Monday, November 23, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಮುಚ್ಚಿರುವ ಸರ್ಜಿಕಲ್ ಐಸಿಯು ತೆರೆಯಲು ಒತ್ತಾಯ

ಮಂಡ್ಯ ಜಿಲ್ಲೆಯಲ್ಲಿ ದಾನಿಗಳು ಕೊಡುಗೆಯಾಗಿ ನೀಡಿರುವ ಸರ್ಜಿಕಲ್ ಐಸಿಯು ಬಾಗಿಲು ಮುಚ್ಚಿದೆ, ಇದರ ಜೊತೆಗೆ ಇ.ಎನ್.ಟಿ. ವಾರ್ಡ್ ಕೂಡ ಬಂದ್ ಆಗಿದ್ದು, ಅವುಗಳನ್ನು ಕೂಡಲೇ ತೆರೆಯಬೇಕು ಹಾಗೂ ಕ್ಯಾನ್ಸರ್ ಆಸ್ಪತ್ರೆ ತಕ್ಷಣಕ್ಕೆ ಪ್ರಾರಂಭಿಸಬೇಕೆಂದು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್ ಒತ್ತಾಯಿಸಿದ್ದಾರೆ.

ಮಂಡ್ಯ ಮೆಡಿಕಲ್ ಕಾಲೇಜು ನಿರ್ದೇಶಕ ಹಾಗೂ ಮಂಡ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಈಗಾಗಲೇ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಟ್ರಸ್ಟ್ ಒಂದು ರೋಗಿಗಳಿಗೆ ಅನುಕೂಲವಾಗಲೆಂದು 51 ಸರ್ಜಿಕಲ್ ಐ.ಸಿ.ಯು. ಕೊಠಡಿಯನ್ನು ದಾನವಾಗಿ ನೀಡಿದೆ. ಆದರೆ ಅದು ಬೀಗ ಹಾಕಲಾಗಿದೆ.

ಮಂಡ್ಯ ಜಿಲ್ಲೆಗೆ ದಿನದಿಂದ ದಿನಕ್ಕೆ ರೋಗಿಗಳು ಹೆಚ್ಚುತ್ತಿದ್ದಾರೆ. ರಾಮನಗರ, ತುಮಕೂರು, ಮೈಸೂರು, ಚಾಮರಾಜನಗರ ಜಿಲ್ಲೆಯ ಜನರು ಕೂಡ ಜಿಲ್ಲಾ ಆಸ್ಪತ್ರೆಗೆ ಬರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಗಳ ವೈದ್ಯಾಧಿಕಾರಿಗಳು ಈ ತರಹದ ಧೋರಣೆಯನ್ನು ತೋರುತ್ತಿರುವುದು ಖಂಡನೀಯ. ತಕ್ಷಣ ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಎಲ್ಲಾ ಐ.ಸಿ.ಯು. ವಾರ್ಡ್‌ಗಳು ಪ್ರಾರಂಭಿಸಬೇಕು, ಇ.ಎನ್.ಟಿ. ವಾರ್ಡ್ ತೆರೆಯಬೇಕು ಜೊತೆಗೆ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಬರುತ್ತಿರುವ ರೋಗಿಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯ ಜೊತೆಗೆ ಶಸ್ತ್ರ ಚಿಕಿತ್ಸೆ ಕೂಡ ಇಲ್ಲಿಯೇ ಮಾಡಬೇಕು ಎಂದು ಆಗ್ರಹಿಸಿದ್ದರು.

ಕಳೆದ 3 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ 57 ಕೋಟಿ ವೆಚ್ಚದ ಕ್ಯಾನ್ಸರ್ ಆಸ್ಪತ್ರೆ ಪ್ರಾರಂಭಿಸಿಲ್ಲ, ಇದರಿಂದ  ಕ್ಯಾನ್ಸರ್ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಕ್ಯಾನ್ಸರ್ ರೋಗವನ್ನು ಗುಣಪಡಿಸಿಕೊಳ್ಳಲು ಬೆಂಗಳೂರು-ಮೈಸೂರಿಗೆ ಅಲೆದಾಡಬೇಕಾಗಿದೆ.  57 ಕೋಟಿ ವೆಚ್ಚದ ಆಸ್ಪತ್ರೆ ಗ್ರಹಣವಿಡಿದಂತೆ ಆಗಿದೆ. ಕ್ಯಾನ್ಸರ್ ಆಸ್ಪತ್ರೆಗೆ ತಂದಿರುವ ಉಪಕರಣಗಳು ತುಕ್ಕು ಹಿಡಿಯುವ ಹಂತಕ್ಕೆ ಬಂದಿವೆ. ತಕ್ಷಣಕ್ಕೆ ಕ್ಯಾನ್ಸರ್ ಆಸ್ಪತ್ರೆಯನ್ನು ಪ್ರಾರಂಭಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕನ್ನಡ ಸೇನೆಯ ಜಿ ಮಹಾಂತಪ್ಪ, ರಾಜ್ಯ ಸಂಚಾಲಕಿ ದೇವಮ್ಮ, ಮಹಿಳಾ ಅಧ್ಯಕ್ಷರಾದ ಸೌಭಾಗ್ಯ, ಸಂಘಟನೆ ಕಾರ್ಯದರ್ಶಿ ಪವಿತ್ರ, ಮಂಡ್ಯ ನಗರ ಅಧ್ಯಕ್ಷರಾದ ಶಿವಾಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ನಗರ ಕಾರ್ಯದರ್ಶಿ ರವಿ, ಸಂಘಟನೆ ಕಾರ್ಯದರ್ಶಿ ರಮೇಶ್, ಜಿಲ್ಲಾ ಸಂಚಾಲಕ ಶಿವರಾಜ್, ಮದ್ದೂರು ತಾಲೂಕು ಅಧ್ಯಕ್ಷ ಪ್ರಜ್ವಲ್, ಮಂಡ್ಯ ತಾಲೂಕು ಕಾರ್ಯದರ್ಶಿ
ಯರಳ್ಳಿ ಕುಮಾರ್, ಮಳವಳ್ಳಿ ತಾಲೂಕು ಕಾರ್ಯದರ್ಶಿ ಮಹೇಶ್ ಮತ್ತಿತರರು ಉಪಸ್ಥಿರದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ