ಶಿಕ್ಷಣ ಮನುಷ್ಯನ ಚಾರಿತ್ರ್ಯವನ್ನು ಬೆಳೆಸುವ ಜ್ಞಾನವಾಗಬೇಕು. ಜೀವನದ ರಹಸ್ಯಗಳನ್ನು ತಿಳಿದುಕೊಂಡು ಸಾಕ್ಷಾತ್ಕಾರ ಮಾಡಿಕೊಳ್ಳುವುದು, ಜೀವನದ ಮೌಲ್ಯಗಳನ್ನು ತಿಳಿಸುವುದೇ ನಿಜವಾದ ಶಿಕ್ಷಣ, ಹೇಳಿದರು. ಶಿಕ್ಷಣವೆಂದರೆ ಒಳ್ಳೆಯ ನಡೆ-ನುಡಿಗಳನ್ನು ಹೇಳಿಕೊಡುವಂತಹ ಒಂದು ಕಲೆ ಎಂದು ಎಸ್.ಬಿ ಎಜುಕೇಶನ್ ಟ್ರಸ್ಟಿನ ಕಾರ್ಯದರ್ಶಿ ಡಾ.ಮೀರಾಶಿವಲಿಂಗಯ್ಯ ಹೇಳಿದರು.
ಮಂಡ್ಯ ನಗರದ ಎಸ್.ಬಿ ಎಜುಕೇಶನ್ ಟ್ರಸ್ಟ್, ಮಾಂಡವ್ಯ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಎಸ್.ಬಿ ಸಮುದಾಯ ಭವನದಲ್ಲಿ 2024-25 ರ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಮಾನವರಾಗಿ ನಾಗರೀಕರಾಗಿ ಇನ್ನೊಬ್ಬರೊಡನೆ ಸ್ನೇಹ ಗೌರವರಿಂದ ವರ್ತಿಸುವಂತಹ ಜ್ಞಾನ ಪಡೆಯುವುದು ಶಿಕ್ಷಣ. ಪ್ರತಿಯೊಬ್ಬರಲ್ಲೂ ಉದ್ಯಮಶೀಲರನ್ನಾಗಿ ಮಾಡುವುದೇ ಶಿಕ್ಷಣ ಎಂದ ಅವರು, ಮನೆಯಲ್ಲಿರುವ ಮಕ್ಕಳು ಶಾಲೆಗೆ ಹೋಗುವಾಗ ಎಲ್ಲವನ್ನು ಕಲಿಯುತ್ತಾರೆ, ಇದು ಶಿಕ್ಷಣದ ಪ್ರಭಾವವಾಗಿದೆ ಎಂದರು.

ಇದೇ ಸಂದರ್ಭದಲ್ಲಿ 2023-24ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕವನ್ನು ಪಡೆದ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು. ಎಸ್.ಬಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಬಿ. ಶಿವಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲಾ ವಾಣಿಜ್ಯಶಾಸ್ತ್ರ ಉಪನ್ಯಾಸಕರ ವೇದಿಕೆಯ ಅಧ್ಯಕ್ಷ ಬಿ. ಲಿಂಗೇಗೌಡ, ಮದ್ದೂರಿನ ಕೇಂಬ್ರಿಜ್ ಕಾನ್ವೆಂಟ್ ಶಾಲೆಯ ಮುಖ್ಯ ಶಿಕ್ಷಕಎಚ್.ಬಿ ರವಿನಾರಾಯಣ್, ಯೋಗ ಶಿಕ್ಷಕಿ ಸಾವಿತ್ರಿ ಲಕ್ಷ್ಮಣ್, ಮಾಂಡವ್ಯ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಭವಾನಿ ಶಂಕರ್, ಮಾಂಡವ್ಯ ಇಂಟಿಗ್ರೇಟೆಡ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಕೆ. ಚಂದ್ರಶೇಖರ್, ಶೈಕ್ಷಣಿಕ ಪಾಲುದಾರರಾದ ಚನ್ನೇಶ್, ಎಂ.ಎಸ್. ಅರ್ಚನಾ, ಡಾ. ಮೋಹನ್, ಎಂ.ಬಿ. ಅವಿನಾಶ್, ಡಿ.ಎಸ್ ರಾಘವೇಂದ್ರ, ಮಾಂಡವ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಹದೇವಯ್ಯ, ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರೆಲ್ಲರೂ ಸಹ ಹಾಜರಿದ್ದರು.
ವೇದಿಕೆಯ ಕಾರ್ಯಕ್ರಮದ ನಂತರ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.




