುವುದರ ಜೊತೆಗೆ ಮಾಡುವುದು ಕೂಡ ಮುಖ್ಯ ಎಂದು ಹೇಳಿದರು.
ಮನುಷ್ಯನಿಗೆ ಆತ್ಮವಿಶ್ವಾಸ ಬೇರು ಇದ್ದಹಾಗೆ ಅದನ್ನು ಕಳೆದುಕೊಂಡರೆ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಆದ್ದರಿಂದ ಮನುಷ್ಯ ಸಹಕಾರ ತತ್ವ ರೂಢಿಸಿಕೊಳ್ಳಬೇಕು ಎಂದರು.
ಸರ್ಕಾರಿ ಪದವಿಪೂರ್ವ ಕಾಲೇಜು ಮಾಜಿ ಪುರಸಭೆ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಂ ಎಸ್ ಅಭಿಲಾಷ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳುವ ಕಡೆ ತಮ್ಮ ಗುರಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.
ಕಳೆದ ಬಾರಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸುತ್ತಿರುವುದು ಹೆಮ್ಮೆಯ ವಿಚಾರ ಬರುವ ಶೈಕ್ಷಣಿಕ ಪರೀಕ್ಷೆಯಲ್ಲಿ ಕಾಲೇಜಿಗೆ ಉತ್ತಮ ಫಲಿತಾಂಶ ಬರುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡಬೇಕು ಎಂದು ಹೇಳಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಪ್ರತಿ ಸಭೆಯಲ್ಲೂ ಶಾಸಕರ ಮೇಲೆ ಒತ್ತಡ ತಂದು ಶಿಕ್ಷಣ ಇಲಾಖೆಗೆ ಮನವಿ ಮಾಡಿ ಕಾಲೇಜಿನಲ್ಲಿ ಶೌಚಾಲಯ ಕಟ್ಟಿಸಲು 29 ಲಕ್ಷ ರೂಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಶಾಸಕ ಪಿ ರವಿಕುಮಾರ್ ಅವರ ಅನುದಾನದಲ್ಲಿ 10 ಲಕ್ಷಗಳನ್ನು ಬಿಡುಗಡೆ ಮಾಡಿಸಿ ಕಾಲೇಜಿನ ಕಾಂಪೌಂಡ್ ನಿರ್ಮಾಣ ಮಾಡಿಸಲಾಗಿದೆ, ಲ್ಯಾಬೋರೇಟರಿ ರೂಂಗಳ ಕಟ್ಟಡ ನವೀಕರಣ ಮಾಡಲು 16 ಲಕ್ಷ ರೂಗಳ ಅನುದಾನವನ್ನು ಬಿಡುಗಡೆ ಮಾಡಿಸಲಾಗಿದೆ ಎಂದರು.
ಕಳೆದ ಬಾರಿ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸೇವಾಕಿರಣ ಉಚಿತ ವೃದ್ದಾಶ್ರಮದ ಕಾರ್ಯದರ್ಶಿ ಜಿ.ವಿ.ನಾಗರಾಜು, ನಿವೃತ್ತ ಪ್ರಾಧ್ಯಾಪಕ ಕೆ.ನಾಗನಂದ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಸಹ ಶಿಕ್ಷಕ ಕೆ.ಜೆ. ಮಲ್ಲಿಕಾರ್ಜುನಯ್ಯ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಎ. ಜಾರ್ಜ್ ಮೋಹನ್ ಕುಮಾರ್, ಎಂ.ವಿ.ಪದ್ಮ, ಇಮ್ತಿಯಾಜ್ ಸೇರಿದಂತೆ ಇತರರು ಹಾಜರಿದ್ದರು.
ಮೈಸೂರಿನ ರಮೇಶ್ ಬಾಬು ಅವರು ಮಿಮಿಕ್ರಿ ಕಾರ್ಯಕ್ರಮ ನಡೆಸಿಕೊಟ್ಟರು.




