Saturday, November 21, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಅಂತರಾಷ್ಟ್ರೀಯ ಮಹಿಳಾ ದಿನ ; 5ನೇ ಬಾರಿಗೆ ಮುಖ್ಯಶಿಕ್ಷಕರಿಂದ ರಕ್ತದಾನ

ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಂಡ್ಯ ತಾಲ್ಲೂಕಿನ ಚಿಕ್ಕಮಂಡ್ಯ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಹೆಚ್.ಎನ್.ದೇವರಾಜು ಅವರು ಮಂಡ್ಯ ಜಿಲ್ಲಾಸ್ಪತ್ರೆಯ ರಕ್ತನಿಧಿಯಲ್ಲಿ ಇಂದು 5ನೇ ಬಾರಿಗೆ ರಕ್ತದಾನ ಮಾಡುವ ಮಾನವೀಯತೆ ಮೆರೆಯುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

ರಕ್ತದಾನದ ನಂತರ ಮಾತನಾಡಿದ ದೇವರಾಜು ಅವರು, ತಾಯಿ ನಮ್ಮ ಜೀವನದ ಅವಿಭಾಜ್ಯವಾಗಿರುತ್ತಾರೆ. ಹೆಣ್ಣು ಪತ್ನಿಯಾಗಿ, ಮಗಳಾಗಿ, ಅಕ್ಕ-ತಂಗಿಯರಾಗಿ ಪುರುಷನ ಸಾಧನೆಗೆ ಬೆನ್ನೆಲುಬಾಗಿ ನಿಲ್ಲುತ್ತಾಳೆ, ಹಾಗಾಗಿ ಇಂತಹ ಸುಸಂದರ್ಭದಲ್ಲಿ ರಕ್ತದಾನ ಮಾಡುವ ಮೂಲಕ ಮಹಿಳೆಯರಿಗೆ ಗೌರವ ಸಲ್ಲಿಸುತ್ತಿದ್ದೇನೆ ಎಂದರು.

ಇಂದಿನ ಆಧುನಿಕ ರೋಗ-ರುಜಿನಗಳ ನಡುವೆ ಆರೋಗ್ಯವಂತರ ರಕ್ತ ಸಿಗುವುದೇ ಕಷ್ಟವಾಗಿರುವ ಈ ಸಂದರ್ಭದಲ್ಲಿ ಮತ್ತೊಂದು ಜೀವಕ್ಕೆ ನೆರವಾಗುವ ಉದ್ದೇಶದಿಂದ ರಕ್ತದಾನ ಮಾಡಲು ನಿರ್ಧರಿಸಿದೆ, ಇದು  ನಮ್ಮ ಶಾಲಾ ವಿದ್ಯಾರ್ಥಿಗಳು ಮಾದರಿಯಾಗಲಿದೆ ಎಂದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ