Monday, November 23, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಪತ್ರಕರ್ತರ ಸಂಘದಿಂದ ಬಸವರಾಜುಗೆ ಆರ್ಥಿಕ ನೆರವು

ಶ್ರೀರಂಗಪಟ್ಟಣ ತಾಲೂಕು ಪತ್ರಕರ್ತರ ಸಂಘದ ಸಹಾಯಕ ಬಸವರಾಜು ಅವರ ಕುಟುಂಬ ಬಹಳ ಸಂಕಷ್ಟದಲ್ಲಿದೆ ಎಂಬುದನ್ನು ಅರಿತು ಶ್ರೀರಂಗಪಟ್ಟಣ ತಾಲೂಕು ಪತ್ರಕರ್ತರ ಸಂಘದ ಕೋರಿಕೆ ಮೇರೆಗೆ ಪರಿಹಾರ ನೀಡಲಾಗುತ್ತಿದೆ ಎಂದು ಕಾರ್ಯನಿತರ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಮತ್ತೀಕೆರೆ ಜಯರಾಂ ತಿಳಿಸಿದರು.

ಸಂಘದಲ್ಲಿ ಜಿಲ್ಲಾ ಪತ್ರಕರ್ತರ ಸಂಘ, ಶ್ರೀರಂಗಪಟ್ಟಣ ತಾಲೂಕು ಪತ್ರಕರ್ತರ ಸಂಘ ಹಾಗೂ ಸಂಘದ ಸದಸ್ಯರಿಂದ ಸಂಗ್ರಹವಾದ 75 ಸಾವಿರ ರೂ.ಗಳ ಪರಿಹಾರ ಹಣವನ್ನು ಬಸವರಾಜು ಅವರಿಗೆ ಸಂಘದ ವತಿಯಿಂದ ನೀಡಲಾಯಿತು.

ಬಸವರಾಜು ಅವರಿಗೆ ಪರಿಹಾರ ನೀಡಿದಂತಹ ಜಿಲ್ಲಾ ಹಾಗೂ ಶ್ರೀರಂಗಪಟ್ಟಣ ತಾಲೂಕು ಸಂಘ ಮತ್ತು ಸಂಘದ ಸದಸ್ಯರಿಗೆ ಧನ್ಯವಾದ ತಿಳಿಸುವುದಾಗಿ ಹೇಳಿದರು.

ಸಂಘದ ಜಿಲ್ಲಾಧ್ಯಕ್ಷ ಕೆ.ಎನ್.ನವೀನ್‌ಕುಮಾರ್ ಮಾತನಾಡಿ, ಬಸವರಾಜು ಅವರ ಕುಟುಂಬ ಸಂಕಷ್ಟದಲ್ಲಿದೆ ಎಂಬುದನ್ನು ತಾಲೂಕು ಸಂಘದ ಗಮನಕ್ಕೆ ತಂಡ ಹಿನ್ನಲೆ ಬಸವರಾಜು ಅವರ ನಿವಾಸಕ್ಕೆ ತೆರಳಿ ಪರಿಸ್ಥಿತಿ ಕಂಡು, ಸಂಘದ ಹಿರಿಯರ ಗಮನಕ್ಕೆ ತಂದಾಗ ಪರಿಹಾರ ನೀಡುವ ಸಲಹೆ ನೀಡಿದ್ದರು ಎಂದರು.

ಸಲಹೆಯ ಮೇರೆಗೆ ಸಂಘದ ಎಲ್ಲಾ ಸದಸ್ಯರಲ್ಲಿ ಮನವಿ ಹಿನ್ನಲೆ ಆಡಳಿತ ಮಂಡಳಿಯ ಪದಾಧಿಕಾರಿಗಳು, ನಿರ್ದೇಶಕರು, ಜಿಲ್ಲೆಯ ಸದಸ್ಯರು ಸ್ಪಂಧಿಸಿ ಶ್ರೀರಂಗಪಟ್ಟಣ ತಾಲೂಕು ಪತ್ರಕರ್ತರ ಸಂಘದಿಂದ 10 ಸಾವಿರ, ಜಿಲ್ಲಾ ಸಂಘದಿಂದ 10 ಸಾವಿರ ಹಾಗೂ ಸದಸ್ಯರಿಂದ ಸಂಗ್ರಹವಾದ ಒಟ್ಟು 75 ಸಾವಿರ ರೂಗಳನ್ನು ಬಸವರಾಜು ಕುಟುಂಬಕ್ಕೆ ನೀಡಿದ್ದು, ಸಹಕಾರ ನೀಡಿದ ಎಲ್ಲಾ ಪತ್ರಕರ್ತರಿಗೆ ಧನ್ಯವಾದಗಳನ್ನು ತಿಳಿಸಿದರು.

ಈ ವೇಳೆ ರಾಜ್ಯ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು, ಪ್ರಧಾನ ಕಾರ್ಯದರ್ಶಿ ಆನಂದ್, ಖಜಾಂಚಿ ನಂಜುಂಡಸ್ವಾಮಿ, ಮಾಜಿ ಅಧ್ಯಕ್ಷ ಬಿ.ಪಿ.ಪ್ರಕಾಶ್, ಶ್ರೀರಂಗಪಟ್ಟಣ ತಾಲೂಕು ಸಂಘದ ಸೋಮಶೇಖರ್ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ