Thursday, March 28, 2024

ಪ್ರಾಯೋಗಿಕ ಆವೃತ್ತಿ

ಫ್ಯಾಕ್ಟ್ ಚೆಕ್ : ಎಸ್.ಬಿ.ಐ ಬ್ಯಾಂಕಿನ ಹೆಸರಿನಲ್ಲಿ ಸುಳ್ಳು ಸುದ್ದಿ

2AQ ಮತ್ತು 8AC ಸರಣಿಯ 2000 ರೂ‌.ಗಳ ನೋಟುಗಳನ್ನು ಸ್ವೀಕರಿಸಬೇಡಿ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಯಾವುದೇ ಅಧಿಕೃತ ಸುತ್ತೋಲೆ ಹೊರಡಿಸಿಲ್ಲ ಎಂದು ಮಂಡ್ಯ ನಗರದ ವಿವಿ ರಸ್ತೆಯ ಎಸ್‌ಬಿಐ ಬ್ಯಾಂಕಿನ ಮ್ಯಾನೇಜರ್ ಜೆ.ಇಂದ್ರೇಶ್ ತಿಳಿಸಿದರು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೆಸರಿನಲ್ಲಿ ಅತ್ಯಂತ ಮಹತ್ವದ ನೋಟಿಸ್ ಎಂದು ಆರ್‌ಬಿಐ ಸುತ್ತೋಲೆಯ ಪ್ರಕಾರ 2AQ ಮತ್ತು 8AC ನೋಟುಗಳನ್ನು ದಯವಿಟ್ಟು ಸ್ವೀಕರಿಸಬೇಡಿ. 2000 ರೂ.ಗಳ 2 ಕೋಟಿ ಖೋಟಾ ನೋಟುಗಳು ಭಾರತಕ್ಕೆ ಬಂದಿವೆ. ದಯವಿಟ್ಟು ಈ ಮಾಹಿತಿಯನ್ನು ಹೆಚ್ಚಿನ ಜನರೊಂದಿಗೆ ಹಂಚಿಕೊಳ್ಳಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಹಲವು ಕಡೆ ಪೋಸ್ಟರ್ ಮುಖಾಂತರ ಅಂಟಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ನುಡಿ ಕರ್ನಾಟಕ. ಕಾಮ್ ಫ್ಯಾಕ್ಟ್ ಚೆಕ್ ನಡೆಸಿದ್ದು, ಇಂತಹ ಯಾವುದೇ ಸುತ್ತೋಲೆ ಆರ್‌ಬಿಐ ಹೊರಡಿಸಿಲ್ಲ. ಇದನ್ನು ಜನರು ನಂಬಬಾರದು, ಆದರೂ 2,000 ರೂ.ಗಳ ನೋಟನ್ನು ಪಡೆದುಕೊಳ್ಳುವಾಗ ಆರ್‌ಬಿಐ ಮಾರ್ಗಸೂಚಿಯಂತೆ ಸರಿಯಾಗಿ ಪರಿಶೀಲನೆ ಮಾಡಿ ಪಡೆಯುವಂತೆ ತಿಳಿಸಿದರು.

10 ರೂಪಾಯಿ ನಾಣ್ಯವನ್ನು ಪಡೆಯಬಾರದೆಂದು ಆರ್‌ಬಿಐ ಹೇಳಿಲ್ಲ. ಆದರೂ ನಮ್ಮ ರಾಜ್ಯದಲ್ಲಿ ಜನರು 10 ರೂಪಾಯಿ ನಾಣ್ಯವನ್ನು ಸ್ವೀಕರಿಸುತ್ತಿಲ್ಲ. ಇದು ತಪ್ಪು ತಿಳುವಳಿಕೆಯಾಗಿದೆ. ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳಲ್ಲಿ ಹತ್ತು ರೂಪಾಯಿ ನಾಣ್ಯ ಚಲಾವಣೆಯಲ್ಲಿದ್ದರೂ, ಕರ್ನಾಟಕದಲ್ಲಿ ಇದನ್ನು ನಿಷೇಧ ಮಾಡಿದ್ದಾರೆ ಎಂದು ಜನರು ತಿಳಿದುಕೊಂಡಿದ್ದು ಪಡೆಯುತ್ತಿಲ್ಲ. ಆರ್‌ಬಿಐ 10 ರೂಪಾಯಿ ನಾಣ್ಯ ಪಡೆಯದಂತೆ ಎಲ್ಲೂ ಸುತ್ತೋಲೆ ಹೊರಡಿಸಿಲ್ಲ ಎಂದು ಜೆ.ಇಂದ್ರೇಶ್ ತಿಳಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!