Saturday, November 21, 2026

ಪ್ರಾಯೋಗಿಕ ಆವೃತ್ತಿ

ಹಣ ಆಸ್ತಿಗಿಂತ ಹೆಚ್ಚಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ಅಗತ್ಯ ; ತ್ಯಾಗರಾಜು

ಪೋಷಕರು ಮಕ್ಕಳಿಗಾಗಿ ಹಣ-ಆಸ್ತಿ ಮಾಡುವ ಬದಲು ಅವರಿಗೆ ಉತ್ತಮವಾದ ಶಿಕ್ಷಣ ನೀಡಿದರೆ, ಅವರೇ ಸಮಾಜಕ್ಕೆ ದೊಡ್ಡ ಆಸ್ತಿಯಾಗುತ್ತಾರೆಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ತ್ಯಾಗರಾಜು ತಿಳಿಸಿದರು.

ಮಂಡ್ಯದ ವಿ.ವಿ.ನಗರದ ನಾಗಸಿರಿ ಸಮುದಾಯ ಭವನದಲ್ಲಿಇಂದು ನಡೆದ ವಿದ್ಯಾ ಭಾರತಿ ಟ್ರಸ್ಟ್ (ರಿ), ಮಾಂಡವ್ಯ ಹಿರಿಯ ಪ್ರಾಥಮಿಕ ಶಾಲೆ (ಆಂಗ್ಲ ಮಾಧ್ಯಮ)ಯ ವಾರ್ಷಿಕೋತ್ಸವ 2024-25 ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮಂಡ್ಯದಲ್ಲಿ ಕಳೆದ 40 ವ‍ರ್ಷಗಳ ಹಿಂದೆಯೇ ಮಾಂಡವ್ಯ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ, ಉತ್ತಮವಾಗಿ ನಡೆಸಿಕೊಂಡು ಬರುತ್ತಿರುವ ಹೆಗ್ಗಳಿಕೆ ಮೀರಾಶಿವಲಿಂಗಯ್ಯ ಅವರದ್ದಾಗಿದೆ. ಶಿಕ್ಷಣವನ್ನು ವಾಣಿಜ್ಯ ಚಟುವಟಿಕೆಯನ್ನಾಗಿ ನೋಡದೇ, ಆರ್ಥಿಕ ಸಂಕಷ್ಟದಲ್ಲಿರುವವರಿಗೆ ವಿದ್ಯಾಸಂಸ್ಥೆಯಲ್ಲಿ ಕಡಿಮೆ ಶುಲ್ಕದಲ್ಲಿ ಶಿಕ್ಷಣ ನೀಡುತ್ತಿರುವುದು ಅವರ ಹೃದಯ ವೈಶಾಲತೆಗೆ ಸಾಕ್ಷಿಯಾಗಿದೆ ಎಂದರು.

ವಿದ್ಯಾಭಾರತಿ ಟ್ರಸ್ಟಿನ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿವರ್ಷ ವಾರ್ಷಿಕೋತ್ಸವವು ಹಬ್ಬದ ರೀತಿ ನಡೆಯುತ್ತದೆ. ಶಿಕ್ಷಣವೆಂದರೆ ಮಕ್ಕಳನ್ನು ಮಾನವಂತರಾಗಿಸುವುದು, ಘನತೆಯಿಂದ ಬದುಕುವುದಾಗಿದೆ ಎಂದರು.

ವೇದಿಕೆಯಲ್ಲಿ ಗೀತಾಂಜಲಿ ಇಂಟರ್ನ್ಯಾಷನಲ್ ಶಾಲೆಯ ಪ್ರಾಂಶುಪಾಲರಾದ ಎಚ್. ಸರೋಜಾ, ಮಾಂಡವ್ಯ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎಸ್.ಸುನೀತಾ, 6ನೇ ವಾರ್ಡಿನ ನಗರಸಭಾ ಸದಸ್ಯರಾದ ಟಿ.ರವಿ, ನಗರಸಭಾ ಮಾಜಿ ಸದಸ್ಯ ಸದಸ್ಯರಾದ ಕೆ.ಸಿ.ರವೀಂದ್ರ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ರಂಗಸ್ವಾಮಿ ಸೇರಿದಂತೆ ಮತ್ತಿತರರು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ