Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಮೈಕ್ರೋ ಫೈನಾನ್ಸ್ ಕಿರುಕುಳ, ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ಮೈಕ್ರೋ ಫೈನಾನ್ಸ್ ಗಳ ಮಿತಿ ಮೀರಿದ ಬಡ್ಡಿದಂಧೆಯಿಂದಾಗಿ ರಾಜ್ಯದಾದ್ಯಂತ ಬಡವರು, ಅಮಾಯಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ಮಹಿಳೆಯರ ಮೇಲಿನ ದೌರ್ಜನ್ಯಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ಇವಕ್ಕೆಲ್ಲ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಡಿವಾಣ ಹಾಕಬೇಕೆಂದು ಆಗ್ರಹಿಸಿ ಕರ್ನಾಟಕ ಜನಶಕ್ತಿ ಹಾಗೂ ಮಹಿಳಾ ಮುನ್ನಡೆ ಸಂಘಟನೆಗಳ ವತಿಯಿಂದ ಮಂಡ್ಯದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.

ಜಾಹೀರಾತು

ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಪೂರ್ಣಿಮ ನೇತೃತ್ವದಲ್ಲಿ ಮಂಡ್ಯನಗರದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಪ್ರತಿಟನಾಕಾರರು ಜಿಲ್ಲಾಧಿಕಾರಿ ಕಚೇರಿ ಎಂದು ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು.

ಹಕ್ಕೊತ್ತಾಯಗಳೇನು ? 

1. ಮೈಕ್ರೋ ಫೈನಾನ್ಸ್‌ ಸಂಸ್ಥೆಗಳು ಸೇರಿದಂತೆ ಯಾವುದೇ ಬ್ಯಾಂಕಿಂಗ್ ವ್ಯವಸ್ಥೆ ಸಂಘ ಸಂಸ್ಥೆಗಳ ಹಣಕಾಸಿನ ವ್ಯವಹಾರ ವಹಿವಾಟಿನ ಮೇಲೆ ನಿರ್ಭಂದ ಹೇರುವ ಮತ್ತು ನಿರ್ಣಾಯಕ ತೀರ್ಮಾನ ಕೈಗೊಳ್ಳುವ ಹಕ್ಕು ಕೇಂದ್ರದ ಬ್ಯಾಂಕ್, ಭಾರತೀಯ ರಿಸರ್ವ್ ಬ್ಯಾಂಕ್ ನ ನಿಯಮಾಳಿಗೆ ಸಂಭಂದಿಸಿರುವುದರಿಂದ ಇನ್ನಾದರೂ ಮಂಡ್ಯದಿಂದಲೇ ಸಂಸದರಾಗಿ ಗೆದ್ದು ಹೋದ ಕುಮಾರಸ್ವಾಮಿ ರವರು ಕೇಂದ್ರದ ಒಕ್ಕೂಟ ಸರ್ಕಾರದ ಬಳಿ ಮಾತನಾಡಿ ಇವಕ್ಕೆಲ್ಲ ಕಡಿವಾಣ ಹಾಕಿಸಿ ಆತ್ಮಹತ್ಯೆಗೆ ಒಳಗಾಗಿರುವ ಕುಟುಂಬ ಗಳಿಗೆ ಸೂಕ್ತ ಪರಿಹಾರ ಕೊಡಿಸುವ ಮತ್ತು ಸಾಲ ಮನ್ನಾ ಮಾಡಿಸುವ ಕ್ರಮಕ್ಕೆ ಮುಂದಾಗಬೇಕು.

2. ಅನಿಯಂತ್ರಿತ ಠೇವಣಿ ಯೋಜನೆಗಳ ಅಡಿಯಲ್ಲಿ ಅಧಿಕ ಬಡ್ಡಿ ಅಸೆ ತೋರಿಸಿ ಮಹಿಳೆಯರು ಮತ್ತು ಜನಸಾಮಾನ್ಯರಲ್ಲಿ ಕಂತಿನ ಮೂಲಕ ಹಣ ಕಟ್ಟಿಸಿಕೊಂಡು ವಂಚಿಸಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕರ್ನಾಟಕ ಹಣಕಾಸು ಸಂಸ್ಥೆಗಳ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆ 2004 ಮತ್ತು ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ 2019 ರ ಅಡಿಯಲ್ಲಿ ಸಕ್ಷಮ ಪ್ರಾಧಿಕಾರವನ್ನು ರಚನೆ ಮಾಡಿ ಅಧಿಕಾರಿಯನ್ನು ನೇಮಕ ಮಾಡಿ ಮೋಸ ಹೋದ ಜನರಿಗೆ ಪರಿಹಾರ ದೊರಕಿಸಿಕೊಡಬೇಕು ಮತ್ತು ಈ ಪ್ರಕ್ರಿಯೆಯಲ್ಲಿ ಹುಟ್ಟಿಕೊಂಡಿರುವ ದಳ್ಳಾಳಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.

3. ಸ್ತ್ರೀ ಶಕ್ತಿ ಯೋಜನೆಗಳನ್ನು ಮಹಿಳೆಯರ ಆರ್ಥಿಕ ಸ್ಥಿತಿ ಗತಿ ಗಳನ್ನು ಸುಧಾರಿಸಲು, ಸ್ವಾವಲಂಬಿಗಳಾಗಿ ಮಾಡುವುದರ ಮೂಲಕ, ಹಲವು ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ದೊರಕಿಸಿಕೊಡುವ ಮತ್ತು ಸಾಲ ನೀಡುವ ಸಂಘ ಸಂಸ್ಥೆಗಳ ಜೊತೆಗೆ ಆರ್ಥಿಕವಾಗಿ ವ್ಯವಹಾರಿಕವಾಗಿ ಸಂಬಂಧ ಏರ್ಪಡಿಸುವ ಉದ್ದೇಶದಿಂದ ಪ್ರಾರಂಭಿಸಿದ್ದರು, ಆದರೆ ಮೈಕ್ರೋ ಫೈನಾನ್ಸ್ ಗಳ ಹಾವಳಿಯಿಂದ, ಈ ಯೋಜನೆಯು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡಿದೆ. ಈಗ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಇಂತಹ ಯೋಜನೆಗಳ ಬಗ್ಗೆ ಗಮನ ಹರಿಸಿ ಜನರಿಗೆ ಹೆಚ್ಚಿನ ಅರಿವನ್ನು ಮೂಡಿಸುವ ಮೂಲಕ ಸ್ತ್ರೀ ಶಕ್ತಿ ಸ್ವಸಹಾಯ ಸಂಘ ಸಂಸ್ಥೆಗಳನ್ನು ಪ್ರತಿ ತಾಲೋಕು ಹಳ್ಳಿ ಹೋಬಳಿಗಳ ಮಟ್ಟದಲ್ಲಿ ರಚನೆಯಾಗುಂತೆ ಮಾಡಿ ಮಹಿಳೆಯರಿಗೆ ಮತ್ತು ರೈತರಿಗೆ ಸದುಪಯೋಗ ಆಗುವಂತೆ ಕ್ರಮ ಕೆ.ಗೊಳಬೇಕು.

4. ಆದಷ್ಟು ಖಾಸಗಿ ಸಂಘ ಸಂಸ್ಥೆಗಳಿಗೆ ಬ್ಯಾಂಕುಗಳ ಮೂಲಕ ಸಾಲ ಒದಗಿಸುವುದನ್ನು ಬಿಟ್ಟು ನೇರ ರೈತರಿಗೆ ಮಹಿಳೆಯರಿಗೆ ಹಾಗೂ ಹಿಂದುಳಿದ ಜನ ಸಾಮಾನ್ಯರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳು ದೊರಕುವಂತೆ ಕ್ರಮ ಕೈಗೊಳ್ಳಬೇಕು.

5. ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಕಡಿಮೆ ಮಾಡಬೇಕು. ಅತಿ ಹೆಚ್ಚು ತೆರಿಗೆ ವಿಧಿಸುವ ಪ್ರಕ್ರಿಯೆ ನಿಲ್ಲಬೇಕು.ರೈತ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಯಾಗಿ,ಯುವ ಜನತೆಗೆ ಉದ್ಯೋಗವಕಾಶಗಳು ಹೆಚ್ಚಾಗ ಬೇಕು.

6.ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹ ಲಕ್ಷಿ ಯೋಜನೆ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಪ್ರತಿ ತಿಂಗಳು ಮಹಿಳೆಯರ ಖಾತೆಗೆ ಹಣ ಸರಿಯಾಗಿ ಸಂದಾಯ ಆಗುತ್ತಿಲ್ಲ ಕಷ್ಟ ಕಾಲದಲ್ಲಿ 2000 ಹಣ ಬಹಳ ಸಹಕಾರಿಯಾಗುವಂತದ್ದು ಆದ್ದರಿಂದ ಈ ಯೋಜನೆ ಸಮರ್ಪಕವಾಗಿ ಜಾರಿಯಾಗುವಂತೆ ರಾಜ್ಯ ಸರ್ಕಾರ ನೋಡಿಕೊಳ್ಳಬೇಕು. ಕೇಂದ್ರ ಸರ್ಕಾರ ಬಂಡವಾಳಿಗರ ಪರವಾಗಿ ಕೆಲಸ ಮಾಡುವುದನ್ನು ಬಿಟ್ಟು ಜನತೆಯ ಪರವಾಗಿ ಕೆಲಸ ಮಾಡಬೇಕು. ಸಿದ್ದರಾಮಯ್ಯ ಸರ್ಕಾರ ರಾಜ್ಯದ ಜನತೆಗೆ ಕೊಟ್ಟ ಮಾತಿನಂತೆ ಆಡಳಿತ ನಡೆಸಬೇಕೆಂದು ಆಗ್ರಹಿಸಿದರು.

7. ಅಯೋಧ್ಯೆಯಲ್ಲಿ ನಡೆದಿರುವ ದಲಿತ ಹೆಣ್ಣು ಮಗಳ ಮೇಲಿನ ಅತ್ಯಾಚಾರ ಕೊಲೆಗೆ ಯೋಗಿ ಆದಿತ್ಯನಾಥನ್ ಸರ್ಕಾರ ಕೂಡಲೆ ಕ್ರಮಕ್ಕೆ ಮುಂದಾಗ ಬೇಕು. ಮತ್ತು ಹೆಚ್ಚುತ್ತಿರುವ ಅತ್ಯಾಚಾರ ಕೊಲೆಗಳ ವಿರುದ್ಧ ಸೂಕ್ತ ಕ್ರಮವನ್ನು ಜರುಗಿಸೇಕು.

8 ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಹಲವು ಅಪ್ರಾಪ್ತ ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಿಗೆ ಸಿದ್ದರಾಮಯ್ಯ ಸರ್ಕಾರ ಸೂಕ್ತ ಕಾನೂನು ಕ್ರಮ ಜಾರಿಮಾಡಬೇಕು.

9 ತ್ವರಿತ ನ್ಯಾಯಲಯಗಳ ಮೂಲಕ ಅತಿ ಶೀಘ್ರದಲ್ಲಿ ಅತ್ಯಾಚಾರ ಪ್ರಕರಣಗಳು ಇತ್ಯರ್ಥ ಆಗಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ಕ್ರಮ ಕೈಗೊಳ್ಳಬೇಕು.

10 ಮಹಿಳೆಯರ ಮತ್ತು ಮಕ್ಕಳ ಮೇಲಿನ ಅತ್ಯಾಚಾರಗಳು ಕಿರುಕುಳಗಳ ತಡೆಗಟ್ಟಲು ಮತ್ತು ಹಿಂದೆ ಸಿದ್ದರಾಮಯ್ಯ ಸರ್ಕಾರ ಉಗ್ರಪ ಕಮಿಟಿಯನ್ನು ಒಳಗೊಂಡು ರಚಿಸಿದ ಹೈ ಪವರ್ ಸಮಿತಿಯ ಶಿಫಾರಸ್ಸುಗಳನ್ನು ಚರ್ಚೆಗೆ ಮುನ್ನೆಲೆಗೆ ತಂದು ಕ್ರಮ ಕೈಗೊಳ್ಳಬೇಕಿದೆ.

11 ಸಾಮಾ ಕ ಜಾಲ ತಾಣಗಳಲ್ಲಿ ಹೆಗ್ಗಿಲ್ಲದೆ ಬಿತ್ತರಿಸುತ್ತಿರು ಅಶ್ಲೀಲ ವಿಡಿಯೋ ಗಳು ಮತ್ತು ಸ್ಪೋರಿಗಳು ಕೂಡಾ ಯುವ ಜನತೆ ಅಪರಾಧ ಎಸಗಲೂ ಪ್ರಭಾವ ಬೀರುತ್ತಿದ್ದು ಅದರ ಮೇಲೆ ಸರ್ಕಾರಗಳು ಗಂಭೀರ ಗಮನ ಹರಿಸಿ ಅಶ್ಲೀಲ ವಿಡಿಯೋ ಮತ್ತು ಸ್ಟೋರಿಗಳನ್ನು ಟ್ಯಾನ್ ಮಾಡಿಸುವಲ್ಲಿ ಸರ್ಕಾರ ಗಂಭೀರ ಗಮನ ಹರಿಸಬೇಕಿದೆ.

12 ಇನ್ನೂ ಮಂಡ್ಯದಲ್ಲಿ ನಡೆದಿರುವ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಹಲ್ಲೆಗೆ ಸಂಬಂಧಿಸಿದಂತೆ ಇಲ್ಲಿನ ಪೋಲಿಸ್ ಇಲಾಖೆಯೂ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳ ಬೇಕಿದೆ. ಮತ್ತು ಮಂಡ್ಯದಲ್ಲಿಯೂ ಹೆಚ್ಚುತ್ತಿರುವ ಗಾಂಜಾ ಆಫೀಮಿನಂತಹ ಮಾದಕ ವಸ್ತುಗಳ ಮಾರಟದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ.

13. ಇನ್ನೂ ಮಂಡ್ಯದಲ್ಲಿ ಇರುವ ಸಖಿ ಒನ್ ಸ್ಟಾಪ್ ಸೆಂಟರ್ ಅನ್ನು ಅವೈಜ್ಞಾನಿಕವಾಗಿ ಜಿಲ್ಲಾ ಆಸ್ಪತ್ರೆಯಿಂದ ತೆರವು ಗೊಳಿಸಿ ತರಕಾರಿ ಮಾರ್ಕೆಟ್ ನ ಮಧ್ಯದಲ್ಲಿ ತೆರೆದಿರುವುದು ನಾಚಿಕೇಡು ಮತ್ತು ಖಂಡನೀಯ ಏಕ ಗವಾಕ್ಷಿ ಯೋಜನೆ ಬಂದಿರುವುದೇ ದೌರ್ಜನ್ಯ ಅತ್ಯಾಚಾರಕ್ಕೆ ಒಳಗಾದ ಹೆಣ್ಣು ಮಕ್ಕಳಿಗೆ ಒಂದೇ ಸೂರಿನಡಿ ಎಲ್ಲಾ ರೀತಿಯ ಸೌಲಭ್ಯ ಚಿಕಿತ್ಸೆ ಮತ್ತು ಕಾನೂನು ಕ್ರಮಕ್ಕೆ ನೆರವಾಗಲಿ ಎಂಬ ಉದ್ದೇಶದಿಂದ ಹಾಗಾಗಿ ಎಲ್ಲ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಸಖಿ ಸೆಂಟರ್ ಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಇದ್ದರೆ. ಮಂಡ್ಯದಲ್ಲಿ ಸಖಿ ಸೆಂಟರ್ ಅನ್ನು ತರಕಾರಿ ಮಾರುಕಟ್ಟೆಯಲ್ಲಿ ತೆರೆದಿರುವುದು ನಾಚೀಕೇಡು. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಇಲ್ಲಿನ ಜಿಲ್ಲಾಡಳಿತ ಎಷ್ಟು ಗಂಭೀರವಾಗಿ ಪರಗಣಿಸಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ದೌರ್ಜನ್ಯಕ್ಕೊಳಗಾದ ಹೆಣ್ಣು ಮಕ್ಕಳನ್ನು ತರಕಾರಿ ಮಾರ್ಕೆಟ್ ನಿಂದ ಜಿಲ್ಲಾ ಆಸ್ಪತ್ರೆಗೆ ರಾತ್ರಿಯ ವೇಳೆಯಲ್ಲಿ ಕರೆತರಲು ವಾಹನದ ಸೌಲಭ್ಯ ಅಥವಾ ಭದ್ರತೆಯ ಕೊರತೆಯ ಲೋಪಗಳು ಎದ್ದು ಕಾಣುತ್ತಿವೆ. ಕೂಡಲೆ ಇದನ್ನು ಸರಪಡಿಸಿ ಮೊದಲಿನಂತೆ ಜಿಲ್ಲಾ ಆಸ್ಪತ್ರೆಯಲ್ಲಿ ಸಖಿ ಸೆಂಟರ್ ತೆರೆಯಲು ಜಿಲ್ಲಾಡಳಿತ ಅಗತ್ಯಕ್ರಮ ಕೈಗೊಳ್ಳಬೇಕು. ಮಂಡ್ಯ ಜಿಲ್ಲೆಯಲ್ಲಿ ದೌರ್ಜನ್ಯ ತಡೆಗಟ್ಟಲು ಅರಿವಿನ ಅಭಿಯಾನಗಳನ್ನು ಹೆಚ್ಚು ಹೆಚ್ಚು ಜನಸಾಮಾನ್ಯರ ನಡುವೆ ಕೊಂಡೊಯ್ಯಲು ಸಂಭಂದ ಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಜನಶಕ್ತಿ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು, ರೈತಸಂಘದ ಲತಾ ಶಂಕರ್, ಮಹಿಳಾ ಮುನ್ನಡೆಯ ಶಿಲ್ಪ, ಪ್ರಿಯಾ ರಮೇಶ್, ಲಕ್ಷ್ಮಮ್ಮ, ಪಾಂಡು, ಅಂಜಲಿ ಹಾಗೂ ಮುತ್ತಮ್ಮ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ