ರಾಜ್ಯ ಸರ್ಕಾರದ ಚಾಲೆಂಜಿಂಗ್ ಫಂಡ್ ಅಭಿಯಾನದಲ್ಲಿ ಮಂಡ್ಯ ಜಿಲ್ಲೆಯು ಮೊದಲ ಸ್ಥಾನ ಪಡೆದಿದ್ದು, ಇದಕ್ಕೆ ಸಹಕರಿಸಿದ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಹಾಗೂ ಎಲ್ಲಾ ಬ್ಯಾಂಕಿನ ಅಧಿಕಾರಿಗಳಿಗೆ ಅಭಿನಂದನೆ ಗಳೂ ಎಂದು ಮಂಡ್ಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಆರ್ ನಂದಿನಿ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿಗೆ ಬ್ಯಾಂಕ್ ಆಫ್ ಬರೋಡ ಆರ್ ಸೆಟಿ ಸಭಾಂಗಣದಲ್ಲಿ ನಡೆದ ಡಿಸಿಸಿ- ಡಿಎಲ್ಆರ್ ಸಿ ಬ್ಯಾಂಕ್ ಗಳ ಪ್ರಗತಿ ಪರಿಶೀಲನ ಸಭೆಯಲ್ಲಿ ಅವರು ಮಾತನಾಡಿ 2025- 26 ನೇ ಸಾಲಿನ ಮೊದಲ ತ್ರೈ ಮಾಸಿಕದಲ್ಲಿ 107% ಪ್ರಗತಿ ಸಾಧಿಸಿರುವುದು ಉತ್ತಮವಾಗಿದೆ. ಮುಂದಿನ ದಿನದಲ್ಲಿ ಇದೆ ರೀತಿಯ ಪ್ರಗತಿ ಸಾಧಿಸಬೇಕು. ಮುಂದಿನ ತ್ರೈ ಮಾಸಿಕದಲ್ಲೂ ಇದೇ ರೀತಿ ಸಾಲ ವಿತರಣೆಯಲ್ಲಿ ಪ್ರಗತಿಯನ್ನು ಸಾಧಿಸಬೇಕು ಎಂದು ನಿರ್ದೇಶಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕರಾದ ಅರುಣ್ ಕುಮಾರ್ ಮಾತನಾಡಿ 2025 -26 ನೇ ಸಾಲಿನಲ್ಲಿ ಆದ್ಯತ ವಲಯದಲ್ಲಿ ಎಲ್ಲಾ ಬ್ಯಾಂಕುಗಳ ಪ್ರಗತಿಯನ್ನು ತಿಳಿಸಿದರು.
ಮಂಡ್ಯ ಜಿಲ್ಲೆಯ ಮೊದಲ ತ್ರೈ ಮಾಸಿಕದಲ್ಲಿ, ಆದ್ಯತಾ ವಲಯದ ಸಾಲ ವಿತರಣೆಯಲ್ಲಿ ರೂ.3346 ಕೋಟಿ (107%) ಪ್ರಗತಿ ಸಾಧಿಸಿದ್ದು, ಕೃಷಿ ವಲಯದಲ್ಲಿ ರೂ. 2464 ಕೋಟಿ, ಕೈಗಾರಿಕಾ ವಲಯ ದಲ್ಲಿ ರೂ. 652 ಕೋಟಿ ಹಾಗೂ ಇತರೆ ಸೇವಾ ವಲಯದಲ್ಲಿ ರೂ. 230 ಕೋಟಿ ಸಾಲವನ್ನು ನೀಡಲಾಗಿದೆ ಎಂದು ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಸಾಲದ ಯೋಜನೆಗೆ ನೀಡಿರುವ ಸಾಲದ ಬಗ್ಗೆ ಮಾಹಿತಿ ನೀಡಿದ್ದರು.
ಈ ಸಂದರ್ಭದಲ್ಲಿ ಆರ್ ಬಿ ಐ ನ ವ್ಯವಸ್ಥಾಪಕಿ ವಿಜಯಶ್ರೀ, ನಬಾರ್ಡ್ ವ್ಯವಸ್ಥಾಪಕರಾದ ಹರ್ಷಿತ, ಎಲ್ಲಾ ಬ್ಯಾಂಕಿನ ಅಧಿಕಾರಿಗಳು ಹಾಗೂ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದರು.




