ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷ-ಉಪಾಧ್ಯಕ್ಷರಾಗಿ ಕಾಂಗ್ರೆಸ್-ರೈತಸಂಘ ಮೈತ್ರಿಕೂಟದ ಬೆಂಬಲಿತ ಅಭ್ಯರ್ಥಿಗಳಾದ ಜಯರಾಮು ಮತ್ತು ಮುತ್ತಮ್ಮ ಚುನಾಯಿತರಾದರು.
ಮುಂದುವರೆದ ಅವಧಿಗೆ ಸರ್ಕಾರ ಮೀಸಲಾತಿ ನಿಗದಿಪಡಿಸಿದ್ದ ಹಿನ್ನೆಲೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು.
ಡಿಂಕಾ ಗ್ರಾಮ ಪಂಚಾಯತಿಯ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್-ರೈತಸಂಘ ಮೈತ್ರಿಕೂಟದ ಅಭ್ಯರ್ಥಿ ಜಯರಾಂ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮಹದೇವಪ್ಪ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್-ರೈತಸಂಘ ಮೈತ್ರಿಕೂಟದ ಅಭ್ಯರ್ಥಿ ಮುತ್ತಮ್ಮ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಸರಸ್ವತಿ ನಾಮಪತ್ರ ಸಲ್ಲಿಸಿದ್ದರು. ಮೈತ್ರಿಕೂಟದ ಅಭ್ಯರ್ಥಿಗಳಾದ ಜಯರಾಂ 7-4, ಮುತ್ತಮ್ಮ 6-5ಮತಗಳ ಅಂತರದಿಂದ ಗೆಲುವು ಸಾಧಿಸಿ ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾದರು. ಓರ್ವ ಸದಸ್ಯ ಗೈರಾಗಿದ್ದರು. ಎಚ್.ಎಲ್.ಬಿ.ಸಿ ಎಇಇ ಪುಟ್ಟಮಾಯಿಗೌಡ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆಯೇ ರೈತಸಂಘ-ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಿಸಿದರು.
ಈ ವೇಳೆ ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಸದಸ್ಯರಾದ ರತಿ ಪಾಲಾಕ್ಷ, ನಂಜೇಗೌಡ, ಮಮತಾ, ಭಾಗ್ಯಮ್ಮ, ಮುಖಂಡರಾದ ಡಿಂಕಾ ರಮೇಶ್, ತಮ್ಮಯ್ಯ, ಪಾಲಾಕ್ಷ, ಮಲ್ಲಿಗೆರೆ ದೇವರಾಜು, ರಾಜೇಶ್, ಗಿರೀಶ್, ಸೋಮಶೇಖರ್, ಜಗದೀಶ್, ಚಂದ್ರು, ಚನ್ನಪ್ಪ, ಶೇಖರಯ್ಯ, ಅಣ್ಣೇಗೌಡ, ಗೋಪಾಲ್, ಮಂಜು, ಯುವ ಕಾಂಗ್ರೆಸ್ ಮುಖಂಡರಾದ ಚಂದ್ರಶೇಖರ್ ಸಿಎಂ ಹಾಗೂ ರೈತ ಸಂಘದ ಮುಖಂಡ ಪುಟ್ಟೇಗೌಡ ಇತರರು ಅಭಿನಂದಿಸಿದರು.




