ಮಂಡ್ಯದ ಚಿಕ್ಕಮಂಡ್ಯ ಶಾಲೆಯೊಂದರಲ್ಲಿ ಅಪ್ರಾಪ್ತ ಬಾಲಕಿಯೊಬ್ಬರ ಮೇಲೆ ಅತ್ಯಾಚಾರ ನಡೆದಿದೆ ಅಥವಾ ಅತ್ಯಾಚಾರಕ್ಕೆ ಯತ್ನ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಪೊಲೀಸ್ ಇಲಾಖೆಯೂ ತ್ವರಿತ ತನಿಖೆ ನಡೆಸಿ ಸತ್ಯಾಂಶವನ್ನು ಹೊರಗೆಳೆಯಬೇಕೆಂದು ವಿವಿಧ ಪ್ರಗತಿಪರ ಸಂಘಟನೆಗಳು ಆಗ್ರಹಿಸಿವೆ.
ವೈದ್ಯಕೀಯ ವರದಿಗಳ ಪ್ರಕಾರ ಅತ್ಯಾಚಾರ ಘಟನೆ ನಡೆದಿಲ್ಲ ಎಂದು ಪೊಲೀಸರು ಹೇಳಿದ್ದಾರೆ ಎಂಬ ಮಾಹಿತಿಯನ್ನು ಮಾಧ್ಯಮಗಳು ವರದಿ ಮಾಡಿವೆ ಹಾಗೂ ತೊಂದರೆಗೊಳಗಾದ ಬಾಲಕಿಗೆ ಚಿಕಿತ್ಸೆ ಕೊಡಿಸಲು ಮುಂದಾದವರನ್ನೇ ಪೊಲೀಸರು ವಶಕೆ ಪಡೆದು ಬಿಡುಗಡೆ ಮಾಡಿದ ಸುದ್ದಿಯು ಕೂಡ ಹರಿದಾಡುತ್ತಿದೆ. ಈ ಎಲ್ಲಾ ಅನುಮಾನಾಸ್ಪದ ಘಟನೆಗಳ ಹಿನ್ನೆಲೆಯಲ್ಲಿ ಪ್ರಕರಣದ ತ್ವರಿತ ಮತ್ತು ನ್ಯಾಯಯುತ ತನಿಖೆ ಕೈಗೊಳ್ಳಬೇಕೆಂದು ಆಲ್ ಇಂಡಿಯ ಲಾಯರ್ಸ್ ಯೂನಿಯನ್, ಸಿಐಟಿಯು ಸಂಘಟನೆ ಮತ್ತು ಮಹಿಳಾ ಮುನ್ನಡೆಯ ಪ್ರತಿನಿಧಿಗಳು ಜಿಲ್ಲಾ ಪೊಲೀಸ್ ವರಿಷ್ಟಾದಿಕಾರಿಗಳನ್ನು ಭೇಟಿ ಮನವಿ ಮಾಡಿದ್ಧಾರೆ.

ತನಿಖೆಯೇ ಮುಗಿಯದೆ ಪೊಲೀಸರು ಮಾಧ್ಯಮಗಳಿಗೆ ಅತ್ಯಾಚಾರ ಆಗಿಲ್ಲ ಎಂದು ಮಾಹಿತಿ ಕೊಟ್ಟಿದೆಗೇ …?ಆರೋಪಿಗಳನ್ನು ಇನ್ನೂವರೆಗೆ ಏಕೆ ಬಂಧಿಸಿಲ್ಲ..? ನ್ಯಾಯಾಧೀಶರ ಮುಂದೆ ಅಪ್ರಾಪ್ತ ಬಾಲಕಿ ಹೇಳಿಕೆ ತ್ವರಿತವಾಗಿ ಏಕೆ ಆಗಲಿಲ್ಲ ಎಂಬ ಪ್ರಶ್ನೆಗಳನ್ನು ನಿಯೋಗವು ಪೋಲಿಸ್ ವರಿಷ್ಠಾಧಿಕಾರಿಗಳ ಮುಂದಿಟ್ಟಿತ್ತು.
ಇದಕ್ಕೆ ಆಲ್ ಇಂಡಿಯ ಲಾಯರ್ಸ್ ಯೂನಿಯನ್ ಅಧ್ಯಕ್ಷ ಬಿ ಟಿ ವಿಶ್ವನಾಥ ಅವರಿಗೆ ಉತ್ತರಿಸಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು, ನಮ್ಮ ಇಲಾಖೆ ಮಾಧ್ಯಮಗಳಿಗೆ ಈ ವಿಷಯದ ಕುರಿತು ಮಾಹಿತಿ ಕೊಟ್ಟಿಲ್ಲ ಎಂದರು.
ಗಾಗಿದರೆ ಈ ಮಾಹಿತಿ ಸುಳ್ಳಾಗಿದಲ್ಲಿ ವಿಶೇಷ ಮಕ್ಕಳ ಪೊಲೀಸ್ ಘಟಕದ ಜಿಲ್ಲಾ ಮುಖ್ಯಸ್ಥರಾಗಿ ತಪ್ಪು ಮಾಹಿತಿ ವರದಿ ಮಾಡಿದ ತಪ್ಪಿತಸ್ಥ ಮಾಧ್ಯಮಗಳ ವಿರುದ್ಧ ಕ್ರಮಕ್ಕಾಗಿ CWC ಯ ಮುಂದೆ ತಮ್ಮ ಇಲಾಖೆ ಅರ್ಜಿ ಸಲ್ಲಿಸಲ್ಲಿದೆಯೇ ಎಂದು ಬಿಟಿವಿ ಪ್ರಶ್ನಿಸಿದರು.
ಜನವಾದಿ ಸಂಘಟನೆಯ ಕುಮಾರಿ ಮತ್ತು ಮಹಿಳಾ ಮುನ್ನಡೆಯ ಪೂರ್ಣಿಮಾ ಅವರು ನೊಂದ ಬಾಲಕಿ ಮತ್ತು ಆಕೆಯ ಕುಟುಂಬಕ್ಕೆ ರಕ್ಷಣೆ ನೀಡಬೇಕೆಂದು ಮತ್ತು ಎಲ್ಲಾ ಶಾಲೆಯಲ್ಲಿ ಸಿಸಿಟಿವಿ ಅಳವಡಿಸಬೇಕೆಂದು ಜೊತೆಗೆ ಮಕ್ಕಳ ದೌರ್ಜನ್ಯದ ವಿರುದ್ದ ಸುರಕ್ಷತೆಗೆ ಕ್ರಮವಹಿಸಲು ತ್ವರಿತವಾಗಿ ಸಂಬಂಧಿಸಿದ ಇಲಾಖೆಗಳ ಸಭೆ ಕರೆಯುವಂತೆ ಒತ್ತಾಯಿಸಿದರು.




