ನಡೆದಾಡುವ ಗ್ರಂಥಾಲಯ ಪ್ರೊ.ಎಂ.ಕರೀಮುದ್ದಿನ್ ಅವರ ಬಗ್ಗೆ ರಚಿಸಲಾಗಿರುವ `ಗಂಜಾಂ ಪ್ರೊ.ಎಂ.ಕರೀಮುದ್ದಿನ್’ ಸಂಸ್ಮರಣ ಗ್ರಂಥ ಬಿಡುಗಡೆ ಕಾರ್ಯಕ್ರಮವನ್ನು ಜನವರಿ 30ರ ಸಂಜೆ 4.30ಕ್ಕೆ ಶ್ರೀರಂಗಪಟ್ಟಣದ ಓಂ ಶ್ರೀನಿಕೇತನ ಶಾಲೆಯಲ್ಲಿ ಆಯೋಜಿಸಲಾಗಿದೆ ಎಂದು ಸಾಹಿತಿ, ಯೋಗ ಶಿಕ್ಷಕರೂ ಆದ ಅಪ್ಪಾಜಿ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದರಿ ಗ್ರಂಥವು ಪ್ರೊ.ಎಂ.ಕರೀಮುದ್ದಿನ್ ಅವರ ಬಾಲ್ಯಾವಸ್ಥೆ, ಶೈಕ್ಷಣಿಕ, ವೃತ್ತಿಪರ, ವಿಚಾರ, ಚಿಂತನೆಗಳು ಹಾಗೂ ಅವರ ಜೀವನ ಆಧಾರಿತ ಗ್ರಂಥವಾಗಿದ್ದು, ಅವರ ಜೀವನದ ಮಾಹಿತಿ ನೀಡುವ 200 ಪುಟಗಳ ಗ್ರಂಥವಾಗಿದೆ ಎಂದರು.
ಮೈಸೂರು ಕುವೆಂಪು ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಡಾ.ಪಿ.ಕೆ.ರಾಜಶೇಖರ್ ಅವರ ಅಧ್ಯಕ್ಷತೆಯ ಕಾರ್ಯಕ್ರಮವನ್ನು ಮೈಸೂರು ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಉದ್ಘಾಟಿಸುವರು. ಶಾಸಕ ಎ.ಬಿ.ರಮೇಶ್ ಬಾಬು ಬಂಡಿಸಿದ್ದೇಗೌಡ ಪುಸ್ತಕ ಬಿಡುಗಡೆ ಮಾಡುವರು, ಹಿರಿಯ ವಕೀಲ ಎಂ.ಪುಟ್ಟೇಗೌಡ ಕರಿಮುದ್ದೀನ್ ಕುರಿತು ಮಾತನಾಡಲಿದ್ದು, ರಾಜ್ಯ ಸಂಪನ್ಮೂಲ ಕೇಂದ್ರದ ನಿವೃತ್ತ ನಿರ್ದೇಶಕ ಪುಸ್ತಕದ ಕುರಿತು ಮಾತನಾಡುವರು. ಶ್ರೀರಂಗಪಟ್ಟಣದ ಮುಸ್ಲಿಂ ಸೌಹಾರ್ದ ಒಕ್ಕೂಡದ ಪ್ರೊ.ಇಲ್ಯಾಸ್ ಅಹ್ಮದ್ಖಾನ್ ಹಾಗೂ ಹಿರಿಯ ವೈದ್ಯ ಡಾ.ಬಿ.ಸುಜಯ್ಕುಮಾರ್ ಉಪಸ್ಥಿತರಿರುವರು ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಡಾ.ಕೆ.ವೈ.ಶ್ರೀನಿವಾಸ್, ಜಯಶಂಕರ್, ಎಸ್.ಎಂ.ಶಿವಕುಮಾರ್ ಇದ್ದರು.




