Friday, November 20, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು : ಗಾರ್ಮೆಂಟ್ಸ್ ಬೇಜವಾಬ್ದಾರಿಗೆ ಕಾರ್ಮಿಕರ ಜೀವನ ಬಲಿ

ಮದ್ದೂರು ತಾಲ್ಲೂಕಿನ ಗೆಜ್ಜೆಲಗೆರೆ ಕೈಗಾರಿಕಾ ಪ್ರದೇಶದ ಗಾರ್ಮೆಂಟ್ಸ್ ಒಂದರ ಬೇಜವಾಬ್ದಾರಿಯಿಂದಾಗಿ ಇಬ್ಬರು ಕಾರ್ಮಿಕರು ಆಸ್ಪತ್ರೆ ಸೇರಿ ನರಳುವಂತಾಗಿದೆ.

ನಿನ್ನೆ ಫೆ. 20ರಂದು ಮದ್ಯಾಹ್ನ 12 ಗಂಟೆ ಸಮಯದಲ್ಲಿ ಕಾರ್ಖಾನೆಯಲ್ಲಿ ಅವಘಡ ಸಂಭವಿಸಿದ್ದು, ಪ್ರಿಂಟಿಂಗ್ ವಿಭಾಗದ ಮಿಷನ್ ನಲ್ಲಿ ಕೆಲಸ ಮಾಡುವ ಸಂರ್ಭದಲ್ಲಿ ಸ್ಪಾಟ್ ಲಿಕ್ಕರ್ ( ಸ್ಪ್ರೇ ಬಾಟಲ್ ) ನಿಂದ ಕೆಮಿಕಲ್ ಬ್ಲಾಸ್ಟ್ ಆದ ಪರಿಣಾಮ ಅಲ್ಲೇ ಕೆಲಸ ಮಾಡುತ್ತಿದ್ದ ಶಿವಕುಮಾರ್. ಪ್ರಸನ್ನ ಎಂಬ ಕಾರ್ಮಿಕರಿಗೆ ಮುಖ ಸುಟ್ಟಿದೆ ಭುಜದ ಭಾಗಕ್ಕೆ ತೀವ್ರ ಹೊಡೆತ ಬಿದ್ದಿದೆ.

ಶಿವಕುಮಾರ್ ಎಂಬ ಕಾರ್ಮಿಕನಿಗೆ ಪೆಕ್ಕೆಯ ಭಾಗ ಸುಟ್ಟಿದೆ. ಅಲ್ಲೇ ಪಕ್ಕದಲಿದ್ದ ಲಕ್ಶ್ಮೀ ಎಂಬ ಕಾರ್ಮಿಕಳು ಕೆಮಿಕಲ್ ಬ್ಲಾಸ್ಟ್ ಆದ ಭಯಕ್ಕೆ ಅರೆ ಪ್ರಜ್ಞೆಹೀನಳಾಗಿ ಆಕೆಯ ಕೈ, ಕಾಲುಗಳು ಸೇಕ್ ಆಗಿವೆ. ಹೆಚ್ಚಿನ ಚಿಕಿತ್ಸೆಗೆ ಮದ್ದೂರು ಸಿದ್ದೇಗೌಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ವಾಪಸ್ ಕಂಪನಿಗೆ ಆಂಬುಲೆನ್ಸ್ ನಲ್ಲಿ ಕರೆತಂದು ಆಂಬುಲೆನ್ಸ್ ನಲ್ಲೆ ಒಂದು ಗಂಟೆಕಾಲ ಇರಿಸಿ ತದ ನಂತರ ಮನೆಗೆ ಕರೆದುಕೊಂಡು ಬಿಟ್ಟು ಹೋಗಿದ್ದಾರೆಂದು ಕಾರ್ಮಿಕ ಮುಖಂಡ ಜಯರಾಮ್ ದೂರಿದ್ದಾರೆ.

ಕಾರ್ಖಾನೆಯಲ್ಲಿ ಅವಘಡದ ಬಗ್ಗೆ ಗಾಯಾಳುಗಳಾದ ಶಿವಕುಮಾರ್. ಮತ್ತು ಪ್ರಸನ್ನ ಅವರೇ ನೆಡೆದ ಘಟನೆಯನ್ನು ಕಾರ್ಮಿಕ ಮುಖಂಡರೊಂದಿಗೆ ಹಂಚಿಕೊಂಡಿದ್ದು, ಇದಾದ ನಂತರ ನೋವು ತಡೆಯಲಾರದೆ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ತುರ್ತು ಚಿಕಿತ್ಸೆ ನೀಡಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಕಳಿಸಿರುತ್ತಾರೆ.

ಹಾಗಾಗಿ ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಕರ್ನಾಟಕ ಇಂಡಿಪೆಂಡೆಂಟ್ ಗಾರ್ಮೆಂಟ್ ವರ್ಕರ್ಸ್ ಯೂನಿಯನ್ (KIGWU), ನೊಂದ ಕಾರ್ಮಿಕರಿಗೆ ತೀವ್ರವಾಗಿ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ