Tuesday, November 24, 2026

ಪ್ರಾಯೋಗಿಕ ಆವೃತ್ತಿ

ಖಾವಂದರು ಮತ್ತು ಸಾಮಾನ್ಯ ಯೂಟ್ಯೂಬರ್ !

ನಾಡಿನೆಲ್ಲೆಡೆ ಇದೀಗ ಯೂಟ್ಯೂಬರ್ ಸಮೀರ್‌ನದ್ದೇ ಸದ್ದು. ದಶಕಗಳ ಹಿಂದೆ ಧರ್ಮಸ್ಥಳದಲ್ಲಿ ನಿಗೂಢವಾಗಿ ಕೊಲೆಗೀಡಾಗಿದ್ದ ಸೌಜನ್ಯ ರೇಪ್ ಅಂಡ್ ಮರ್ಡರ್ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.

nudikarnataka.com

ದೊಡ್ಡ ದೊಡ್ಡ ಹೆಸರುಗಳು ಈ ಪ್ರಕರಣದಲ್ಲಿ ಕೇಳಿ ಬರುತ್ತಿದ್ದರೂ ಪ್ರಕರಣದ ತನಿಖೆಯೂ ನಿಗೂಢವಾಗಿದೆ. “ಬೆಟ್ಟ ಅಗೆದು ಇಲಿ ಹಿಡಿದರೂ ದೊಡ್ಡವರು ಆರಾಮವಾಗಿ ಓಡಾಡಿಕೊಂಡಿದ್ದಾರೆ.

ಪಾಪ ಬಡ ಹೆಣ್ಮಗಳು ನ್ಯಾಯ ಸಿಗುತ್ತಿಲ್ಲ ಕಣ್ರೀ” ಅನ್ನುವ ಮಾತುಗಳೂ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ಇದರ ಸುತ್ತ ಯುವಜನತೆ ಏನು ಮಾತಾಡಿಕೊಳ್ಳುತ್ತಿದೆ ಎಂಬುದರ ಕುರಿತು ಇಲ್ಲಿ ಬೆಳಕು ಚೆಲ್ಲಲಾಗಿದೆ.

ನುಡಿ ಕರ್ನಾಟಕ.ಕಾಂ ನಲ್ಲಿ ಇಂದಿನಿಂದ ಯುವ ಬರಹಗಾರ ಸಂಜು ಆಲಕೆರೆ ಅವರ ಹೊಸ ಅಂಕಣ ‘ಸಂಚು & ಪಂಚು’ ಆರಂಭವಾಗುತ್ತಿದೆ.

ಸಂಚು : ಥ್ಯಾಂಕ್ಸ್ ಮಗಾ ಬೇಗ ಬಂದು ಸಮೀರ್ ಮಾಡಿರೋ ವಿಡಿಯೋ ಬಗ್ಗೆ ಒಂದಷ್ಟು ವೊತ್ತು ಚರ್ಚೆ ಮಾಡಿದ್ದಿಕ್ಕೆ..

ಪಂಚು : ಈಗಾ ಹೇಳು ಏನ್ ಅನ್ಸುತ್ತೆ ನಿನ್ಗೆ,

ಸಂಚು : ಲೋ ಸ್ಟೋರಿನ ಈ ರೀತಿನೂ ಹೇಳ್ಬಹುದಾ, ಸಿನಿಮಾ ಮಾಡುದ್ರೆ 100 ದಿನ ಪಕ್ಕ

ಪಂಚು : ಏನ್ ಹೇಳ್ತಿದ್ಯ

ಸಂಚು : ಅಬ್ಬಬ್ಬಾ ಎಂತಾ ವಾಕ್ಚಾತುರ್ಯ ಅವನದು, ಸತ್ಯನೋ ಸುಳ್ಳೋ ಗೊತ್ತಿಲ್ಲ ಆದ್ರೆ, ಒಬ್ಬ ಸಾಮಾನ್ಯ ಯೂಟ್ಯೂಬರ್ ದೊಡ್ಡ ವ್ಯಕ್ತಿಯನ್ನೇ ಎದುರು ಹಾಕಿಕೊಳ್ಳೋದು ಅಂದ್ರೆ ಸುಲಭ ಅಲ್ಲ ಬಿಡು..

ಪಂಚು : ಕೊಲೆಗಾರರ ರಕ್ಷಣೆಗೆ ನಿಂತವರ ಬಗ್ಗೆ ಅಷ್ಟೊಂದ್ ವಿಚಾರ ಕಲೆ ಹಾಕಿದ್ದಾನೆ ಕಲೆಗಾರ…

ಸಂಚು : ಎಷ್ಟೇ ದೊಡ್ಡ ಬುದ್ದಿವಂತ ಆದ್ರೂ ಕೂಡಾ ಸ್ವಲ್ಪ ನಾದ್ರೂ ದಡ್ಡತನ ಇರುತ್ತೆ ಅನ್ನೋ ಹಾಗೆ, ಆ ದೊಡ್ಡ ವ್ಯಕ್ತಿಯ ಮತ್ತು ಕುಟುಂಬಕ್ಕೆ ಬೇರೆ ಸಮುದಾಯದ ಹೆಸರು ಬಳಸಿದ್ದು ತಪ್ಪು ಅನ್ಸುತ್ತೆ…

ಪಂಚು :- ಹೌದ ಹೇಗೆ

ಸಂಚು : ಗೌಡ್ರು ಅಂತ ಬಳಸಿರುವುದರಿಂದ, ಎಲ್ಲರು ಆ ವಿಡಿಯೋ ದೃಷ್ಟಿಕೋನ ಹಿಡ್ಕೊಂಡೆ ಮಾತಾಡೋಕೆ ಶುರುಮಾಡ್ತಾರೆ, ಕೊಲೆಗಾರರ ರಕ್ಷಣೆಗೆ ನಿಂತ ವ್ಯಕ್ತಿಯನ್ನು ದೊಡ್ಡ ಗೌಡ, ಚಿಕ್ಕ ಗೌಡ ಅಂತಾನೆ ಬಳಸಿ ನಿಂದಿಸುವಾಗ, ನಿಜವಾದ ಗೌಡ್ರು ಕುಟುಂಬಕ್ಕೆ ಮತ್ತು ಸಮುದಾಯಕ್ಕೆ ಮುಜುಗರ ತರುವಂತೆ ಆದಾಗ, ಆ ಸಮುದಾಯಗಳ ಜನರು ತಿರುಗಿ ಬೀಳಬಹುದು..

ಪಂಚು : ಏನೋ ನಿನ್ ತಲೆ… ಸೂಪರ್ ಕಣೋ ಮತ್ತೆ ಬೇರೆ ಏನಾದ್ರು ಗಮನಿಸಿದ

ಸಂಚು : ಸೋರಿ ಮಗಾ ಮಧ್ಯಾಹ್ನ ಏನೇನೋ ಮಾತಾಡ್ದೆ, ಆ ಒಂದ್ ವಿಡಿಯೋ ತುಂಬ ತಲೆ ಕೆಡಿಸಿ ಬಿಟ್ಟಿದೆ…

ಪಂಚು : ನಿನಗೆ ತಲೆ ಮಾತ್ರ ಕೆಡಿಸಿರಬಹುದು, ಆದ್ರೆ ಎಷ್ಟೋ ಜನರ ನಿದ್ರೆ ಕೆಡ್ಸಿರುತ್ತೆ ಬಿಡು…

ಸಂಚು : ಸತ್ಯ ಕಣೋ..ಆ ಹುಡುಗನನ್ನು ಆ ಗ್ಯಾಂಗ್ ಸುಮ್ನೆ ಬಿಡ್ತಾರಾ,

ಪಂಚು : ಹೌದು ಮಗಾ ಯಾವ್ ತರ ಟಾರ್ಗೆಟ್ ಮಾಡ್ಕೋತಾರೋ ಗೊತ್ತಿಲ್ಲ

ಸಂಚು : ಸರಿ ಬಿಡು ನಿಮ್ ಮರಾಠಿ ಗಲಾಟೆ ಎಲ್ಲಿ ತನಕ ಬಂತು

ಪಂಚು : ಇದರ ನಡುವೆ ಇನ್ನೂ ನೆನಪು ಇಡ್ಕೊಂಡಿದ್ಯಲ್ಲ ಗ್ರೇಟ್, ನೀನು ಬೆಳಿಗ್ಗೆ ಎಲ್ಲ ಹಿಂದೂ ಅಂತ ವಾದ ಮಾಡ್ತಿಯಾ, ಸಂಜೆಯಾದ್ರೆ ಕನ್ನಡಿಗ ಕನ್ನಡ ಅಂತ ನಡ್ಕೊತೀಯ ಅರ್ಥನೇ ಆಗಲ್ಲ ನಿನ್ನ ರೂಟು

ಸಂಚು : ಸಮಯ ಬಂದಾಗ ಗೊತ್ತಾಗುತ್ತೆ ಬಿಡು..

ಪಂಚು : ವಿಧಾನ ಸೌದದ ಆವರಣದಲ್ಲಿರುವ ಭುವನೇಶ್ವರಿ ತಾಯಿಯ ಪ್ರತಿಮೆಯಲ್ಲಿ ನಾವು ಯಾವಾಗ ಹಳದಿ ಕೆಂಪು ಬಣ್ಣದ ಬಾವುಟ ನೋಡೋದು ಇನ್ನೂ ಎಷ್ಟೋ ದಿನ ಬೇಕು ಅವರಿಗೆ..

ಸಂಚು : ಹೌದು ನಾನು ಕೇಳ್ಬೇಕು ಅನ್ಕೊಂಡೆ, ಭುವನೇಶ್ವರಿ ತಾಯಿಯು ಹಿಡಿದು ಕೊಂಡಿರುವ ಧ್ವಜಕ್ಕೆ ಏನಿಕ್ಕೆ ಇನ್ನೂ ಕನ್ನಡ ಬಾವುಟದ ಬಣ್ಣ ಹಚ್ಚಿಲ್ಲ, ಬಣ್ಣ ಏನಾದ್ರು ವಿದೇಶದಿಂದ ತರಿಸಬೇಕೆನೋ.

ಪಂಚು : ಏನೋ ಗೊತ್ತಿಲ್ಲ, ಬಿಡು, ಧನ್ಯವಾದಗಳು ನಿನ್ನ ಕನ್ನಡ ಅಭಿಮಾನಕ್ಕೆ,

ಸಂಚು : ಲೋ ನಾನು ಕನ್ನಡಿಗನೇ ಕಣೋ

ಪಂಚು : ಧರ್ಮದ ಅಜೆಂಡಾಗಳೇ ಬೇರೆ ಭಾಷೆಯ ಅಜೆಂಡಾಗಳೇ ಬೇರೆ ಕಣೋ..

ಸಂಚು : ಸರಿ ಬುಡು…

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ