ಮಳವಳ್ಳಿ ತಾಲ್ಲೂಕಿನ ಹಿಟ್ಟನಹಳ್ಳಿ ಕೊಪ್ಪಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ 11 ಸ್ಥಾನಗಳಲ್ಲಿ 06 ಸ್ಥಾನಗಳನ್ನು ಕಾಂಗ್ರೆಸ್ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವ ಮೂಲಕ ಬಹುಮತವನ್ನು ಸಾಧಿಸಿದರು.
ಹಿಟ್ಟನಹಳ್ಳಿ ಕೊಪ್ಪಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಾಲಗಾರ ಅಲ್ಲದ ಕ್ಷೇತ್ರದಲ್ಲಿ ಮೋಹನ್ ಕುಮಾರ್ ಗೆದ್ದು ಬಿಗಿದರೆ ಪುಟ್ಟಸ್ವಾಮಿ ಪರಾಜಿತ ಅಭ್ಯರ್ಥಿಯಾದರು. ಇನ್ನು ಉಳಿದ ಹತ್ತು ಸ್ಥಾನಗಳಲ್ಲಿ ಐದು ಸ್ಥಾನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆದ್ದರೆ ಇನ್ನು ಐದು ಸ್ಥಾನ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದರು. ಚುನಾವಣೆಯು ರೋಚಕತೆಯಿಂದ ಕೂಡಿದ್ದು ಕಾಂಗ್ರೆಸ್ ಆರು ಅಭ್ಯರ್ಥಿಗಳು ಗೆದ್ದು ಆಡಳಿತ ಮಂಡಳಿಯನ್ನು ಹಿಡಿಯುವ ಸೂಚನೆ ನೀಡಿದರು.
ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆ ಆಚರಿಸಿದರು




